ಲಾವೋಸ್‌ನಲ್ಲಿ ಭಾರತೀಯ ಕರಕುಶಲತೆ ಅನಾವರಣ; ಜಾಗತಿಕ ನಾಯಕರಿಗೆ ವಿಶೇಷ ಉಡುಗೊರೆ ನೀಡಿದ ಮೋದಿ
ಲಾವೋಸ್‌ನಲ್ಲಿ ಆಸಿಯಾನ್- ಭಾರತ ಶೃಂಗಸಭೆಯಲ್ಲಿ ಭಾಗವಹಿಸಲು ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಜಪಾನ್, ನ್ಯೂಜಿಲೆಂಡ್, ಥೈಲ್ಯಾಂಡ್ ಮುಂತಾದ ದೇಶಗಳ ನಾಯಕರನ್ನು ಭೇಟಿಯಾಗಿದ್ದಾರೆ. ಈ ವೇಳೆ ಭಾರತದ ಸಂಸ್ಕೃತಿಯನ್ನು ಬಿತ್ತರಿಸುವ ಹಲವು ಕಲಾತ್ಮಕ ಉಡುಗೊರೆಗಳನ್ನು ಮೋದಿ ನೀಡಿದ್ದಾರೆ.
1 / 7
ಪ್ರಧಾನಿ ನರೇಂದ್ರ ಮೋದಿ ಅವರು ಲಾವೋಸ್‌ಗೆ ಭೇಟಿ ನೀಡಿದ್ದಾರೆ. ಈ ಭೇಟಿಯ ಎರಡನೇ ದಿನವಾದ ಶುಕ್ರವಾರ ಲಾವೋಸ್‌ನಲ್ಲಿ ನಡೆಯುತ್ತಿರುವ 21ನೇ ಆಸಿಯಾನ್ ಭಾರತ ಮತ್ತು 19 ನೇ ಪೂರ್ವ ಏಷ್ಯಾ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು. ಆಸಿಯಾನ್ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಈ ಸಮಾವೇಶವನ್ನು ನಡೆಸಲಾಗುತ್ತಿದೆ. ಈ ಶೃಂಗಸಭೆಯಲ್ಲಿ 10 ASEAN ಸದಸ್ಯ ರಾಷ್ಟ್ರಗಳು ಮತ್ತು 8 ಪಾಲುದಾರ ರಾಷ್ಟ್ರಗಳು ಭಾಗವಹಿಸಿದ್ದವು. ಅವರಿಗೆ ಮೋದಿ ನೀಡಿರುವ ಉಡುಗೊರೆಗಳ ಬಗ್ಗೆ ಮಾಹಿತಿ ಇಲ್ಲಿದೆ.
2 / 7
ಜಪಾನ್ ಪ್ರಧಾನಿಗೆ ಬೆಳ್ಳಿ ನಕ್ಕಾಶಿ ಕುಸುರಿ ವರ್ಕ್ ಇರುವ ನವಿಲಿನ ಮೂರ್ತಿಯನ್ನು ನೀಡಲಾಗಿದೆ. ಈ ಸೊಗಸಾದ ಬೆಳ್ಳಿಯ ನವಿಲು ಶಿಲ್ಪವು ಸಂಕೀರ್ಣವಾದ ನಕ್ಕಾಶಿ (ಕೆತ್ತನೆ) ಕೆಲಸದಿಂದ ಅಲಂಕರಿಸಲ್ಪಟ್ಟಿದೆ. ಇದು ಭಾರತದ ಪಶ್ಚಿಮ ಬಂಗಾಳ ಮೂಲದ್ದಾಗಿದೆ. ಕರಕುಶಲತೆಯು ಈ ಸಾಂಪ್ರದಾಯಿಕ ಲೋಹದ ಕಲಾತ್ಮಕತೆಯ ವಿಶಿಷ್ಟ ಲಕ್ಷಣವಾಗಿದೆ. ಇದರಲ್ಲಿ ನವಿಲನ್ನು ಸಮಚಿತ್ತದ ಸ್ಥಿತಿಯಲ್ಲಿ ಚಿತ್ರಿಸಲಾಗಿದೆ. ಅದರ ಕುತ್ತಿಗೆಯು ಆಕರ್ಷಕವಾಗಿ ಮೇಲಕ್ಕೆ ಬಾಗಿರುತ್ತದೆ ಮತ್ತು ಅದರ ಗರಿಗಳನ್ನು ವಿಸ್ತಾರವಾಗಿ ಹರಡಿದಂತೆ ವಿನ್ಯಾಸಗೊಳಿಸಲಾಗಿದೆ.
3 / 7
ಲಾವೋ ಪಿಡಿಆರ್ ಪ್ರಧಾನಿ ಸೋನೆಕ್ಸೆ ಸಿಫಾಂಡೋನ್ ಅವರಿಗೆ ಪಿಎಂ ನರೇಂದ್ರ ಮೋದಿ ಕಡಂ ವುಡ್ ಬಣ್ಣದ ಬುದ್ಧನ ತಲೆಯ ಉಬ್ಬು ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಡಮ್ವುಡ್ ಬಣ್ಣದ ಉಬ್ಬುಶಿಲೆಯ ಬುದ್ಧನ ತಲೆಯು ಅದ್ಭುತವಾದ ಕಲಾಕೃತಿಯಾಗಿದ್ದು ಅದು ಸಾಂಪ್ರದಾಯಿಕ ಕರಕುಶಲತೆಯನ್ನು ವಿವರಿಸುತ್ತದೆ. ಈ ಸೊಗಸಾದ ಶಿಲ್ಪವು ಪ್ರಶಾಂತತೆ ಮತ್ತು ಜ್ಞಾನೋದಯದ ಸಾರವನ್ನು ಸೆರೆಹಿಡಿಯುತ್ತದೆ, ಇದು ಯಾವುದೇ ಆಧ್ಯಾತ್ಮಿಕ ಅಥವಾ ಅಲಂಕಾರಿಕತೆಗೆ ಪರಿಪೂರ್ಣ ಆಯ್ಕೆಯಾಗಿದೆ. ಇದನ್ನು ಉತ್ತಮ ಗುಣಮಟ್ಟದ ಕಡಮ್‌ವುಡ್‌ನಿಂದ ರಚಿಸಲಾಗಿದೆ.
4 / 7
ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್ ಅವರಿಗೆ ಅಮೂಲ್ಯವಾದ ಸ್ಟೋನ್ ವರ್ಕ್ಗಳಿಂದ ಕೂಡಿದ ಝಲಾರ್ ಕುಸುರಿಯ ಸೊಗಸಾದ ಬೆಳ್ಳಿ ದೀಪಗಳನ್ನು ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ಝಲಾರ್ ಕುಸುರಿ ಮತ್ತು ಅಮೂಲ್ಯವಾದ ಸ್ಟೋನ್ಗಳನ್ನು ಹೊಂದಿರುವ ಈ ಬೆಳ್ಳಿಯ ದೀಪದ ಜೋಡಿಯು ಭಾರತೀಯ ಕರಕುಶಲತೆಯ ಪ್ರತೀಕವಾಗಿದೆ. ಆ್ಯಂಟಿಕ್ ಕಲಾಕೃತಿಯಾದ ಇದನ್ನು ಮಹಾರಾಷ್ಟ್ರದ ಕುಶಲಕರ್ಮಿ ತಯಾರಿಸಿದ್ದಾರೆ.
5 / 7
ಆಸಿಯಾನ್ ಶೃಂಗಸಭೆಯಲ್ಲಿ ಭಾಗಿಯಾಗಿದ್ದ ಥೈಲ್ಯಾಂಡ್ ಪ್ರಧಾನಿ ಪೇಟೊಂಗ್ಟಾರ್ನ್ ಶಿನಾವತ್ರಾ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ "ಹಿಮಾಲಯನ್ ಚಾರ್ಮ್" ಎಂಬ ವಿಶಿಷ್ಟವಾದ ಭಾರತೀಯ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಂಕೀರ್ಣವಾದ ಪೋರ್ ಕೆತ್ತನೆಗಳೊಂದಿಗೆ ಲಡಾಕ್‌ನಲ್ಲಿ ವಿನ್ಯಾಸಗೊಳಿಸಲಾದ ಈ ಮರದ ಟೀಪಾಯಿ ವಿಶೇಷವಾದ ಬಣ್ಣಗಳಿಂದ ಕೂಡಿದೆ. ಅದರ ಮೇಲೊಂದು ಕಲಾತ್ಮಕವಾದ ಹೂಜಿ ಕೂಡ ಇದೆ. ಇದು ಸಾಂಪ್ರದಾಯಿಕ ಕರಕುಶಲತೆ ಮತ್ತು ಕಲಾತ್ಮಕತೆಯ ಪರಿಪೂರ್ಣ ಮಿಶ್ರಣವಾಗಿದೆ. ಲಡಾಖ್‌ನ ಸಾಂಸ್ಕೃತಿಕ ಪರಂಪರೆಯನ್ನು ಇದು ಸಾರುತ್ತದೆ.
6 / 7
ಹಾಗೇ, ಲಾವೋ ಪಿಡಿಆರ್ ಪ್ರಧಾನಿ ಸೋನೆಕ್ಸೆ ಸಿಫಾಂಡೋನ್ ಅವರ ಪತ್ನಿ ವಂದರಾ ಸಿಫಂಡೋನ್ ಅವರಿಗೆ ರಾಧಾ-ಕೃಷ್ಣನ ಥೀಮ್ ಹೊಂದಿರುವ ಮಲಾಕೈಟ್ ಮತ್ತು ಒಂಟೆ ಬೋನ್ ಬಾಕ್ಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉಡುಗೊರೆಯಾಗಿ ನೀಡಿದರು. ಈ ಪೆಟ್ಟಿಗೆಯು ಮಲಾಕೈಟ್ ಮತ್ತು ಒಂಟೆ ಮೂಳೆಯನ್ನು ಸೇರಿಸಿ ಮಾಡಲಾದ ವಿಶಿಷ್ಟವಾದ ಕಲಾಕೃತಿಯಾಗಿದೆ.
7 / 7
ಲಾವೋಸ್ ಪಿಡಿಆರ್ ಅಧ್ಯಕ್ಷ ಥೋಂಗ್ಲಾನ್ ಸಿಸೌಲಿತ್ ಅವರಿಗೆ ತಮಿಳುನಾಡಿನ ಕಲಾಕೃತಿಯಾದ ಮಿನಾ ವರ್ಕ್‌ನೊಂದಿಗೆ ವಿಂಟೇಜ್ ಬ್ರಾಸ್ ಬುದ್ಧನನ್ನು ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಂಟೇಜ್ ಹಿತ್ತಾಳೆಯ ಬುದ್ಧನ ಪ್ರತಿಮೆಯು ಮಿನಾ (ಎನಾಮೆಲ್) ಕುಸುರಿಯಿಂದ ಅಲಂಕರಿಸಲ್ಪಟ್ಟಿದೆ. ನುರಿತ ಕುಶಲಕರ್ಮಿಗಳಿಂದ ರಚಿಸಲಾದ ಈ ಕಲಾಕೃತಿ ದಕ್ಷಿಣ ಭಾರತದ ಕರಕುಶಲತೆ ಮತ್ತು ಬೌದ್ಧ ತತ್ತ್ವಶಾಸ್ತ್ರದ ಸಾರವನ್ನು ಒಳಗೊಂಡಿದೆ.
Published On - 3:33 pm, Fri, 11 October 24