
ತಮಿಳುನಾಡಿನ ತಿರುಚಿರಾಪಳ್ಳಿಯ ಶ್ರೀರಂಗಂನಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ದೇವಸ್ಥಾನದ ಆನೆಗೆ ಆಹಾರ ನೀಡಿ ಆಶೀರ್ವಾದ ಪಡೆದರು

ಶ್ರೀರಂಗಂನಲ್ಲಿರುವ ವಿಗ್ರಹವನ್ನು ಮೂಲತಃ ಭಗವಾನ್ ರಾಮ ಮತ್ತು ಅವನ ಪೂರ್ವಜರು ಪೂಜಿಸುತ್ತಿದ್ದರು ಎಂದು ನಂಬಲಾಗಿದೆ.

ಕಾವೇರಿ ಮತ್ತು ಕೊಳ್ಳಿಡಂ ನದಿಗಳ ಸಂಗಮದಲ್ಲಿರುವ ಶ್ರೀರಂಗಂ ದೇವಾಲಯವು ತಮಿಳುನಾಡಿನ ಪುರಾತನ ವೈಷ್ಣವ ದೇವಾಲಯವಾಗಿದೆ

ದೇವಾಲಯದಲ್ಲಿರುವ ರಂಗನಾಯಕಿ ತಾಯಾರ್, ಗರುಡಾಳ್ವಾರ್, ಚಕ್ರತಾಳ್ವಾರ್ ಮತ್ತು ರಾಮಾನುಜರ್ ದೇಗುಲಗಳಲ್ಲಿಯೂ ಮೋದಿ ಪೂಜೆ

ಅಗ್ನಿತೀರ್ಥದಲ್ಲಿ ಪುಣ್ಯಸ್ನಾನ ಮಾಡಿದ ಪ್ರಧಾನಿ

ಪುಣ್ಯ ಸ್ನಾನ ನಂತರ ದೇವಸ್ಥಾನದಲ್ಲಿ ರಾಮಾಯಣ ಪಥ ಮತ್ತು ಭಜನಾ ಸಂಧ್ಯಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದಾರೆ.

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ದ್ವೀಪದಲ್ಲಿರುವ ಶ್ರೀ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಮೋದಿ

ದೇಗುಲದಲ್ಲಿ ನಡೆಯುವ ‘ಭಜನೆ’ಯಲ್ಲಿಯೂ ಮೋದಿ ಭಾಗವಹಿಸಿದ್ದಾರೆ

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ ಅವರು ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕೇರಳದ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.