ಫ್ಯಾಮಿಲಿ ಜೊತೆ ಖುಷಿಖುಷಿಯಾಗಿ ಫೋಟೋಶೂಟ್​ ಮಾಡಿಸಿದ ಶಾರುಖ್​ ಖಾನ್​

Updated on: Apr 18, 2023 | 6:46 PM

Shah Rukh Khan Family Photos: ಶಾರುಖ್​ ಖಾನ್​ ಅವರ ಅಭಿಮಾನಿಗಳ ವಲಯದಲ್ಲಿ ಈ ಫೋಟೋಗಳು ವೈರಲ್​ ಆಗಿವೆ. ನೆಚ್ಚಿನ ನಟನ ಫ್ಯಾಮಿಲಿ ಫೋಟೋ ಕಂಡು ಫ್ಯಾನ್ಸ್​ ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

1 / 5
ನಟ ಶಾರುಖ್​ ಖಾನ್​ ಅವರ ಬದುಕಿನಲ್ಲಿ ಈಗ ಸಂತಸ ಮನೆ ಮಾಡಿದೆ. ‘ಪಠಾಣ್​’ ಸಿನಿಮಾ ಸೂಪರ್​ ಹಿಟ್​ ಆದಮೇಲೆ ಅವರಿಗೆ ಡಿಮ್ಯಾಂಡ್​ ಹೆಚ್ಚಾಗಿದೆ. ಸದ್ಯ ಅವರು ಸಿನಿಮಾ ಕೆಲಸಗಳ ಜೊತೆಯಲ್ಲಿ ಫ್ಯಾಮಿಲಿಗೆ ಸಮಯ ನೀಡುತ್ತಿದ್ದಾರೆ.

ನಟ ಶಾರುಖ್​ ಖಾನ್​ ಅವರ ಬದುಕಿನಲ್ಲಿ ಈಗ ಸಂತಸ ಮನೆ ಮಾಡಿದೆ. ‘ಪಠಾಣ್​’ ಸಿನಿಮಾ ಸೂಪರ್​ ಹಿಟ್​ ಆದಮೇಲೆ ಅವರಿಗೆ ಡಿಮ್ಯಾಂಡ್​ ಹೆಚ್ಚಾಗಿದೆ. ಸದ್ಯ ಅವರು ಸಿನಿಮಾ ಕೆಲಸಗಳ ಜೊತೆಯಲ್ಲಿ ಫ್ಯಾಮಿಲಿಗೆ ಸಮಯ ನೀಡುತ್ತಿದ್ದಾರೆ.

2 / 5

ಶಾರುಖ್​ ಖಾನ್​ ಹಾಗೂ ಗೌರಿ ಖಾನ್​ ಅವರು ತಮ್ಮ ಕುಟುಂಬದ ಜೊತೆ ಫೋಟೋಶೂಟ್​ ಮಾಡಿಸಿದ್ದಾರೆ. ಮಕ್ಕಳಾದ ಅಬ್ರಾಮ್​, ಆರ್ಯನ್​ ಖಾನ್​, ಸುಹಾನಾ ಖಾನ್​ ಅವರು ಪೋಸ್​ ನೀಡಿದ್ದಾರೆ. ಈ ಫೋಟೋಗಳು ವೈರಲ್​ ಆಗಿವೆ.

3 / 5

ಗೌರಿ ಖಾನ್ ಅವರು ಒಳಾಂಗಣ ವಿನ್ಯಾಸಕಿಯಾಗಿ ಬ್ಯುಸಿ ಆಗಿದ್ದಾರೆ. ಪತಿಯ ಸಿನಿಮಾ ಪಯಣಕ್ಕೆ ಅವರು ಬೆಂಬಲವಾಗಿ ನಿಂತಿದ್ದಾರೆ. ಶಾರುಖ್​ ಖಾನ್​-ಗೌರಿ ಖಾನ್​ ದಂಪತಿಯ ಮಕ್ಕಳು ಕೂಡ ಈಗ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಆರಂಭಿಸಿದ್ದಾರೆ.

4 / 5

ಆರ್ಯನ್​ ಖಾನ್​ ಅವರು 2021ರಲ್ಲಿ ಡ್ರಗ್ಸ್​ ಪಾರ್ಟಿ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದರು. ಆದರೆ ಈಗ ಆರೋಪಮುಕ್ತರಾಗಿ ಹೊಸ ಜೀವನ ನಡೆಸುತ್ತಿದ್ದಾರೆ. ಫ್ಯಾಮಿಲಿ ಫೋಟೋದಲ್ಲಿ ಅವರು ತಂದೆಯ ಜೊತೆ ಪೋಸ್​ ನೀಡಿದ್ದಾರೆ.

5 / 5

ಸುಹಾನಾ ಖಾನ್​ ನಟಿಸಿದ ಮೊದಲ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಅಷ್ಟರಲ್ಲಾಗಲೇ ಅವರು ಫೇಮಸ್​ ಆಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಇದು ಶಾರುಖ್​ಗೆ ಹೆಮ್ಮೆ ತಂದಿದೆ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us