ಅತಿ ಕಡಿಮೆ ಬೆಲೆಯ ಬೆಸ್ಟ್ 5G ಫೋನ್ ಪೋಕೋ M6 ಪ್ರೊ ಮಾರಾಟಕ್ಕೆ ಕ್ಷಣಗಣನೆ: ಭರ್ಜರಿ ಸೇಲ್ ಖಚಿತ

Updated on: Aug 08, 2023 | 7:33 PM

POCO M6 Pro 5G First Sale: ಪೋಕೋ M6 ಪ್ರೊ 5G ಫೋನ್ ಆಗಸ್ಟ್ 9 ಮಧ್ಯಾಹ್ನ 12 ಗಂಟೆಯಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ ಮೂಲಕ ಸೇಲ್ ಕಾಣಲಿದೆ. ಇದು ಪವರ್ ಬ್ಲಾಕ್ ಮತ್ತು ಫಾರೆಸ್ಟ್ ಗ್ರೀನ್ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿದೆ.

1 / 8
ಭಾರತದಲ್ಲಿ 5G ಯುಗ ಆರಂಭವಾದ ಬಳಿಕ 5ಜಿ ಬೆಂಬಲ ಪಡೆದುಕೊಂಡಿರುವ ಸ್ಮಾರ್ಟ್​ಫೋನ್​ಗಳ ಬಿಡುಗಡೆ ಸಂಖ್ಯೆ ಏರುತ್ತಿದೆ. ವಿಶೇಷ ಎಂದರೆ ಕೆಲ 5G ಸ್ಮಾರ್ಟ್​ಫೋನ್​ಗಳು ಅತಿ ಕಡಿಮೆ ಬೆಲೆಗೆ ರಿಲೀಸ್ ಆಗುತ್ತಿದೆ. ಇದೇ ಸಾಲಿನಲ್ಲಿ ಕಳೆದ ವಾರ ಬಿಡುಗಡೆ ಆಗಿದ್ದು ಪೋಕೋ M6 ಪ್ರೊ 5G ಸ್ಮಾರ್ಟ್​ಫೋನ್.

ಭಾರತದಲ್ಲಿ 5G ಯುಗ ಆರಂಭವಾದ ಬಳಿಕ 5ಜಿ ಬೆಂಬಲ ಪಡೆದುಕೊಂಡಿರುವ ಸ್ಮಾರ್ಟ್​ಫೋನ್​ಗಳ ಬಿಡುಗಡೆ ಸಂಖ್ಯೆ ಏರುತ್ತಿದೆ. ವಿಶೇಷ ಎಂದರೆ ಕೆಲ 5G ಸ್ಮಾರ್ಟ್​ಫೋನ್​ಗಳು ಅತಿ ಕಡಿಮೆ ಬೆಲೆಗೆ ರಿಲೀಸ್ ಆಗುತ್ತಿದೆ. ಇದೇ ಸಾಲಿನಲ್ಲಿ ಕಳೆದ ವಾರ ಬಿಡುಗಡೆ ಆಗಿದ್ದು ಪೋಕೋ M6 ಪ್ರೊ 5G ಸ್ಮಾರ್ಟ್​ಫೋನ್.

2 / 8

ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಗೆ ಲಭ್ಯವಿರುವ 5ಜಿ ಫೋನುಗಳ ಸಾಲಿಗೆ ಸೇರಿರುವ ಪೋಕೋ M6 ಪ್ರೊ 5G ನಾಳೆಯಿಂದ (ಆ. 09) ಖರೀದಿಗೆ ಸಿಗಲಿದೆ. ಕಡಿಮೆ ಬೆಲೆ ಆಗಿದ್ದರೂ ಇದರಲ್ಲಿ ಆಕರ್ಷಕ ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ ಆಯ್ಕೆ ನೀಡಲಾಗಿದೆ.

3 / 8

ಪೋಕೋ M6 ಪ್ರೊ 5G ಸ್ಮಾರ್ಟ್​ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ವೇರಿಯೆಂಟ್​ಗೆ 10,999 ರೂ. ಇದೆ. ಅಂತೆಯೆ ಇದರ 6GB RAM ಮತ್ತು 128GB ರೂಪಾಂತರದ ಬೆಲೆ 12,999 ರೂ. ಆಗಿದೆ.

4 / 8

ಪೋಕೋ M6 ಪ್ರೊ 5G ಫೋನ್ ಆಗಸ್ಟ್ 9 ಮಧ್ಯಾಹ್ನ 12 ಗಂಟೆಯಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ ಮೂಲಕ ಸೇಲ್ ಕಾಣಲಿದೆ. ಇದು ಪವರ್ ಬ್ಲಾಕ್ ಮತ್ತು ಫಾರೆಸ್ಟ್ ಗ್ರೀನ್ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿದೆ.

5 / 8

ಡಿಸ್ ಪ್ಲೇ, ಪ್ರೊಸೆಸರ್: ಪೋಕೋ M6 ಪ್ರೊ 5G ಫೋನ್ 6.79-ಇಂಚಿನ FHD+ ಡಿಸ್ ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. ಇದರ ಮೇಲೆ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೂ ಇದೆ. ಈ ಸ್ಮಾರ್ಟ್​ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 4 Gen 2 ಚಿಪ್ಸೆಟ್​ನಿಂದ ಕಾರ್ಯನಿರ್ವಹಿಸುತ್ತದೆ.

6 / 8

RAM ಮತ್ತು ಸಂಗ್ರಹಣೆ: ಪೋಕೋ M6 ಪ್ರೊ 5G ಯಲ್ಲಿ ಒಟ್ಟು ಎರಡು ರೂಪಾಂತರಗಳಿವೆ 4GB + 64GB, 6GB + 128GB. 1TB ವರೆಗೆ ಸಂಗ್ರಹಣೆ ವಿಸ್ತರಣೆಗಾಗಿ ಸ್ಮಾರ್ಟ್‌ಫೋನ್ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಸಹ ಹೊಂದಿದೆ.

7 / 8

ಕ್ಯಾಮೆರಾಗಳು, ಬ್ಯಾಟರಿ: ಪೋಕೋ M6 ಪ್ರೊ 5G ಫೋನ್ 50MP ಪ್ರಾಥಮಿಕ ಸಂವೇದಕವನ್ನು ಹೊಂದಿದೆ ಮತ್ತು LED ಫ್ಲ್ಯಾಷ್‌ನೊಂದಿಗೆ ಹಿಂಭಾಗದಲ್ಲಿ 2MP ಆಲ್ಟ್ರಾ ಸಂವೇದಕವನ್ನು ಹೊಂದಿದೆ. ಸೆಲ್ಫಿಗಾಗಿ ಮುಂಭಾಗ 8MP ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಈ ಸ್ಮಾರ್ಟ್​ಫೋನ್ 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

8 / 8

ಸಾಫ್ಟ್‌ವೇರ್: ಇದು ಆಂಡ್ರಾಯ್ಡ್ 13 ಔಟ್-ಆಫ್-ದಿ-ಬಾಕ್ಸ್ ಆಧಾರಿತ MIUI 14 ಅನ್ನು ರನ್ ಮಾಡುತ್ತದೆ. ಪೋಕೋ ಎರಡು ಪ್ರಮುಖ ಆಂಡ್ರಾಯ್ಡ್ ನವೀಕರಣಗಳು ಮತ್ತು ಮೂರು ವರ್ಷಗಳ ಭದ್ರತಾ ನವೀಕರಣಗಳ ಭರವಸೆ ನೀಡಿದೆ. ಈ ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನ ನಿರೋಧಕತೆಗಾಗಿ IP53 ರೇಟಿಂಗ್‌ನೊಂದಿಗೆ ಬರುತ್ತದೆ.

Loading...
Unable to load recommendations.
Follow Us