
ಕೃತಜ್ಞತೆಯೊಂದಿಗೆ ದಿನವನ್ನು ಆರಂಭಿಸಿ : ಕೃತಜ್ಞತೆಯು ಸಂತೋಷ ಹಾಗೂ ಧನಾತ್ಮಕ ಆಲೋಚನೆಗಳಿಗೆ ಅತ್ಯಂತ ಶಕ್ತಿಯುತ ಔಷಧವಾಗಿದೆ. ದಿನನಿತ್ಯವು ಕೃತಜ್ಞರಾಗಿರುವ ಕನಿಷ್ಠ ಮೂರು ವಿಷಯಗಳತ್ತ ಗಮನ ಕೊಡಬೇಕು. ಒಂದು ಕಪ್ ಕಾಫಿ, ಒಳ್ಳೆಯ ವ್ಯಕ್ತಿ ಹಾಗೂ ಹೊಸದನ್ನು ಕಲಿಯುವುದರೊಂದಿಗೆ ದಿನವನ್ನು ಆರಂಭಿಸುವುದನ್ನು ಕಲಿಯಿರಿ. ಈ ಅಭ್ಯಾಸವು ನಿಮ್ಮನ್ನು ಶಾಂತ ಮತ್ತು ಸಂತೃಪ್ತಿಯಿಂದ ಹೆಚ್ಚಿಸಿ ಧನಾತ್ಮಕವಾಗಿ ಯೋಚಿಸುವುದನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಧ್ಯಾನದಂತಹ ಅಭ್ಯಾಸಗಳಲ್ಲಿ ತೊಡಗಿಕೊಳ್ಳಿ : ಪ್ರತಿ ದಿನವು ಸಕಾರಾತ್ಮಕ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕೆಂದರೆ ಧ್ಯಾನದಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಶಾಂತವಾದ ಸ್ಥಳದಲ್ಲಿ ಧ್ಯಾನ ಮಾಡುವುದು ಒತ್ತಡವನ್ನು ಕಡಿಮೆ ಮಾಡುತ್ತದೆ. ಸವಾಲಿನ ಸಂದರ್ಭಗಳಲ್ಲಿ ಸಹ ಧನಾತ್ಮಕ ದೃಷ್ಟಿಕೋನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಸಕಾರಾತ್ಮಕತೆಯಿಂದ ನಿಮ್ಮನ್ನು ಸುತ್ತುವರೆದಿರಿ : ನಿಮ್ಮ ಮನಸ್ಥಿತಿಯು ಧನಾತ್ಮಕವಾಗಿರಬೇಕೆಂದು ಬಯಸಿದರೆ ಸುತ್ತಲಿನ ಪರಿಸರವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಧನಾತ್ಮಕ ಪ್ರಭಾವವಿರುವ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲದಿದ್ದರೆ ಧನಾತ್ಮಕವಾಗಿ ಯೋಚಿಸುವ ವ್ಯಕ್ತಿಗಳು, ಸ್ಪೂರ್ತಿದಾಯಕ ಪುಸ್ತಕಗಳನ್ನು ಹೆಚ್ಚಾಗಿ ಓದಿ. ನಿಮಗೆ ಒಳ್ಳೆಯ ಭಾವನೆ ಮೂಡಿಸುವ ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ನಕರಾತ್ಮಕತೆಯಿಂದ ದೂರ ಉಳಿಯಲು ಸಾಧ್ಯ.

ನಕಾರಾತ್ಮಕ ಆಲೋಚನೆಗಳನ್ನು ಬದಲಾಯಿಸಿಕೊಳ್ಳಿ : ನಕಾರಾತ್ಮಕ ಆಲೋಚನೆಗಳು ಅಥವಾ ಅಂತಹ ಸನ್ನಿವೇಶಗಳನ್ನು ಎದುರಿಸುವಾಗ ಮಾನಸಿಕವಾಗಿ ಕುಗ್ಗಿ ಹೋಗುವುದು ಸಹಜ. ಹೀಗಾದಾಗ ಕುಗ್ಗಿ ಹೋಗುವಂತಹ ಸನ್ನಿವೇಶಗಳಿಗೆ ಸವಾಲು ಹಾಕಿ ಪರಿಸ್ಥಿತಿಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸುವುದು ಉತ್ತಮ.

ದಿನದ ಕೊನೆಯಲ್ಲಿ ಸಕಾರಾತ್ಮಕ ಟಿಪ್ಪಣಿಯಿರಲಿ : ದಿನವನ್ನು ಹೇಗೆ ಆರಂಭಿಸುತ್ತೀರೋ ಅದೇ ರೀತಿ ಸಕಾರಾತ್ಮಕವಾಗಿ ದಿನದ ಕೊನೆಯಲ್ಲಿ ಟಿಪ್ಪಣಿ ಮಾಡುವ ಅಭ್ಯಾಸವಿರಲಿ. ಮಲಗುವ ಮುನ್ನ ಪೂರ್ಣ ದಿನದಲ್ಲಿ ಏನೆಲ್ಲಾ ಒಳ್ಳೆಯ ಕೆಲಸಗಳನ್ನು ಮಾಡಿದ್ದೀರಿ, ನಿಮ್ಮ ಸಾಧನೆ ಹಾಗೂ ಒಳ್ಳೆಯ ಅನುಭವಗಳ ಬಗ್ಗೆ ನೆನಪಿಸಿಕೊಳ್ಳಿ ಅಥವಾ ಮಾನಸಿಕವಾಗಿ ವಿಮರ್ಶಿಸಿ. ಇದು ಒತ್ತಡ ಅಥವಾ ನಿರಾಶೆಯನ್ನು ಕಡಿಮೆ ಮಾಡಿ, ತೃಪ್ತಿಯ ಭಾವನೆಯನ್ನು ಮೂಡಿಸುತ್ತದೆ.