Kannada News Photo gallery Prominent personalities who will be joining PM Narendra Modi for International Yoga Day at UN Headquarters
ಅಮೆರಿಕದಲ್ಲಿ ಪ್ರಧಾನಿ ಮೋದಿಯವರೊಂದಿಗೆ ಯೋಗ ದಿನಾಚರಣೆಯಲ್ಲಿ ಭಾಗವಹಿಸಲಿರುವ ಗಣ್ಯರಿವರು
ಅಮೆರಿಕದಲ್ಲಿರುವ ವಿಶ್ವಸಂಸ್ಥೆಯಲ್ಲಿ ನಡೆಯುವ ಯೋಗ ದಿನದ ಕಾರ್ಯಕ್ರಮಕ್ಕೆ 180 ಕ್ಕೂ ಹೆಚ್ಚು ದೇಶಗಳ ಜನರು ಪ್ರಧಾನಿ ನರೇಂದ್ರ ಮೋದಿ ಜತೆ ಸೇರಲಿದ್ದಾರೆ. ಸಮಾರಂಭದಲ್ಲಿ ರಾಜತಾಂತ್ರಿಕರು, ಅಧಿಕಾರಿಗಳು, ಶಿಕ್ಷಣ ತಜ್ಞರು, ಆರೋಗ್ಯ ವೃತ್ತಿಪರರು, ತಂತ್ರಜ್ಞರು, ಉದ್ಯಮದ ಮುಖಂಡರು, ಮಾಧ್ಯಮದ ವ್ಯಕ್ತಿಗಳು, ಕಲಾವಿದರು, ಆಧ್ಯಾತ್ಮಿಕ ನಾಯಕರು, ಯೋಗ ಸಾಧಕರು ಸೇರಿದಂತೆ ಸಮಾಜದ ಎಲ್ಲಾ ಕ್ಷೇತ್ರಗಳ ವ್ಯಕ್ತಿಗಳು ಮತ್ತು ಪ್ರಭಾವಿಗಳು ಭಾಗವಹಿಸಲಿದ್ದಾರೆ.