ಸತತ 3ನೇ ಬಾರಿಗೆ WTC ಫೈನಲ್ ಆಡುತ್ತಾ ಟೀಂ ಇಂಡಿಯಾ? ಇಲ್ಲಿದೆ ಪ್ರಮುಖ ತಂಡಗಳ ಫೈನಲ್ ಲೆಕ್ಕಾಚಾರ
World Test Championship 2025 Final: 10 ಪಂದ್ಯಗಳ ಪೈಕಿ ಟೀಂ ಇಂಡಿಯಾ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್ ಹಾಗೂ ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಇದಾದ ಬಳಿಕ 5 ಟೆಸ್ಟ್ ಪಂದ್ಯಗಳಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಬೆಳೆಸಲಿದೆ. ಒಂದು ವೇಳೆ ಟೀಂ ಇಂಡಿಯಾ ಭಾರತದಲ್ಲಿ ಆಡಿದ ಎಲ್ಲಾ ಐದು ಟೆಸ್ಟ್ ಪಂದ್ಯಗಳನ್ನು ಗೆದ್ದರೆ, ಅದರ ಗೆಲುವಿನ ಶೇಕಡಾವಾರು 79.76 ಆಗಲಿದ್ದು, ಭಾರತ ಫೈನಲ್ ತಲುಪಲು ಇಷ್ಟು ಅಂಕಗಳಿದ್ದರೆ ಸಾಕಾಗಲಿದೆ.