ನಟಿ ರೇಚಲ್ ಡೇವಿಡ್ ಅವರು ಕನ್ನಡದ ‘ಲವ್ ಮಾಕ್ಟೇಲ್ 2’ ಚಿತ್ರದಲ್ಲಿ ನಟಿಸಿ ಫೇಮಸ್ ಆದರು. ಅವರು ಕನ್ನಡದಲ್ಲಿ ನಟಿಸಿದ ಮೊದಲ ಸಿನಿಮಾ ಇದು.
ರೇಚಲ್ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಪರಭಾಷೆಯಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಇದೆ. ಮಲಯಾಳಂ ಚಿತ್ರದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ.
ರೇಚಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಬೋಲ್ಡ್ ಫೋಟೋಗಳನ್ನು ರೇಚಲ್ ಶೇರ್ ಮಾಡಿಕೊಳ್ಳುತ್ತಾರೆ.
ರೇಚಲ್ ಸದ್ಯ ತಮಿಳು ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ‘ವಾಕಿಂಗ್ ಟಾಕಿಂಗ್ ಸ್ಟ್ರಾಬೆರಿ ಐಸ್ಕ್ರೀಮ್’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.
ರೇಚಲ್ ಹೊಸ ಕನ್ನಡ ಸಿನಿಮಾ ಒಪ್ಪಿಕೊಳ್ಳಲಿ ಅನ್ನೋದು ಅಭಿಮಾನಿಗಳ ಆಸೆ. ಒಳ್ಳೆಯ ಕಥೆ ಸಿಕ್ಕರೆ ಒಪ್ಪಿ ನಟಿಸುವ ಆಲೋಚನೆಯಲ್ಲಿ ಅವರಿದ್ದಾರೆ.