Sarabjot Singh: ಎರಡೆರಡು ಸರ್ಕಾರಿ ಉದ್ಯೋಗ ತಿರಸ್ಕರಿಸಿದ ಸರಬ್ಜೋತ್ ಸಿಂಗ್! ನೀಡಿದ ಕಾರಣವೇನು ಗೊತ್ತಾ?

|

Updated on: Aug 11, 2024 | 4:03 PM

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಟೀಮ್ ಶೂಟಿಂಗ್ ಸ್ಪರ್ಧೆಯಲ್ಲಿ ಮನು ಭಾಕರ್ ಅವರೊಂದಿಗೆ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟ ಹರ್ಯಾಣದ ಅಂಬಾಲಾದ ಧೀನ್ ಗ್ರಾಮದ ನಿವಾಸಿ ಸರಬ್ಜೋತ್ ಸಿಂಗ್ ಅವರಿಗೆ ಹರಿಯಾಣ ಸರ್ಕಾರ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಘೋಷಿಸಿದೆ. ಆದರೆ ಸರಬ್ಜೋತ್ ಮಾತ್ರ ಸರ್ಕಾರಿ ಉದ್ಯೋಗವನ್ನು ಸರಾಸಗಟಾಗಿ ತಿರಸ್ಕರಿಸಿದ್ದಾರೆ.

1 / 7
2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಒಟ್ಟು 6 ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ತನ್ನ ಒಲಿಂಪಿಕ್ಸ್ ಪ್ರಯಾಣವನ್ನು ಅಂತ್ಯಗೊಳಿಸಿದೆ. ಭಾರತ ಶೂಟಿಂಗ್, ಹಾಕಿ, ಕುಸ್ತಿ ಮತ್ತು ಅಥ್ಲೆಟಿಕ್ಸ್ ಕ್ರೀಡಾಕೂಟಗಳಲ್ಲಿ ಈ ಪದಕಗಳನ್ನು ಗೆದ್ದುಕೊಂಡಿತು. ಭಾರತಕ್ಕೆ ಪದಕ ತಂದುಕೊಟ್ಟ ಆಟಗಾರರ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

2 / 7
ಇದಲ್ಲದೆ ಪದಕ ವಿಜೇತ ಆಟಗಾರರಿಗೆ ಅವರವರ ರಾಜ್ಯ ಸರ್ಕಾರಗಳು ಗೌರವಧನವನ್ನೂ ನೀಡಿ ಗೌರವಿಸುತ್ತಿವೆ. ಇದಲ್ಲದೆ ಸರ್ಕಾರಿ ಉದ್ಯೋಗವನ್ನೂ ನೀಡುತ್ತಿವೆ. ಆದರೆ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಪದಕ ವಿಜೇತ ಆಟಗಾರನೊಬ್ಬ ರಾಜ್ಯ ಸರ್ಕಾರ ನೀಡಿದ ಎರಡೆರಡು ಸರ್ಕಾರಿ ಕೆಲಸವನ್ನು ನಿರಾಕರಿಸಿದ್ದಾನೆ. ಇದರ ಹಿಂದಿರುವ ಕಾರಣವನ್ನೂ ಆ ಅಥ್ಲೀಟ್ ನೀಡಿದ್ದಾರೆ.

3 / 7
ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಟೀಮ್ ಶೂಟಿಂಗ್ ಸ್ಪರ್ಧೆಯಲ್ಲಿ ಮನು ಭಾಕರ್ ಅವರೊಂದಿಗೆ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟ ಹರ್ಯಾಣದ ಅಂಬಾಲಾದ ಧೀನ್ ಗ್ರಾಮದ ನಿವಾಸಿ ಸರಬ್ಜೋತ್ ಸಿಂಗ್ ಅವರಿಗೆ ಹರಿಯಾಣ ಸರ್ಕಾರ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಘೋಷಿಸಿದೆ. ಆದರೆ ಸರಬ್ಜೋತ್ ಮಾತ್ರ ಸರ್ಕಾರಿ ಉದ್ಯೋಗವನ್ನು ಸರಾಸಗಟಾಗಿ ತಿರಸ್ಕರಿಸಿದ್ದಾರೆ.

4 / 7
ಸರಬ್ಜೋತ್ ಸಿಂಗ್ ರೈತರಾದ ಜತೀಂದರ್ ಸಿಂಗ್ ಮತ್ತು ಹರ್ದೀಪ್ ಕೌರ್ ಅವರ ಮಗ. ಚಂಡೀಗಢದಲ್ಲಿ ವ್ಯಾಸಂಗ ಮುಗಿಸಿದ್ದಾರೆ. ಇದಕ್ಕೂ ಮೊದಲು 2019ರ ಜೂನಿಯರ್ ವಿಶ್ವಕಪ್‌ನಲ್ಲಿ ಸರಬ್ಜೋತ್ ಸಿಂಗ್ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಅದೇ ಸಮಯದಲ್ಲಿ, ಸರಬ್ಜೋತ್ ಸಿಂಗ್ 2022 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಶೂಟಿಂಗ್ ತಂಡದ ಭಾಗವಾಗಿ ಚಿನ್ನದ ಪದಕವನ್ನು ಗೆದ್ದಿದ್ದರು. ಇದಲ್ಲದೆ ಏಷ್ಯನ್ ಗೇಮ್ಸ್‌ನಲ್ಲಿ ಸರಬ್ಜೋತ್ ಸಿಂಗ್ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟಿದ್ದಾರೆ.

5 / 7
ಇದೆಲ್ಲದರ ಜೊತೆಗೆ ಇದೀಗ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ಮೂಲಕ ಭಾರತ ಹೆಮ್ಮೆಪಡುವಂತೆ ಮಾಡಿದ ಸರಬ್ಜೋತ್ ಸಿಂಗ್ ಅವರಿಗೆ ಹರಿಯಾಣ ಮತ್ತು ಪಂಜಾಬ್ ಸರ್ಕಾರವು ಕ್ರೀಡಾ ಇಲಾಖೆಯಲ್ಲಿ ಉಪನಿರ್ದೇಶಕ ಹುದ್ದೆಯನ್ನು ನೀಡಿದೆ. ಇದರೊಂದಿಗೆ ಹರಿಯಾಣ ಸರ್ಕಾರದಿಂದ 2.50 ಕೋಟಿ ರೂಪಾಯಿ ನಗದು ಬಹುಮಾನವನ್ನೂ ನೀಡಲಾಗಿದೆ. ಹರಿಯಾಣ ಕ್ರೀಡಾ ಸಚಿವ ಸಂಜಯ್ ಸಿಂಗ್ ಈ ಬಹುಮಾನವನ್ನು ಘೋಷಿಸಿದ್ದಾರೆ.

6 / 7
ಆದರೆ 22 ವರ್ಷದ ಸರಬ್ಜೋತ್ ಸಿಂಗ್ ಅವರು ಹರಿಯಾಣ ಮತ್ತು ಪಂಜಾಬ್ ಸರ್ಕಾರಗಳು ನೀಡಿದ್ದ ಉದ್ಯೋಗಗಳನ್ನು ತಿರಸ್ಕರಿಸಿದ್ದಾರೆ. ಇದರ ಹಿಂದಿನ ಕಾರಣವನ್ನು ವಿವರಿಸಿದ ಸರಬ್ಜೋತ್ ಸಿಂಗ್, 'ಕೆಲಸ ಚೆನ್ನಾಗಿದೆ, ಆದರೆ ನಾನು ಈಗ ಅದನ್ನು ಮಾಡುವುದಿಲ್ಲ. ನಾನು ಮೊದಲು ನನ್ನ ಶೂಟಿಂಗ್‌ ಮೇಲೆ ಹೆಚ್ಚು ಗಮನ ಹರಿಸಲು ಬಯಸುತ್ತೇನೆ.

7 / 7
ನನ್ನ ಮನೆಯವರೂ ಕೂಡ ಸರ್ಕಾರಿ ಕೆಲಸವನ್ನು ಒಪ್ಪಿಕೊಳ್ಳುವಂತೆ ಹೇಳುತ್ತಿದ್ದಾರೆ. ಆದರೆ ನನಗೆ ಶೂಟಿಂಗ್ ಮೇಲೆ ಹೆಚ್ಚು ಆಸಕ್ತಿ ಇದೆ. ಹೀಗಾಗಿ ನಾನು ನನ್ನ ಕೆಲವು ನಿರ್ಧಾರಗಳಿಗೆ ವಿರುದ್ಧವಾಗಿ ಹೋಗಲು ಬಯಸುವುದಿಲ್ಲ. ಆದ್ದರಿಂದ ನಾನೀಗ ಸರ್ಕಾರಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

Published On - 4:00 pm, Sun, 11 August 24