Pro Kabaddi League season 11: ಪ್ರೊ ಕಬಡ್ಡಿ ಲೀಗ್​ಗೆ ಡೇಟ್ ಫಿಕ್ಸ್: ಗುಮ್ಮೋಕೆ ಬೆಂಗಳೂರು ಬುಲ್ಸ್ ರೆಡಿ

|

Updated on: Sep 04, 2024 | 1:53 PM

ಪ್ರೊ ಕಬಡ್ಡಿ ಲೀಗ್​ನ 11ನೇ ಆವೃತ್ತಿಯು ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತವು ಅಕ್ಟೋಬರ್ 18 ರಿಂದ ಶುರುವಾಗಲಿದೆ. ಇನ್ನು ದ್ವಿತೀಯ ಹಂತದ ಪಂದ್ಯಗಳು ನವೆಂಬರ್ 10 ರಿಂದ ಪ್ರಾರಂಭವಾಗಲಿದ್ದು, ತೃತೀಯ ಹಂತದ ಮ್ಯಾಚ್​ಗಳು ಡಿಸೆಂಬರ್ 3 ರಿಂದ ಶುರುವಾಗಲಿದೆ. ಈ ಮೂರು ಹಂತದ ಪಂಧ್ಯಗಳು ಹೈದರಾಬಾದ್, ಪುಣೆ ಹಾಗೂ ನೋಯ್ಡಾದಲ್ಲಿ ನಡೆಯಲಿದೆ.

1 / 5
ಪ್ರೊ ಕಬಡ್ಡಿ ಲೀಗ್ ಸೀಸನ್ 11 ಆರಂಭಕ್ಕೆ ಡೇಟ್ ಫಿಕ್ಸ್  ಆಗಿದೆ. ಅದರಂತೆ ಅಕ್ಟೋಬರ್ 18 ರಿಂದ 11ನೇ ಆವೃತ್ತಿಯ ಕಬಡ್ಡಿ ಕದನ ಶುರುವಾಗಲಿದೆ. ಈ ಬಾರಿ ಕೂಡ ಒಟ್ಟು 12 ತಂಡಗಳು ಕಣಕ್ಕಿಳಿಯುತ್ತಿದ್ದು, ಮೊದಲ ಪಂದ್ಯಕ್ಕೆ ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದ ಆತಿಥ್ಯವಹಿಸಲಿದೆ.

2 / 5
ಇನ್ನು ಈ ಬಾರಿಯ ಪ್ರೊ ಕಬಡ್ಡಿ ಲೀಗ್​ ಅನ್ನು ಮೂರು ನಗರಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಮೊದಲ ಸುತ್ತಿನ ಪಂದ್ಯಗಳು ಹೈದರಾಬಾದ್​ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದರೆ, ದ್ವಿತೀಯ ಸುತ್ತಿನ ಪಂದ್ಯಗಳಿಗೆ ನೋಯ್ಡಾ ಒಳಾಂಗಣ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಇನ್ನು ಮೂರನೇ ಹಂತದ ಪಂದ್ಯಗಳು ಪುಣೆಯ ಬಾಲೆವಾಡಿ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದರೆ ಈ ಬಾರಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಬುಲ್ಸ್ ತಂಡದ ಯಾವುದೇ ಪಂದ್ಯಗಳಿರುವುದಿಲ್ಲ.

3 / 5
ಕಳೆದ ಸೀಸನ್ ಪ್ರೊ ಕಬಡ್ಡಿ ಲೀಗ್ ಅನ್ನು 12 ನಗರಗಳಲ್ಲಿ ಆಯೋಜಿಸಲಾಗಿತ್ತು. ಎಲ್ಲಾ ಫ್ರಾಂಚೈಸಿಗಳು ತಮ್ಮ ತವರು ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡಿದ್ದರು. ಆದರೆ ಈ ಬಾರಿ ಮೂರು ನಗರಗಳಲ್ಲಿ ಮಾತ್ರ ಟೂರ್ನಿಯನ್ನು ಆಯೋಜಿಸಲು ಪ್ರೊ ಕಬಡ್ಡಿ ಆಯೋಜಕರು ನಿರ್ಧರಿಸಿದ್ದಾರೆ. ಹೀಗಾಗಿ ತವರಿನಲ್ಲಿ ಬೆಂಗಳೂರು ಬುಲ್ಸ್ ತಂಡದ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಅಭಿಮಾನಿಗಳಿರುವುದಿಲ್ಲ.

4 / 5
ಇನ್ನು ಬಾರಿ ಬಲಿಷ್ಠ ಪಡೆಯನ್ನು ರೂಪಿಸಿರುವ ಬೆಂಗಳೂರು ಬುಲ್ಸ್ 2ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ. ಪ್ರೊ ಕಬಡ್ಡಿ ಲೀಗ್ ಸೀಸನ್ 6 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಬುಲ್ಸ್​ ಪಡೆಗೆ ಮತ್ತೆ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಮತ್ತೆ ಹಳೆಯ ಇತಿಹಾಸವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದೆ ಬೆಂಗಳೂರು ಬುಲ್ಸ್.

5 / 5
ಬೆಂಗಳೂರು ಬುಲ್ಸ್ ತಂಡ: ಸುಶೀಲ್, ಅಕ್ಷಿತ್, ಮಂಜೀತ್, ಪಂಕಜ್, ಅಜಿಂಕ್ಯ ಪವಾರ್, ಪರ್ದೀಪ್ ನರ್ವಾಲ್, ಪ್ರಮೋತ್ ಸೈಸಿಂಗ್, ಜೈ ಭಗವಾನ್, ಜತಿನ್, ಪೊನ್‌ಪರ್ತಿಬನ್ ಸುಬ್ರಮಣಿಯನ್, ಸೌರಭ್ ನಂದಲ್, ಆದಿತ್ಯ ಪೊವಾರ್, ಲಕ್ಕಿ ಕುಮಾರ್, ಪಾರ್ತೀಕ್, ಅರುಳ್ನಂತಬಾಬು, ರೋಹಿತ್ ಕುಮಾರ್, ಅಕ್ಷಿತ್, ಹಸುನ್ ಥೋಂಗ್‌ಕ್ರುಯಾ, ಚಂದ್ರನಾಯಕ್ ಎಂ, ನಿತಿನ್ ರಾವಲ್.