Snehal Rai: ತನಗಿಂತ 21 ವರ್ಷ ಹಿರಿಯ ರಾಜಕಾರಣಿಯನ್ನು ಮದುವೆಯಾಗಿದ್ದೇನೆ: ನಟಿ ಸ್ನೇಹಲ್ ರೈ

Updated on: May 28, 2023 | 12:49 PM

ನಟಿ, ನಿರೂಪಕಿ ಆಗಿ ಗುರುತಿಸಿಕೊಂಡಿರುವ ಸ್ನೇಹಲ್ ರೈ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗಾ 10 ವರ್ಷ ಹಿಂದೆ ನಡೆದ ವಿವಾಹವನ್ನು ಈಗ ಬಹಿರಂಗಪಡಿಸಿದ್ದಾರೆ.

1 / 7
ಕಿರುತೆರೆ ನಟಿ ಸ್ನೇಹಲ್ ರೈ ಇತ್ತೀಚೆಗಷ್ಟೇ ಸೋಶಿಯಲ್​​ ಮೀಡಿಯಾಗಳಲ್ಲಿ ಫೋಟೋ ಒಂದನ್ನು ಪೋಸ್ಟ್​​​ ಮಾಡಿದ್ದು, ಇದೀಗಾ ಎಲ್ಲೆಡೆ ವೈರಲ್​ ಆಗಿದೆ.

ಕಿರುತೆರೆ ನಟಿ ಸ್ನೇಹಲ್ ರೈ ಇತ್ತೀಚೆಗಷ್ಟೇ ಸೋಶಿಯಲ್​​ ಮೀಡಿಯಾಗಳಲ್ಲಿ ಫೋಟೋ ಒಂದನ್ನು ಪೋಸ್ಟ್​​​ ಮಾಡಿದ್ದು, ಇದೀಗಾ ಎಲ್ಲೆಡೆ ವೈರಲ್​ ಆಗಿದೆ.

2 / 7

ನಟಿ, ನಿರೂಪಕಿ ಆಗಿ ಗುರುತಿಸಿಕೊಂಡಿರುವ ಸ್ನೇಹಲ್ ರೈ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗಾ 10 ವರ್ಷ ಹಿಂದೆ ನಡೆದ ವಿವಾಹವನ್ನು ಈಗ ಬಹಿರಂಗಪಡಿಸಿದ್ದಾರೆ.

3 / 7

ಇದೀಗ ವಿವಾಹಿತ ಮಹಿಳೆಯರಿಗಾಗಿ ನಡೆಯುವ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಮುಂದಾಗಿರುವ ಸ್ನೇಹಲ್ ರೈ ಅವರು ರಾಜಕಾರಣಿ ಮಧ್ವೇಂದ್ರ ಕುಮಾರ್ ರೈ ಅವರೊಂದಿಗಿನ ವಿವಾಹದ ಬಗ್ಗೆ ಮಾತನಾಡಿದ್ದಾರೆ.

4 / 7

ತನ್ನ ಹಿರಿಯ ರಾಜಕಾರಣಿ ಮಧ್ವೇಂದ್ರ ಕುಮಾರ್ ರೈ ನನಗಿಂತ 21ವರ್ಷ ದೊಡ್ಡವರು ಎಂದು ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದು, ಆಕೆಯ ಅಭಿಮಾನಿಗಳಿಗೆ ಶಾಕ್​​ ನೀಡಿದೆ.

5 / 7

ಸ್ನೇಹಲ್ ರೈ ಇಷ್ಕ್ ಕಾ ರಂಗ್ ಸಫೇದ್ , ಜನ್ಮೋ ಕಾ ಬಂಧನ್, ಇಚ್ಛಪ್ಯಾರಿ ನಾಗಿನ್, ಪರ್ಫೆಕ್ಟ್ ಪತಿ ಮತ್ತು ವಿಶ್ ನಂತಹ ಟಿವಿ ಶೋಗಳಲ್ಲಿ ನಟಿಸಿ ಸಾಕಷ್ಟು ಜನಮೆಚ್ಚುಗೆ ಪಡೆದುಕೊಂಡಿದ್ದರು.

6 / 7

ತಾನು ಆಯೋಜಿಸುತ್ತಿದ್ದ ಕಾರ್ಯಕ್ರಮವೊಂದರಲ್ಲಿ ತಾನು ಮತ್ತು ಮಧ್ವೇಂದ್ರ ಅವರು ಮೊದಲ ಬಾರಿಗೆ ಭೇಟಿಯಾಗಿದ್ದೆವು ಎಂದು ಸ್ನೇಹಲ್ ಮೊದಲ ಭೇಟಿಯನ್ನು ನೆನಪಿಸಿಕೊಂಡಿದ್ದಾರೆ.

7 / 7

ಮದುವೆಯ ಬಗ್ಗೆ ಬಹಿರಂಗಪಡಿಸಿದರೆ ಎಲ್ಲಿ ನನ್ನ ವೃತ್ತಿ ಜೀವನಕ್ಕೆ ತೊಂದರೆಯಾಗಬಹುದು ಎಂದು ಮುಚ್ಚಿಟ್ಟಿದ್ದೆ. ಆದರೆ ನನ್ನ ಪತಿ ಹಾಗೂ ಅವರ ಕುಟುಂಬ ಸದಾ ನನ್ನೊಂದಿಗೆ ಬೆಂಬಲವಾಗಿದ್ದಾರೆ ಎಂದು ಸ್ನೇಹಲ್​ ಹೇಳಿಕೊಂಡಿದ್ದಾರೆ.

Published On - 12:49 pm, Sun, 28 May 23

Loading...
Unable to load recommendations.
Follow Us