ತಮಿಳುನಾಡಿನ ತಿರುಚಿರಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡ ಹೀಗಿದೆ ನೋಡಿ

ರಶ್ಮಿ ಕಲ್ಲಕಟ್ಟ

Updated on: Jan 02, 2024 | 2:26 PM

ತಮಿಳುನಾಡಿನ ತಿರುಚಿರಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನವಾಗಿ ಅಭಿವೃದ್ಧಿಪಡಿಸಿರುವ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದು, ಟರ್ಮಿನಲ್ ವಾರ್ಷಿಕವಾಗಿ 44 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ

1 / 9
ತಮಿಳುನಾಡಿನ ತಿರುಚಿರಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನವಾಗಿ ಅಭಿವೃದ್ಧಿಪಡಿಸಿರುವ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಿದ್ದಾರೆ

ತಮಿಳುನಾಡಿನ ತಿರುಚಿರಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನವಾಗಿ ಅಭಿವೃದ್ಧಿಪಡಿಸಿರುವ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಿದ್ದಾರೆ

2 / 9

₹ 1,100 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಎರಡು ಹಂತದ ಟರ್ಮಿನಲ್ ವಾರ್ಷಿಕವಾಗಿ 44 ಲಕ್ಷ ಪ್ರಯಾಣಿಕರಿಗೆ ಮತ್ತು ಪೀಕ್ ಅವರ್‌ನಲ್ಲಿ ಸುಮಾರು 3,500 ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೊಂದಿದೆ

3 / 9

ಹೊಸದಾಗಿ ಅಭಿವೃದ್ಧಿಪಡಿಸಲಾದ ಟರ್ಮಿನಲ್ ಕಟ್ಟಡವು 60 ಚೆಕ್-ಇನ್ ಕೌಂಟರ್‌ಗಳು, ಐದು ಬ್ಯಾಗೇಜ್ ಕರೋಸಲ್, 60 ಆಗಮನ ಎಮಿಗ್ರೇಷನ್ ಕೌಂಟರ್‌ಗಳು ಮತ್ತು 44 ನಿರ್ಗಮನ ಎಮಿಗ್ರೇಷನ್ ಕೌಂಟರ್‌ಗಳನ್ನು ಹೊಂದಿದೆ.

4 / 9

ಕಟ್ಟಡದ ವಿನ್ಯಾಸವು ತಿರುಚಿರಾಪಳ್ಳಿಯ ಸಾಂಸ್ಕೃತಿಕ ರೂಪವನ್ನು ಅಳವಡಿಸಿಕೊಂಡಿದೆ. ಕೋಲಂ ಕಲೆಯಿಂದ ಹಿಡಿದು ಶ್ರೀರಂಗಂ ದೇವಾಲಯದ ಬಣ್ಣಗಳು ಮತ್ತು ಇತರ ಕಲಾ ಪ್ರಕಾರಗಳನ್ನು ಇಲ್ಲಿ ಕಾಣಬಹುದು.

5 / 9

ತಿರುಚಿರಾಪಳ್ಳಿ ವಿಮಾನ ನಿಲ್ದಾಣವು ಅಂತರರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯ ದೃಷ್ಟಿಯಿಂದ ತಮಿಳುನಾಡಿನ ಚೆನ್ನೈ ನಂತರ ಎರಡನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ.

6 / 9

ಈ ಟರ್ಮಿನಲ್ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ, ಉತ್ತಮ ಸಂಪರ್ಕದೊಂದಿಗೆ ಸುಗಮ ವಿಮಾನ ಪ್ರಯಾಣಕ್ಕೆ ಇದು ಕೊಡುಗೆ ನೀಡುತ್ತದೆ.

7 / 9

ಚಿತ್ರಕಲೆ, ಭಿತ್ತಿಚಿತ್ರಗಳಿಂದ ಕೂಡಿದ ಟರ್ಮಿನಲ್ ಕಟ್ಟಡದಲ್ಲಿರುವ ಕಲಾಕೃತಿಗಳಿಗಾಗಿ ಒಟ್ಟು 100 ಕಲಾವಿದರು ಕೆಲಸ ಮಾಡಿದ್ದು, 30 ದಿನಗಳಲ್ಲಿ ಕಲಾಕೃತಿಗಳನ್ನು ಪೂರ್ಣಗೊಳಿಸಿದ್ದಾರೆ.

8 / 9

ತಿರುಚಿರಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಸುಮಾರು 75000 ಚದರ ಮೀಟರ್‌ ವ್ಯಾಪ್ತಿ ಹೊಂದಿದೆ

9 / 9

ಅತ್ಯಾಧುನಿಕ ಸೌಕರ್ಯಗಳು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ವೈಶಿಷ್ಟ್ಯಗಳನ್ನು ಹೊಂದಿದೆ ಈ ಹೊಸ ಟರ್ಮಿನಲ್

Loading...
Unable to load recommendations.
Follow Us