Adipurush: ವಿದೇಶಿ ಪ್ರೇಕ್ಷಕರಿಗೆ ಮೊದಲು ದರ್ಶನ ನೀಡಲಿರುವ ‘ಆದಿಪುರುಷ್​’; ಟ್ರೈಬ್ಯಾಕಾದಲ್ಲಿ ಪ್ರೀಮಿಯರ್​

Updated on: Apr 19, 2023 | 6:25 PM

Tribeca Film Festival: ‘ಟ್ರೈಬ್ಯಾಕಾ ಫಿಲ್ಮ್​ ಫೆಸ್ಟಿವಲ್​’ನಲ್ಲಿ ‘ಆದಿಪುರುಷ್​’ ಸಿನಿಮಾ ಪ್ರೀಮಿಯರ್​ ಆಗಲಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ಪ್ರಭಾಸ್​ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

1 / 5
ಸೆಟ್ಟೇರಿದ ದಿನದಿಂದಲೂ ‘ಆದಿಪುರುಷ್​’ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ರಾಮಾಯಣವನ್ನು ಆಧರಿಸಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಪ್ರಭಾಸ್​ ಅವರು ರಾಮನಾಗಿ ನಟಿಸಿದ್ದಾರೆ. ಈ ಸಿನಿಮಾದ ಪ್ರೀಮಿಯರ್​ ಶೋಗೆ ಸಕಲ ಸಿದ್ಧತೆ ನಡೆದಿದೆ.

2 / 5
ಪ್ರತಿಷ್ಠಿತ ಟ್ರೈಬ್ಯಾಕಾ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರದರ್ಶನಗೊಳ್ಳಲು ‘ಆದಿಪುರುಷ್​’ ಸಿನಿಮಾ ಆಯ್ಕೆ ಆಗಿದೆ. ಇದು ಇಡೀ ತಂಡಕ್ಕೆ ಸಂತಸ ತಂದಿದೆ. ಜೂನ್​ 13ರಂದು ಸಿನಿಮೋತ್ಸವದಲ್ಲಿ ಈ ಸಿನಿಮಾದ ಪ್ರೀಮಿಯರ್​ ಆಗಲಿದೆ. ಆ ಬಗ್ಗೆ ಚಿತ್ರರಂಗ ಮಾಹಿತಿ ಹಂಚಿಕೊಂಡಿದೆ.

3 / 5
3ಡಿ ರೂಪದಲ್ಲಿ ‘ಆದಿಪುರುಷ್​’ ಚಿತ್ರ ಪ್ರದರ್ಶನಗೊಳ್ಳಲಿದೆ. ‘ಇದು ಭಾರತೀಯ ಸಿನಿಮಾಗೆ ಸಂದ ಗೌರವ. ನಮ್ಮ ಚಿತ್ರ ವಿದೇಶದಲ್ಲಿ ಪ್ರದರ್ಶನ ಆಗುತ್ತಿರುವುದು ಸಂತಸ ತಂದಿದೆ. ಒಬ್ಬ ಭಾರತೀಯನಾಗಿ ಅಲ್ಲಿನ ಪ್ರೇಕ್ಷಕರೊಂದಿಗೆ ಕುಳಿತು ಸಿನಿಮಾ ನೋಡಲು ಕಾತುರನಾಗಿದ್ದೇನೆ’ ಎಂದು ಪ್ರಭಾಸ್​ ಹೇಳಿದ್ದಾರೆ.

4 / 5
‘ಟಿ ಸೀರೀಸ್‌’ನ ಭೂಷಣ್‌ ಕುಮಾರ್ ಅವರು ‘ಆದಿಪುರುಷ್​’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಈ ಚಿತ್ರ ಮೂಡಿಬಂದಿದೆ. ವಿಶ್ವಾದ್ಯಂತ ಜೂನ್​ 16ರಂದು ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ನಡೆಯುವ ಪ್ರೀಮಿಯರ್​ನಲ್ಲಿ ವಿದೇಶಿ ಪ್ರೇಕ್ಷಕರು ಸಿನಿಮಾ ನೋಡಲಿದ್ದಾರೆ.

5 / 5
ಈ ಸಿನಿಮಾದಲ್ಲಿ ಪ್ರಭಾಸ್​ ಜೊತೆ ಕೃತಿ ಸನೋನ್​, ಸನ್ನಿ ಸಿಂಗ್​, ದೇವದತ್ತ ನಾಗೆ, ವತ್ಸಲ್​ ಸೇಠ್​, ಸೋನಾಲ್​ ಚೌಹಾಣ್​ ಮುಂತಾದವರು ನಟಿಸಿದ್ದಾರೆ. ಅಜಯ್​-ಅತುಲ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಓಂ ರಾವತ್ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಕನ್ನಡದಲ್ಲೂ ಈ ಚಿತ್ರ ಡಬ್​ ಆಗಿ ತೆರೆಕಾಣಲಿದೆ.

Published On - 6:25 pm, Wed, 19 April 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us