ಬೇಬಿ ಬಂಪ್​​ ಫೋಟೋಶೂಟ್​​ಗೆ ಆಕರ್ಷಕ ಹೊಟ್ಟೆಯ ಮೇಲಿನ ಮೆಹೆಂದಿ ವಿನ್ಯಾಸ

Updated on: Jun 01, 2025 | 7:45 AM

ಫ್ಯಾಷನ್ ಲೋಕವೇ ಹಾಗೆ, ಇವತ್ತಿದ್ದ ಫ್ಯಾಷನ್ ನಾಳೆ ಇರಲ್ಲ, ದಿನಬೆಳಗಾಗದರೆ ಹೊಸ ಹೊಸ ಫ್ಯಾಷನ್‌ಗಳು ಫ್ಯಾಷನ್ ಲೋಕವನ್ನೇ ಆವರಿಸಿಕೊಂಡು ಬಿಟ್ಟಿರುತ್ತವೆ. ಹೌದು ಮೆಹೆಂದಿಯಲ್ಲಿಯೂ ಟ್ರೆಂಡ್ ಗಳು ಬಂದಿವೆ. ಕೈ ಕಾಲುಗಳಿಗೆ ಹಚ್ಚುತ್ತಿದ್ದ ಮೆಹೆಂದಿಯನ್ನು ಇಂದು ಮುಖ ಹಾಗೂ ದೇಹದ ಭಾಗಗಳಿಗೆ ಹಾಗೂ ಮುಖಕ್ಕೆ ಹಚ್ಚಿಕೊಳ್ಳುವುದೇ ಟ್ರೆಂಡ್ ಆಗಿ ಬಿಟ್ಟಿದೆ. ಅದರಲ್ಲಿ ಈ ಗರ್ಭಿಣಿ ಮಹಿಳೆಯರು ಫೋಟೋ ಶೂಟ್ ಮಾಡಿಸಿಕೊಳ್ಳುವ ಪ್ಲ್ಯಾನ್ ನಲ್ಲಿದ್ರೆ ಅಂತಹವರಿಗಾಗಿ ಕೆಲವು ಹೊಟ್ಟೆಯ ಭಾಗದ ಆಕರ್ಷಕ ಮೆಹಂದಿ ವಿನ್ಯಾಸಗಳು ಇಲ್ಲಿವೆ.

1 / 6
ಗೋರಂಟಿ ಹಾಗೂ ಮೆಹೆಂದಿ ಹೆಣ್ಣು ಮಕ್ಕಳಿಗೆ ಅಚ್ಚು ಮೆಚ್ಚು. ಯಾವುದೇ ಶುಭ ಸಮಾರಂಭಗಳು, ಹಬ್ಬಗಳಿರಲಿ ಮೆಹೆಂದಿ ಹಾಕಿ ಸಂಭ್ರಮಿಸುತ್ತಾರೆ. ಎರಡು ಕೈಗಳಿಗೂ ಒಂದೇ ರೀತಿ ಮೆಹೆಂದಿ ವಿನ್ಯಾಸವನ್ನು ಹಚ್ಚಿಕೊಂಡರೆ, ಇನ್ನು ಅರೇಬಿಯನ್ ಮೆಹೆಂದಿ ವಿನ್ಯಾಸವನ್ನು ಹಚ್ಚಿಕೊಳ್ಳಲು ಇಷ್ಟ ಪಡುತ್ತಾರೆ.

2 / 6
ಅಂದವನ್ನು ಹೆಚ್ಚಿಸುವ ಈ ಮೆಹೆಂದಿಯನ್ನು ಕೈಕಾಲುಗಳಿಗೆ ಹಚ್ಚುವ ಕಾಲವೊಂದಿತ್ತು. ಆದರೆ ಆ ಕಾಲ ಬದಲಾಗಿದ್ದು, ದೇಹದ ವಿವಿಧ ಭಾಗಗಳಿಗೆ ಸೇರಿದಂತೆ ಮುಖಕ್ಕೂ ಮೆಹೆಂದಿ ಹಚ್ಚುವ ಪ್ರವೃತ್ತಿಯೂ ಕೂಡ ಬಂದಿದೆ.

3 / 6
ಗರ್ಭಿಣಿ ಮಹಿಳೆಯರು ತಮ್ಮ ಹೊಟ್ಟೆಯ ಮೇಲೆ ಮೆಹೆಂದಿ ಹಾಕಿಕೊಳ್ಳುತ್ತಿದ್ದು ಇದು ಕೂಡ ಟ್ರೆಂಡ್ ಆಗಿದೆ. ಸೋಶಿಯಲ್  ಮೀಡಿಯಾದಲ್ಲಿ ಹೊಟ್ಟೆಯ ಮೇಲಿನ ಮೆಹೆಂದಿ ವಿನ್ಯಾಸದ ಫೋಟೋಗಳು ಆಗಾಗ ಕಾಣಸಿಗುತ್ತದೆ.

4 / 6
ಮೆಹಂದಿ ಕಲಾವಿದೆ ತಮ್ಮ ಹೆನ್ನಾ ಎಸ್ ಕೆ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದೇಹದ ವಿವಿಧ ಭಾಗಗಳಿಗೆ ಹಚ್ಚಲಾದ ವಿಭಿನ್ನ ಮೆಹೆಂದಿ ವಿನ್ಯಾಸದ ಫೋಟೋಗಳನ್ನು ಶೇರ್  ಮಾಡಿಕೊಂಡಿದ್ದಾರೆ. ಇದರಲ್ಲಿ ಗರ್ಭಿಣಿ ಮಹಿಳೆಯರು ಹೊಟ್ಟೆಯ ಭಾಗಕ್ಕೆ ಹಚ್ಚಲಾಗಿರುವ ಮೆಹೆಂದಿ ವಿನ್ಯಾಸಗಳು ಬಾರಿ ಆಕರ್ಷಕವಾಗಿದೆ.

5 / 6
ನೀವೇನಾದ್ರೂ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಳ್ಳಬೇಕೆಂದು ಕೊಂಡಿದ್ದರೆ ಕೈ ಕಾಲುಗಳಿಗೆ ಮಾತ್ರವಲ್ಲ ಹೊಟ್ಟೆಯ ಭಾಗಕ್ಕೂ ಈ ರೀತಿಯ ಆಕರ್ಷಕ ಮೆಹೆಂದಿ ವಿನ್ಯಾಸವನ್ನು ಟ್ರೈ ಮಾಡಬಹುದು.

6 / 6
ಹೌದು, ಈ ಫೋಟೋದಲ್ಲಿ ಗರ್ಭಿಣಿ  ಮಹಿಳೆಯರ ಹೊಟ್ಟೆಯ ಮೇಲೆ ಬಿಡಿಸಿರುವ ಹೂವು ಹಾಗೂ ಬಳ್ಳಿಯ ಚಿತ್ತಾರಗಳು ಆಕರ್ಷಕವಾಗಿ ಕಾಣುವಂತೆ ಮಾಡಿದೆ. ಈ ರೀತಿ ಹೊಟ್ಟೆಯ ಭಾಗಕ್ಕೆ ಮೆಹೆಂದಿ ಹಚ್ಚಿಕೊಂಡು ಫೋಟೋಶೂಟ್ ಮಾಡಿಸಿಕೊಳ್ಳುವುದು ನೀವು ಎಲ್ಲರಿಗಿಂತ ವಿಭಿನ್ನವಾಗಿ ಕಾಣುವಂತೆ ಮಾಡುತ್ತದೆ.

Published On - 7:15 pm, Fri, 30 May 25