ಈ ವಿಚಾರದಲ್ಲಿ ಟೀಂ ಇಂಡಿಯಾ ಎರಡನೇ ಸ್ಥಾನದಲ್ಲಿದೆಯಾದರೂ, ಉಗಾಂಡದ ದಾಖಲೆಯನ್ನು ಮುರಿಯುವಲ್ಲಿ ಕೂದಲೆಳೆ ಅಂತರರದಲ್ಲಿ ವಿಫಲವಾಗಿತ್ತು. 2022 ರಲ್ಲಿ ಟೀಂ ಇಂಡಿಯಾ ಒಟ್ಟು 28 ಟಿ20 ಪಂದ್ಯಗಳನ್ನು ಗೆದ್ದುಕೊಂಡಿತ್ತು. ಈ ಎರಡು ತಂಡಗಳ ನಂತರ, ತಾಂಜಾನಿಯಾ ತಂಡವು 2022 ರಲ್ಲಿ 21 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಗೆಲ್ಲುವ ಮೂಲಕ ಮೂರನೇ ಸ್ಥಾನದಲ್ಲಿದೆ. ಇದೀಗ ಈ ಪಟ್ಟಿಯಲ್ಲಿ ಟೀಂ ಇಂಡಿಯಾ ಮತ್ತೆ ನಾಲ್ಕನೇ ಸ್ಥಾನಕ್ಕೆ ಬಂದಿದೆ.