- Kannada News Photo gallery Cricket photos ICC Test Rankings: Joe Root replaces Labuschagne as No.1 Test batsman
ICC Test Rankings: ಜೋ ರೂಟ್ ನಂಬರ್ 1: ಅಗ್ರ ಹತ್ತರಲ್ಲಿ ಟೀಮ್ ಇಂಡಿಯಾದ ಏಕೈಕ ಆಟಗಾರ
ICC Test Rankings: ಟ್ರಾವಿಸ್ ಹೆಡ್ ಒಂದು ಸ್ಥಾನ ಹಾಗೂ ಸ್ಟೀವ್ ಸ್ಮಿತ್ 4 ಸ್ಥಾನ ಕುಸಿತ ಕಂಡಿದ್ದಾರೆ. ಅದರಂತೆ ನೂತನ ಟೆಸ್ಟ್ ಬ್ಯಾಟರ್ಗಳ ಶ್ರೇಯಾಂಕ ಪಟ್ಟಿ ಈ ಕೆಳಗಿನಂತಿದೆ...
Updated on: Jun 21, 2023 | 2:57 PM

ICC Test Cricket Rankings: ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ನೂತನ ಟೆಸ್ಟ್ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಹೊಸ ರ‍್ಯಾಂಕಿಂಗ್ ಪಟ್ಟಿಯಲ್ಲಿ ಇಂಗ್ಲೆಂಡ್ನ ಸ್ಟಾರ್ ಬ್ಯಾಟರ್ ಜೋ ರೂಟ್ ಅಗ್ರಸ್ಥಾನ ಅಲಂಕರಿಸಿದ್ದಾರೆ.

ಈ ಹಿಂದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮಾರ್ನಸ್ ಲಾಬುಶೇನ್ ಅಗ್ರಸ್ಥಾನದಲ್ಲಿದ್ದರು. ಆದರೆ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಒಟ್ಟು 164 ರನ್ ಬಾರಿಸಿ ಜೋ ರೂಟ್ ಮಿಂಚಿದ್ದರು. ಇದರ ಫಲವಾಗಿ ಇದೀಗ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ.

ಇನ್ನು ಕಳೆದ ಬಾರಿ ಅಗ್ರ ಮೂರರಲ್ಲಿ ಕಾಣಿಸಿಕೊಂಡಿದ್ದ ಮಾರ್ನಸ್ ಲಾಬುಶೇನ್ 2 ಸ್ಥಾನ ಕೆಳಗಿಳಿದರೆ, ಟ್ರಾವಿಸ್ ಹೆಡ್ ಒಂದು ಸ್ಥಾನ ಹಾಗೂ ಸ್ಟೀವ್ ಸ್ಮಿತ್ 4 ಸ್ಥಾನ ಕುಸಿತ ಕಂಡಿದ್ದಾರೆ. ಅದರಂತೆ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಈ ಕೆಳಗಿನಂತಿದೆ...

2- ಜೋ ರೂಟ್ (ಇಂಗ್ಲೆಂಡ್)- 859 ಪಾಯಿಂಟ್ಸ್

1- ಕೇನ್ ವಿಲಿಯಮ್ಸನ್ (ನ್ಯೂಝಿಲೆಂಡ್)- 883 ಪಾಯಿಂಟ್ಸ್

5- ಮಾರ್ನಸ್ ಲಾಬುಶೇನ್ (ಆಸ್ಟ್ರೇಲಿಯಾ)- 826 ಪಾಯಿಂಟ್ಸ್

6- ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)- 818 ಪಾಯಿಂಟ್ಸ್

4- ಬಾಬರ್ ಆಝಂ (ಪಾಕಿಸ್ತಾನ್)- 829 ಪಾಯಿಂಟ್ಸ್

3- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)- 842 ಪಾಯಿಂಟ್ಸ್

7- ಉಸ್ಮಾನ್ ಖ್ವಾಜಾ (ಆಸ್ಟ್ರೇಲಿಯಾ)- 796 ಪಾಯಿಂಟ್ಸ್

8- ಡೇರಿಲ್ ಮಿಚೆಲ್ (ನ್ಯೂಝಿಲೆಂಡ್)- 792 ಪಾಯಿಂಟ್ಸ್

9- ದಿಮುತ್ ಕರುಣರತ್ನೆ (ಶ್ರೀಲಂಕಾ)- 759 ಪಾಯಿಂಟ್ಸ್

10- ರಿಷಭ್ ಪಂತ್ (ಭಾರತ)- 758 ಪಾಯಿಂಟ್ಸ್
