ಸಾನಿಯಾ ಮಿರ್ಜಾ- ಶೋಯೆಬ್ ಮಲಿಕ್.. ಈ ಇಬ್ಬರಲ್ಲಿ ಯಾರು ಹೆಚ್ಚು ಸಿರಿವಂತರು?
Sania Mirza Shoaib Malik Net Worth: ಶೋಯೆಬ್ರಿಂದ ಬೇರ್ಪಟ್ಟಿರುವ ಸಾನಿಯಾ ಮಿರ್ಜಾ ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. ಸಾನಿಯಾ ಹಲವು ವರ್ಷಗಳ ಕಾಲ ಟೆನಿಸ್ ಆಡುವಾಗ ಭಾರತವನ್ನು ಪ್ರತಿನಿಧಿಸಿದ್ದರು. ಟೆನಿಸ್ ಆಡುವ ಮೂಲಕ ವರ್ಷಕ್ಕೆ ಸುಮಾರು 3 ಕೋಟಿ ರೂಪಾಯಿ ಗಳಿಸುತ್ತಿದ್ದರು.
Updated on: Jan 20, 2024 | 5:49 PM

ಕಳೆದ ಕೆಲವು ದಿನಗಳಿಂದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ನಡುವಿನ ವೈಯಕ್ತಿಕ ಬದುಕಿ ಬಗ್ಗೆ ಎದ್ದಿದ್ದ ಹಲವು ವದಂತಿಗಳ ನಡುವೆಯೇ ಶೋಯೆಬ್ ಮಲಿಕ್ ಮೂರನೇ ಮದುವೆಯ ಮೂಲಕ ಸುದ್ದಿಯಾಗಿದ್ದಾರೆ.

ಆದರೆ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ತಮ್ಮ ವಿಚ್ಛೇದನದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. 2010 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಂಪತಿಗಳಿಗೆ ಇಜಹಾನ್ ಎಂಬ ಮಗನಿದ್ದು, ಸಾನಿಯಾ ಜೊತೆ ವಾಸಿಸುತ್ತಿದ್ದಾರೆ.

ಸದ್ಯದ ವರದಿ ಪ್ರಕಾರ ಈ ಇಬ್ಬರು ದಂಪತಿಗಳು ತಮ್ಮ ವೈವಾಹಿಕ ಜೀವನದಿಂದ ಬೇರೆ ಬೇರೆಯಾದರು ಮಗನ ಜವಾಬ್ದಾರಿಯನ್ನು ಈ ಇಬ್ಬರೇ ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ಈ ಇಬ್ಬರೂ ತಮ್ಮ ತಮ್ಮ ದೇಶಗಳ ಲೆಜೆಂಡರಿ ಆಟಗಾರರಾಗಿದ್ದು, ಇಬ್ಬರ ಬಳಿಯೂ ಕೋಟಿಗಟ್ಟಲೆ ಆಸ್ತಿ ಹೊಂದಿದ್ದಾರೆ.

ಸದ್ಯ ಶೋಯೆಬ್ರಿಂದ ಬೇರ್ಪಟ್ಟಿರುವ ಸಾನಿಯಾ ಮಿರ್ಜಾ ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. ಸಾನಿಯಾ ಹಲವು ವರ್ಷಗಳ ಕಾಲ ಟೆನಿಸ್ ಆಡುವಾಗ ಭಾರತವನ್ನು ಪ್ರತಿನಿಧಿಸಿದ್ದರು. ಟೆನಿಸ್ ಆಡುವ ಮೂಲಕ ವರ್ಷಕ್ಕೆ ಸುಮಾರು 3 ಕೋಟಿ ರೂಪಾಯಿ ಗಳಿಸುತ್ತಿದ್ದರು.

ಕ್ರೀಡೆಯ ಹೊರತಾಗಿ, ಸಾನಿಯಾ ಹಲವಾರು ಬ್ರಾಂಡ್ ಅಂಬಾಸಿಡರ್ ಆಗುವ ಮೂಲಕ ಸಾಕಷ್ಟು ಹಣವನ್ನು ಗಳಿಸುತ್ತಿದ್ದಾರೆ. ಇದರೊಂದಿಗೆ ಸಾನಿಯಾ ಮಿರ್ಜಾ ಅವರು ತೆಲಂಗಾಣ ರಾಜ್ಯದ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ ಮತ್ತು ಅನೇಕ ಉನ್ನತ ಬ್ರಾಂಡ್‌ಗಳ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಸಾನಿಯಾ, ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿಯೂ ಆಗಿದ್ದು, ಈ ಗೌರವವನ್ನು ಪಡೆದ ಮೊದಲ ದಕ್ಷಿಣ ಏಷ್ಯಾದ ಮಹಿಳೆಯಾಗಿದ್ದಾರೆ.

ಇನ್ನು ಆಸ್ತಿಯ ವಿಚಾರಕ್ಕೆ ಬರುವುದಾದರೆ.. ಸಾನಿಯಾ ವಾರ್ಷಿಕವಾಗಿ ಕ್ರೀಡೆಯಿಂದ 3 ಕೋಟಿ ರೂ. ಮತ್ತು ಜಾಹೀರಾತಿನಿಂದ 25 ಕೋಟಿ ರೂ. ಸಂಪಾದಿಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಸುಮಾರು 13 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಮನೆ ಹೊಂದಿದ್ದಾರೆ. ಇದಲ್ಲದೆ, ಅವರು ದುಬೈನಲ್ಲಿ ದ್ವೀಪದಲ್ಲಿ ನಿರ್ಮಿಸಲಾದ ಐಷಾರಾಮಿ ಮನೆಯನ್ನು ಸಹ ಹೊಂದಿದ್ದಾರೆ.

ಸಾನಿಯಾ ತನ್ನದೇ ಆದ ಟೆನಿಸ್ ಅಕಾಡೆಮಿಯನ್ನು ಸಹ ಹೊಂದಿದೆ. ಇತರ ಅಥ್ಲೀಟ್‌ಗಳಂತೆ ಸಾನಿಯಾ ಕೂಡ ಐಷಾರಾಮಿ ಕಾರುಗಳ ಕ್ರೇಜ್ ಹೊಂದಿದ್ದು, ಸಾನಿಯಾ ಅವರ ಕಾರು ಸಂಗ್ರಹದಲ್ಲಿ ರೇಂಜ್ ರೋವರ್, ಮರ್ಸಿಡಿಸ್ ಬೆಂಜ್, ಆಡಿ, ಬಿಎಂಡಬ್ಲ್ಯು ಸರಣಿಯ ಕಾರುಗಳಿವೆ.

ಭಾರತದ ಲೆಜೆಂಡರಿ ಟೆನಿಸ್ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಸಾನಿಯಾ ಮಿರ್ಜಾ ಅವರ ನಿವ್ವಳ ಮೌಲ್ಯದ ಬಗ್ಗೆ ಹೇಳುವುದಾದರೆ, ಅವರು ಸುಮಾರು 25 ಮಿಲಿಯನ್ ಡಾಲರ್ ಅಂದರೆ ಸುಮಾರು 200 ಕೋಟಿ ರೂಪಾಯಿಗಳ ಒಡತಿಯಾಗಿದ್ದಾರೆ.

ಸಾನಿಯಾ ಮಿರ್ಜಾ ಅವರಂತೆ, ಅವರ ಪತಿ ಶೋಯೆಬ್ ಮಲಿಕ್ ಕೂಡ ಪಾಕಿಸ್ತಾನದ ಅಗ್ರ ಕ್ರೀಡಾಪಟುಗಳಲ್ಲಿ ಒಬ್ಬರು. ಶೋಯೆಬ್ ಮಲಿಕ್ ಅವರ ನಿವ್ವಳ ಮೌಲ್ಯವು ಸಾನಿಯಾ ಮಿರ್ಜಾ ಅವರ ನಿವ್ವಳ ಮೌಲ್ಯಕ್ಕೆ ಸಮನಾಗಿದೆ.

ಮಾಧ್ಯಮ ವರದಿಗಳ ಪ್ರಕಾರ ಶೋಯೆಬ್ ಅವರ ನಿವ್ವಳ ಮೌಲ್ಯ 28 ಮಿಲಿಯನ್ ಡಾಲರ್ ಅಂದರೆ ಸುಮಾರು 228 ಕೋಟಿ ರೂಪಾಯಿ ಆಗಿದೆ. ಅವರ ಆದಾಯದ ಹೆಚ್ಚಿನ ಭಾಗವು ಕ್ರೀಡೆಯಿಂದ ಬರುತ್ತದೆ. ಇದಲ್ಲದೆ, ಶೋಯೆಬ್ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದಲೂ ಸಾಕಷ್ಟು ಗಳಿಸಿದ್ದಾರೆ.




