Paris Olympics 2024: ಹ್ಯಾಟ್ರಿಕ್ ಪದಕ ಗೆಲ್ಲುವ ಅವಕಾಶ; ಮನು ಭಾಕರ್ ಮುಂದಿನ ಸ್ಪರ್ಧೆ ಯಾವಾಗ?

|

Updated on: Jul 30, 2024 | 3:33 PM

Paris Olympics 2024: ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್​ಗೆ 3 ಸ್ಪರ್ಧೆಗಳಲ್ಲಿ ಅರ್ಹತೆ ಪಡೆದಿದ್ದರು. ಈಗ ಅವರು ಆಗಸ್ಟ್ 2 ರಂದು 25 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಈವೆಂಟ್‌ನಲ್ಲಿ ಆಡಲಿದ್ದಾರೆ. ಈ ಪಂದ್ಯ ಆಗಸ್ಟ್ 2 ರಂದು ಮಧ್ಯಾಹ್ನ 12:30 ಕ್ಕೆ ನಡೆಯಲಿದೆ. ಮನು ಈ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಒಂದು ವೇಳೆ ಮನು ಪದಕ ಗೆಲ್ಲುವಲ್ಲಿ ಯಶಸ್ವಿಯಾದರೆ, ಇದು ಹೊಸ ದಾಖಲೆಯಾಗಲಿದೆ.

1 / 6
ಭಾರತದ ಮಹಿಳಾ ಶೂಟರ್ ಮನು ಭಾಕರ್ 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ . ಮನು ಭಾಕರ್ ಒಂದೇ ಒಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮನು ಈ ಹಿಂದೆ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದರು. ಈಗ ಅವರು ಸರಬ್ಜೋತ್ ಸಿಂಗ್ ಅವರೊಂದಿಗೆ ಟೀಮ್ ಈವೆಂಟ್‌ನಲ್ಲಿ ಮತ್ತೊಂದು ಕಂಚಿನ ಪದಕ ಗೆದ್ದಿದ್ದಾರೆ.

2 / 6
ಮನು ಭಾಕರ್ ಅವರ ಈ ಸಾಧನೆಗೆ ಇಡೀ ದೇಶವೇ ಸಂಭ್ರಮಿಸುತ್ತಿದೆ. ಆದರೆ ಮನು ಭಾಕರ್ ಮತ್ತೊಂದು ಪದಕ ಗೆಲ್ಲುವ ತಯಾರಿಯಲ್ಲಿದ್ದಾರೆ. ವಾಸ್ತವವಾಗಿ ಮನು ಭಾಕರ್ ಅವರು ಜುಲೈ 28 ರಂದು ತಮ್ಮ ಮೊದಲ ಪದಕವನ್ನು ಗೆದ್ದರು. ಈ ಗೆಲುವಿನೊಂದಿಗೆ ಭಾರತದ ಪದಕದ ಖಾತೆಯನ್ನೂ ತೆರೆದಿದ್ದರು.

3 / 6
ಈ ಮೂಲಕ ಮನು ಭಾಕರ್ ಅವರು ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಮನು 10 ಮೀಟರ್ ಏರ್ ಪಿಸ್ತೂಲ್‌ನ ಟೀಮ್ ಈವೆಂಟ್‌ನಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಕಂಚಿನ ಪದಕ್ಕೆ ಕೊರಳ್ಳೊಡಿದ್ದಾರೆ.

4 / 6
ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಜೋಡಿ ದಕ್ಷಿಣ ಕೊರಿಯಾ ತಂಡವನ್ನು 16-10 ಅಂತರದಿಂದ ಸೋಲಿಸಿ ಕಂಚಿನ ಪದಕವನ್ನು ಗೆದ್ದುಕೊಂಡಿತು. ಈ ಪದಕ ಗೆಲ್ಲುವ ಮೂಲಕ ಮನು ಒಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ 2 ಪದಕ ಗೆದ್ದ ಭಾರತದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

5 / 6
ಈ ಹಿಂದೆ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಸಾಧನೆ ಮಾಡಿದ್ದರು. ಆದರೆ ಅವರು ವಿವಿಧ ಆವೃತ್ತಿಗಳಲ್ಲಿ ಈ ಪದಕ ಗೆದ್ದಿದ್ದರು. ಸುಶೀಲ್ ಕುಮಾರ್ 2008ರಲ್ಲಿ ಕಂಚಿನ ಪದಕ ಹಾಗೂ 2012ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಹಾಗೆಯೇ ಪಿವಿ ಸಿಂಧು 2016ರಲ್ಲಿ ಬೆಳ್ಳಿ ಹಾಗೂ 2021ರಲ್ಲಿ ಕಂಚಿನ ಪದಕ ಗೆದ್ದಿದ್ದರು.

6 / 6
ಇನ್ನು ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್​ಗೆ 3 ಸ್ಪರ್ಧೆಗಳಲ್ಲಿ ಅರ್ಹತೆ ಪಡೆದಿದ್ದರು. ಈಗ ಅವರು ಆಗಸ್ಟ್ 2 ರಂದು 25 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಈವೆಂಟ್‌ನಲ್ಲಿ ಆಡಲಿದ್ದಾರೆ. ಈ ಪಂದ್ಯ ಆಗಸ್ಟ್ 2 ರಂದು ಮಧ್ಯಾಹ್ನ 12:30 ಕ್ಕೆ ನಡೆಯಲಿದೆ. ಮನು ಈ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಒಂದು ವೇಳೆ ಮನು ಪದಕ ಗೆಲ್ಲುವಲ್ಲಿ ಯಶಸ್ವಿಯಾದರೆ, ಇದು ಹೊಸ ದಾಖಲೆಯಾಗಲಿದೆ.

Published On - 3:30 pm, Tue, 30 July 24