
ತಮಿಳುನಾಡಿನ ಚೆಪಾಕ್ ಮೈದಾನದಲ್ಲಿ ಫೆಬ್ರವರಿ 5ರಿಂದ ಆರಂಭವಾಗುವ ಮೊದಲ ಟೆಸ್ಟ್ಗೆ ಟೀಂ ಇಂಡಿಯಾ ಬರದ ಸಿದ್ದತೆ ಮಾಡಿಕೊಳ್ಳುತ್ತಿದೆ.

ಪಿತೃತ್ವ ರಜೆಯಿಂದ ಮರಳಿರುವ ನಾಯಕ ವಿರಾಟ್ ಕೊಹ್ಲಿ, ತಂಡದ ಸದಸ್ಯರಿಗೆ ಅಭ್ಯಾಸದ ವೇಳೆ ಕೆಲವೊಂದು ಟಿಪ್ಸ್ ನೀಡಿದರು.

ಯಂಗ್ ಸ್ಟಾರ್ ವಾಷಿಂಗ್ಟನ್ ಸುಂದರ್ ಜೊತೆ ಅನುಭವಿ ಸ್ಪಿನ್ನರ್ ಅಶ್ವಿನ್ ಕಾಣಿಸಿಕೊಂಡಿದ್ದು ಹೀಗೆ. ಆಸಿಸ್ ಪ್ರವಾಸದಲ್ಲಿ ಸುಂದರ್ ತೋರಿದ ಪ್ರದರ್ಶನ ಅಮೋಘವಾಗಿತ್ತು.

ಅಕ್ಸಾರ್ ಪಟೇಲ್

ವಿರಾಟ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಆಸಿಸ್ ವಿರುದ್ದ ಸರಣಿ ಗೆದ್ದು ಬೀಗಿತ್ತು. ಇದರಿಂದ ತಂಡದಲ್ಲಿ ನಾಯಕತ್ವದ ಬದಲಾವಣೆಯ ಕೂಗು ಕೇಳಿಬಂದಿತ್ತು. ಹೀಗಾಗಿ ಈ ಸರಣಿಯನ್ನು ಗೆದ್ದು ಕೊಹ್ಲಿ ತಮ್ಮ ನಾಯಕತ್ವದ ಸಾಮಥ್ರ್ಯವನ್ನು ತೋರಿಸಬೇಕಿದೆ.

ಟೀಂ ಇಂಡಿಯಾದ ಯಂಗ್ ಸ್ಟಾರ್ಗಳ ಜೊತೆ ರೋಹಿತ್ ಶರ್ಮ ಅಭ್ಯಾದ ಸಮಯದಲ್ಲಿ ಕಾಲ ಕಳೆದಿದ್ದು ಹೀಗೆ.

ಇತ್ತೀಚೆಗಷ್ಟೇ ತಂದೆಯ ಅಗಲಿಕೆಯಿಂದ ನೊಂದಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಭ್ಯಾಸದ ವೇಳೆ ಕಂಡದ್ದು ಹೀಗೆ.
Published On - 3:48 pm, Wed, 3 February 21