- Kannada News Photo gallery Kannada News | Pro Kannada organisation removes English poster wishing Siddaramaiah in freedom park Bangalore
ಸಿದ್ದರಾಮಯ್ಯಗೆ ಶುಭಕೋರುವ ಇಂಗ್ಲಿಷ್ ಪೋಸ್ಟರ್ ಕಿತ್ತೆಸೆದ ಕನ್ನಡ ಪರ ಸಂಘಟನೆ
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ಶುಭಕೋರುವ ಇಂಗ್ಲಿಷ್ ಪೋಸ್ಟರ್ಗೆ ಕನ್ನಡ ಪರ ಸಂಘಟನೆಗಳು ಮಸಿ ಬಳಿದು ಕಿತ್ತೆಸೆದಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Updated on: May 19, 2023 | 8:55 PM

ಸಿದ್ದರಾಮಯ್ಯ ಅವರು ನಾಳೆ (ಮೇ 20) ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಇದಕ್ಕಾಗಿ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಬ್ಯಾನರ್ಗಳನ್ನು ಹಾಕಿ ಶುಭಕೋರಲಾಗುತ್ತಿದೆ.

ಕೆಲವೆಡೆ ಸಿದ್ದರಾಮಯ್ಯಗೆ ಶುಭಕೋರುವ ಪೋಸ್ಟರ್ಗಳನ್ನು ಇಂಗ್ಲಿಷ್ನಲ್ಲಿ ಹಾಕಲಾಗಿತ್ತು. ಇದನ್ನು ನೋಡಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು, ಇಂಗ್ಲಿಷ್ ಪೋಸ್ಟರ್ಗೆ ಮಸಿ ಬಳಿದು ಕಿತ್ತೆಸೆದಿದ್ದಾರೆ.

ಯುವ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಅವರು ಫ್ರೀಡಂಪಾರ್ಕ್ನಲ್ಲಿ ಹಾಕಿದ್ದ ಪೋಸ್ಟರ್ಗೆ ಮಸಿ ಬಳಿದ ಕಾರ್ಯಕರ್ತರು ಕನ್ನಡ ಬಳಸಿ ಎಂದು ಪೋಸ್ಟರ್ನಲ್ಲಿ ಬರೆದು ನಂತರ ಹರಿದು ಹಾಕಿದ್ದಾರೆ.

ಒಟ್ಟು ಎರಡು ಕಡೆಗಳಲ್ಲಿ ನಲಪಾಡ್ ಅವರು ಇಂಗ್ಲಿಷ್ನಲ್ಲಿ ಶುಭಕೋರುವ ಪೋಸ್ಟರ್ಗಳನ್ನು ಹಾಕಿದ್ದರು.

ಈ ಎರಡು ಪೋಸ್ಟರ್ಗಳಿಗೂ ಮಸಿ ಬಳಿದು ನಂತರ ಕಿತ್ತೆಸೆಯಲಾಗಿದೆ.

ಪೋಸ್ಟರ್ನಲ್ಲಿ ಕನ್ನಡ ಬಳಸದ ಹಿನ್ನೆಲೆ ಕನ್ನಡಾಭಿಮಾನಿಗಳು ಪೋಸ್ಟರ್ಗೆ ಮಸಿ ಬಳಿದು ಹರಿದು ಹಾಕಿದ್ದಾರೆ.




