Kannada News Photo gallery Price drop despite festivals, Farmers are outraged by throwing flowers on the street, Kolar News in Kannada
ಹಬ್ಬಗಳ ನಡುವೆಯೂ ಬೆಲೆ ಇಳಿಕೆ; ಹೂವುಗಳನ್ನ ಬೀದಿಗೆ ಸುರಿದು ರೈತರ ಆಕ್ರೋಶ
ಅದು ಬರದ ಹಣೆಪಟ್ಟಿ ಕಟ್ಟಿಕೊಂಡಿರುವ ಮಳೆಯಾಶ್ರಿತ ಜಿಲ್ಲೆ, ಅಲ್ಲಿನ ರೈತರು ಬೋರ್ವೆಲ್ ಹಾಕಿ ಪಾತಾಳದಿಂದ ನೀರನ್ನು ತೆಗೆದು ಶ್ರಮವಹಿಸಿ ಕೃಷಿ ಮಾಡುತ್ತಾರೆ. ಇಂಥಹ ಪರಿಸ್ಥಿತಿಯಲ್ಲಿ ತರಕಾರಿ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸಿದ್ದ ರೈತರು, ಈಗ ಶ್ರಾವಣ ಮಾಸದಲ್ಲಿ ಹೂವು ಬೆಳೆದು ಒಳ್ಳೆಯ ಬೆಲೆ ಸಿಗುತ್ತದೆ, ನಮ್ಮ ಬದುಕು ಹೂವಿನಂತಾಗುತ್ತದೆ ಎಂಬ ರೈತರ ಲೆಕ್ಕಾಚಾರವೂ ತಲೆಕೆಳಕಾಗಿದೆ.
1 / 7
ಕಳೆದೊಂದು ವಾರದಿಂದ ಕೋಲಾರದಲ್ಲಿ ಹೂವು ಬೆಳೆಗಾರರು ಪರಿಸ್ಥಿತಿ ಡೋಲಾಯಮಾನವಾಗಿದೆ. ಶ್ರಾವಣದಲ್ಲಿ ಬರುವ ಸಾಲು ಸಾಲು ಹಬ್ಬಗಳು, ಶುಭ ಸಮಾರಂಭಗಳಿಂದ ಒಂದಷ್ಟು ಹಣ ಗಳಿಸಬಹುದೆಂಬ ಲೆಕ್ಕಾಚಾರದಲ್ಲಿ ಹೂವು ಬೆಳೆದ ರೈತರ ಲೆಕ್ಕಾ ಸಂಪೂರ್ಣವಾಗಿ ತಲೆಕೆಳಗಾಗಿದೆ.
2 / 7
ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಒಂದಿಷ್ಟು ಹೂವಿಗೆ ಬೆಲೆ ಇದ್ದು, ಅಲ್ಪಸ್ವಲ್ಪ ಹಣಗಳಿಸಿದ್ದು ಬಿಟ್ಟರೆ ನಂತರದ ದಿನಗಳಲ್ಲಿ ಕನಿಷ್ಟ ಹಾಕಿರುವಂತಹ ಬಂಡವಾಳ ಸಹ ಸಿಗದೆ ರೈತ ಕಂಗಾಲಾಗಿದ್ದಾನೆ. ಪ್ರತಿ ಎಕರೆ ಕನಿಷ್ಟ 50 ರಿಂದ 60 ಸಾವಿರ ಬಂಡವಾಳ ಹಾಕಿ ಬೆಳೆದ ಹೂವು ಜೊತೆಗೆ ರೈತರ ತೋಟದಲ್ಲಿ ಹೂವು ಬಿಡಿಸುವುದು ಸಾಗಾಣಿಕೆ ವೆಚ್ಚ ಎಲ್ಲವನ್ನು ಲೆಕ್ಕ ಹಾಕಿದ್ರೆ ಹೂವು ಬೆಳೆದ ರೈತರಿಗೆ ಹೂವು ತುಂಬುವ ಚೀಲದ ಬೆಲೆಯೂ ಸಿಗುತ್ತಿಲ್ಲ.
3 / 7
ಕೆಜಿ ಚೆಂಡುಮಲ್ಲಿಗೆ ಹೂವಿಗೆ 5 ರಿಂದ 10 ರೂಪಾಯಿ ಇದ್ದರೆ, ಹೂವು ತುಂಬುವ ಚೀಲದ ಬೆಲೆ 40 ರೂಪಾಯಿ ಇದೆ. ಇಂಥ ಪರಿಸ್ಥಿತಿಯಲ್ಲಿ ರೈತರು ತಾವು ಬೆಳೆದ ಹೂವನ್ನು ಮಾರುಕಟ್ಟೆಗೂ ಹಾಕಲಾಗದೆ ರಸ್ತೆ ಬದಲಿಯಲ್ಲಿ ಸುರಿದು ಬೇಸರದಿಂದ ವಾಪಸ್ಸಾಗುತ್ತಿದ್ದಾರೆ.
4 / 7
ದೇವರಿಗೆ ಪೂಜೆ ಮಾಡುವ ಹೂವನ್ನು ಬೆಳೆದ ರೈತರಿಗೆ ದೇವರೂ ಕೈಹಿಡಿಯುತ್ತಿಲ್ಲ ಎಂದು ರೈತರು ಬೇಸರ ಹೊರಹಾಕುತ್ತಿದ್ದಾರೆ. ಸದ್ಯ ಶ್ರಾವಣ ಮಾಡದಲ್ಲಿ ಹೂವಿನ ಬೆಲೆ ಈ ರೀತಿ ಕುಸಿತಕ್ಕೆ ಕಾರಣ ಕೋಲಾರ ಜಿಲ್ಲೆಯಾದ್ಯಂತ ಯಥೇಚ್ಛವಾಗಿ ರೈತರು ಚೆಂಡು ಹೂ, ಸೇವಂತಿಗೆ, ಬಟನ್ಸ್ ಗುಲಾಬಿ ಹೂವು ಬೆಳೆದಿದ್ದಾರೆ. ಜೊತೆಗೆ ಹೊರ ರಾಜ್ಯಗಳಿಂದಲೂ ಮೊದಲಿನಂತೆ ಬೇಡಿಕೆ ಇಲ್ಲದೆ ಕಾರಣ ರೈತರು ಬೆಳೆದ ಹೂವು ರಸ್ತೆಬದಿ ಸುರಿಯುವಂತಾಗಿದೆ.
5 / 7
ಇನ್ನು ಕೋಲಾರ ಜಿಲ್ಲೆಯಲ್ಲಿ ತರಕಾರಿ ಜೊತೆಗೆ ಹೂವು ಬೆಳೆಯನ್ನು ಹೆಚ್ಚಾಗಿ ರೈತರು ಬೆಳೆಯುತ್ತಾರೆ ಜಿಲ್ಲೆಯಲ್ಲಿ ಚೆಂಡು ಹೂವು, ಸೇವಂತಿ, ಗುಲಾಬಿ, ಬಟನ್ ಗುಲಾಬಿ ಸೇರಿದಂತೆ ಹಲವು ಹೂವುಗಳನ್ನು ಬೆಳೆಯುತ್ತಾರೆ. ಕೇರಳ, ಆಂಧ್ರಪ್ರದೇಶದ ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್ ಹಾಗೂ ತಮಿಳುನಾಡಿನ ಹಲವು ಕಡೆಗೆ ಕಳಿಸಲಾಗುತ್ತಿತ್ತು. ಆದರೆ, ಈಗ ಅಲ್ಲಿಯೂ ಬೇಡಿಕೆ ಇಲ್ಲದೆ ಹೊರರಾಜ್ಯದ ವ್ಯಾಪಾರಸ್ಥರು ಬರುತ್ತಿಲ್ಲ.
6 / 7
ಪ್ರತಿದಿನ 15 ರಿಂದ 20 ಟನ್ ಹೂವುಗಳನ್ನು ಬೇರೆಡೆ ಕಳುಹಿಸಲಾಗುತ್ತಿತ್ತು. ಆದ್ರೆ, ಆ ಭಾಗದಲ್ಲೂ ರೈತರು ಹೂವುನ್ನು ಬೆಳೆಯುತ್ತಿರುವುದರಿಂದ ಹೂವುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಪರಿಣಾಮ ಹೂವು ತೋಟಗಳಲ್ಲಿ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟು ದಿನ ನೀರಿಲ್ಲದೆ ಜನರು ಸಂಕಷ್ಟದಲ್ಲಿ ಹೂವು ಬೆಳೆಯುತ್ತಿದ್ದರು. ಆದರೀಗ ಬೆಳೆದ ಹೂವಿಗೆ ಬೆಲೆ ಇಲ್ಲದೆ ಸಂಕಷ್ಟ ಎದುರಿಸುವಂತ ಸ್ಥಿತಿ ಎದುರಾಗಿದೆ.
7 / 7
ಒಟ್ಟಾರೆ ತಾನು ಬೆಳೆದ ಹೂವು ದೇವರ ಪೂಜೆಗೆ ಬಳಕೆಯಾಗುತ್ತದೆ, ಶ್ರಾವಣ ಮಾಸದ ಸಾಲು ಹಬ್ಬಗಳಲ್ಲಿ ದೇವರು ನಮ್ಮ ಕೈಬಿಡೋದಿಲ್ಲ ಎಂದುಕೊಂಡು ಹೂವು ಬೆಳೆದ ರೈತ ಸಂಕಷ್ಟಕ್ಕೀಡಾಗಿದ್ದಾನೆ. ಹೂವು ಬೆಳೆದು ನಮ್ಮ ಬದುಕು ಹೂವಾಗುತ್ತದೆ ಎಂದುಕೊಂಡಿದ್ದ ರೈತನ ಬದುಕು ಬೀದಿಗೆ ಬಿದ್ದಿದೆ.