Ragini Dwivedi Birthday: ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ರಾಗಿಣಿ; ‘ತುಪ್ಪದ ಬೆಡಗಿ’ಯ ಗ್ಲಾಮರಸ್ ಫೋಟೋಗಳು ಇಲ್ಲಿವೆ

Edited By:

Updated on: May 24, 2022 | 11:32 AM

Ragini Dwivedi glamourous photos: ಸ್ಯಾಂಡಲ್​ವುಡ್ ಸೇರಿದಂತೆ ವಿವಿಧ ಭಾಷಾ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿ ರಾಗಿಣಿ ದ್ವಿವೇದಿಗೆ ಇಂದು ಜನ್ಮದಿನದ ಸಂಭ್ರಮ. 32ನೇ ವಸಂತಕ್ಕೆ ಕಾಲಿಟ್ಟ ನಟಿ ಗ್ಲಾಮರಸ್ ಅವತಾರಗಳಲ್ಲಿ ಮಿಂಚಿದವರು. ನಟಿಯ ಬೋಲ್ಡ್ ಫೋಟೋಗಳು ಇಲ್ಲಿವೆ.

1 / 7
Happy Birthday Ragini: ಬಹುಭಾಷಾ ನಟಿ ರಾಗಿಣಿ ದ್ವಿವೇದಿ ಪ್ರಸ್ತುತ ಸ್ಯಾಂಡಲ್​ವುಡ್ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಸಕ್ರಿಯರಾಗಿದ್ದಾರೆ. ‘ತುಪ್ಪದ ಬೆಡಗಿ’ ಎಂದೇ ಕರೆಸಿಕೊಳ್ಳುವ ಈ ನಟಿ ‘ಕೆಂಪೇಗೌಡ’, ‘ವೀರಮದಕರಿ’ ಮೊದಲಾದ ಚಿತ್ರಗಳಿಂದ ಸ್ಟಾರ್ ಪಟ್ಟಕ್ಕೇರಿದ್ದರು.

Happy Birthday Ragini: ಬಹುಭಾಷಾ ನಟಿ ರಾಗಿಣಿ ದ್ವಿವೇದಿ ಪ್ರಸ್ತುತ ಸ್ಯಾಂಡಲ್​ವುಡ್ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಸಕ್ರಿಯರಾಗಿದ್ದಾರೆ. ‘ತುಪ್ಪದ ಬೆಡಗಿ’ ಎಂದೇ ಕರೆಸಿಕೊಳ್ಳುವ ಈ ನಟಿ ‘ಕೆಂಪೇಗೌಡ’, ‘ವೀರಮದಕರಿ’ ಮೊದಲಾದ ಚಿತ್ರಗಳಿಂದ ಸ್ಟಾರ್ ಪಟ್ಟಕ್ಕೇರಿದ್ದರು.

2 / 7

ನಂತರದಲ್ಲಿ ಮಹಿಳಾ ಪ್ರಧಾನ ಆಕ್ಷನ್ ಚಿತ್ರಗಳಲ್ಲೂ ರಾಗಿಣಿ ಬಣ್ಣಹಚ್ಚಿದ್ದರು. ಇದೀಗ ಮತ್ತೆ ಬ್ಯಾಕ್​ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ನಟಿ.

3 / 7

ರಾಗಿಣಿ ಸಿನಿಮಾಗಳಲ್ಲಿ ಟ್ರೆಡಿಷನಲ್​ ಲುಕ್​ಗಳಿಗಿಂತ ಗ್ಲಾಮರಸ್ ಅವತಾರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಅವರ ಬೋಲ್ಡ್​​ ಫೋಟೋಗಳು ಇಲ್ಲಿವೆ.

4 / 7

ಚಿತ್ರಗಳ ವಿಷಯಕ್ಕೆ ಬಂದರೆ ನಟಿ, ‘ಗಾಂಧಿಗಿರಿ’, ‘ಒನ್​ ಟು ಒನ್’ ಮೊದಲಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ‘ಒನ್​ ಟು ಒನ್’ ತಮಿಳು ಚಿತ್ರವಾಗಿದೆ.

5 / 7

ಇವುಗಳಲ್ಲದೇ ‘ಕರ್ವ 3’, ‘ಜಾನಿವಾಕರ್’ ಚಿತ್ರಗಳಲ್ಲೂ ನಟಿ ಬಣ್ಣ ಹಚ್ಚುತ್ತಿದ್ದಾರೆ.

6 / 7

ಹಿಂದಿ, ಕನ್ನಡ, ಮಲಯಾಳಂನಲ್ಲಿ ತಯಾರಾಗುತ್ತಿರುವ ‘ಸಾರಿ ಕರ್ಮ ರಿಟರ್ನ್ಸ್​’​ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ರಾಗಿಣಿ.

7 / 7

ಇಂದು (ಮೇ 24) ರಾಗಿಣಿಗೆ ಜನ್ಮದಿನದ ಸಂಭ್ರಮ. 32ನೇ ವಸಂತಕ್ಕೆ ಕಾಲಿಟ್ಟ ನಟಿಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಕಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅವರನ್ನು ಮತ್ತೆ ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ.

Published On - 11:13 am, Tue, 24 May 22

Loading...
Unable to load recommendations.
Follow Us