ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಾದ ಏಕೈಕ ರಾಯಚೂರು ಜಿಲ್ಲೆಯ ಸರ್ಕಾರಿ ಶಾಲೆಯ ವಿಶೇಷತೆಗಳೇನು?

|

Updated on: Nov 01, 2023 | 12:22 PM

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಬೆಂಡೋಣಿ ಗ್ರಾಮದ ಸರ್ಕಾರಿ ಶಾಲೆ ರಾಜೋತ್ಸವ ಪ್ರಶಸ್ತಿ ಆಯ್ಕೆಯಾಗಿದೆ. ಸ್ವತಃ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಘೋಷಣೆ ಮಾಡಿದ್ದಾರೆ. ಹಾಗಾದ್ರೆ, ರಾಜೋತ್ಸವ ಪ್ರಶಸ್ತಿ ಆಯ್ಕೆಯಾದ ರಾಜ್ಯದ ಏಕೈಕ ಬೆಂಡೋಣಿ ಸರ್ಕಾರಿ ಶಾಲೆಯ ವಿಶೇಷತೆಗಳೇನು? ಏನು ನೋಡಿ ಈ ಶಾಲೆಯನ್ನು ರಾಜೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎನ್ನುವ ವಿವರ ಇಲ್ಲಿದೆ.

1 / 9
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಬೆಂಡೋಣಿ ಗ್ರಾಮದ ಸರಕಾರಿ ಶಾಲೆಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಸ್ವತಃ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಗಳೂರಿನಲ್ಲಿ ಘೋಷಣೆ ಮಾಡಿದ್ದಾರೆ.

2 / 9
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಾದ ಬೆಂಡೋಣಿ ಸರ್ಕಾರಿ ಶಾಲೆಯಲ್ಲಿ ಒಟ್ಟು  195 ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಇದೆ.

3 / 9
ಶಾಲೆಯೊಳಗೆ ಕಾಲಿಟ್ಟರೇ ಸಾಕು ಅರಣ್ಯ ಪ್ರದೇಶ ಬಂದಿದ್ದೇವೆ ಎನ್ನುವಂತೆ ಭಾಸವಾಗುತ್ತದೆ. ಅದರಂತೆ ಶಾಲೆ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡಲಾಗಿದೆ. ಇದರಿಂದ ಶಾಲೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

4 / 9
ಹಾಗೇ ಶಾಲಾ ಆವರಣದಲ್ಲಿ ಪಕ್ಷಿಸಂಕುಲಕ್ಕಾಗಿ ಆಹಾರ ಮತ್ತು ಕುಡಿಯಲು ನೀರಿನ ಅರವಟಿಕೆ ನಿರ್ಮಿಸಲಾಗಿದೆ.

5 / 9
ಫುಲ್ ಹಸಿರು ಮಯವಾಗಿರುವ ಬೆಂಡೋಣಿ ಸರ್ಕಾರಿ ಶಾಲೆಗೆ ಈ ಹಿಂದೆ  ಶಾಲೆಗೆ “ಹಸಿರು ಶಾಲೆ” ಎಂಬ ಪ್ರಶಸ್ತಿ ಲಭಿಸಿತ್ತು.

6 / 9
ಈಗಿನ ಕಾಲದಲ್ಲಿ ವಿದ್ಯಾರ್ಥಿನಿಗಳನ್ನು ಕೃಷಿಯತ್ತ ಒಲವು ಮೂಡಿಸುವ ಸಲುವಾಗಿ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ.

7 / 9
ಬ್ಯಾಗ್ ರಹಿತ ದಿನದ ವೇಳೆ ಮಕ್ಕಳನ್ನ ಹೊಲ ಗದ್ದೆಗಳಿಗೆ ಕರೆದೊಯ್ದು ಅಲ್ಲಿನ ಕೃಷಿ ಉಪಕರಣಗಳು, ಕೃಷಿ ಚಟುವಟಿಕೆ ಬಗ್ಗೆ ಶಿಕ್ಷಕರು ಪಾಠ ಮಾಡುತ್ತಾರೆ.

8 / 9
ಶಾಲೆಯಲ್ಲಿ ಮಕ್ಕಳಿಗೆ ವ್ಯಾಪಾರ ವ್ಯವಹಾರದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಶಾಲೆಯಲ್ಲಿ ಚುನಾವಣೆ ನಡೆಸಲಾಗುತ್ತದೆ.

9 / 9
ಅಲ್ಲದೇ ಗಿಲು, ಎತ್ತಿನ ಬಂಡಿ, ಬಿತ್ತನೆಗೆ ಕೂರಿಗೆ ಹೀಗೆ ಕೃಷಿ ಚಟುವಟಿಕೆಗಳಿಗೆ ರೈತರು ಬಳಸುವ  ವಸ್ತುಗಳನ್ನು ತಂದು ಈ ಶಾಲೆಯ ಮಕ್ಕಳಿಗೆ ಪಾಠ ಮಾಡಲಾಗುತ್ತದೆ.