- Kannada News Photo gallery CM Siddaramaiah warns officials in Mandya: Said Don't get caught lying, Here's the reason
ಸುಳ್ಳು ಹೇಳಿ ಸಿಕ್ಕಿಹಾಕಿಕೊಳ್ಳಬೇಡಿ: ಮಂಡ್ಯದಲ್ಲಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್: ಕಾರಣ ಇಲ್ಲಿದೆ
ಯಾರು ಏನೇ ಹೇಳಲಿ, ಮೊದಲು ಕೆರೆಗಳಿಗೆ ನೀರು ತುಂಬಿಸಿ. ಈಗ ರೈತರು ಬಿತ್ತನೆ ಮಾಡಿರುವ ಬೆಳೆಗಳ ರಕ್ಷಣೆ ಮಾಡಬೇಕು. ಮುಂದಿನ ಬೆಳೆಗೆ ನೀರು ಕೊಡಲು ಆಗೋದಿಲ್ಲ. ಹಾಗಾಗಿ ಈಗಿರುವ ಬೆಳೆಗಳ ರಕ್ಷಣೆಗೆ ಬೇಕಾದ ನೀರು ಕೊಡಿ ಎಂದು ಕೆಡಿಪಿ ಸಭೆಯಲ್ಲಿ ನೀರಾವರಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
Updated on:Oct 31, 2023 | 6:59 PM

ಸರ್ಕಾರದಿಂದ ಬಂದ ಅನುದಾನದ ಬಗ್ಗೆ ಸರಿಯಾದ ಮಾಹಿತಿ ಕೊಡಬೇಕು. ಅನುದಾನ ಬಂದಿರುವ ಹಾಗೂ ಬಳಕೆಯಾದ ಬಗ್ಗೆ ಮಾಹಿತಿ ಕೊಡಿ ಎಂದು ಮಂಡ್ಯ ಜಿ.ಪಂ. ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯಾವುದನ್ನೂ ಮುಚ್ಚುಮರೆ ಇಲ್ಲದೇ ಹೇಳಿ. ಸುಳ್ಳು ಹೇಳಬಾರದು. ಪ್ರಗತಿ ಪರಿಶೀಲನಾ ಸಭೆಗೆ ವಾಸ್ತವದ ವರದಿ ನೀಡಬೇಕು. ಸುಳ್ಳು ಹೇಳಿ ಸಿಕ್ಕಿಹಾಕಿಕೊಳ್ಳಬೇಡಿ ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್ ಮಾಡಿದರು.

ಇನ್ನು 4 ತಿಂಗಳಲ್ಲಿ ಅನುದಾನ ಬಳಸಿ ಉತ್ತಮ ಕೆಲಸ ಮಾಡಬೇಕು. ಜನ, ಜಾನುವಾರುಗಳಿಗೆ ನೀರು, ಮೇವಿನ ಅಭಾವ ಎದುರಾಗಬಾರದು. ಈ ಬಗ್ಗೆ ಡಿಸಿ, ಜಿ.ಪಂ. ಸಿಇಒ ಆಗಾಗ್ಗೆ ಪರಿಶೀಲನೆ ನಡೆಸಬೇಕು. ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿ ತೊಂದರೆ ಆಗಬಾರದು. ಅಗತ್ಯ ಅನುದಾನ ಕೊಡಲು ನಾವು ಬದ್ಧರಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಯಾರು ಏನೇ ಹೇಳಲಿ, ಮೊದಲು ಕೆರೆಗಳಿಗೆ ನೀರು ತುಂಬಿಸಿ. ಈಗ ರೈತರು ಬಿತ್ತನೆ ಮಾಡಿರುವ ಬೆಳೆಗಳ ರಕ್ಷಣೆ ಮಾಡಬೇಕು. ಮುಂದಿನ ಬೆಳೆಗೆ ನೀರು ಕೊಡಲು ಆಗೋದಿಲ್ಲ. ಹಾಗಾಗಿ ಈಗಿರುವ ಬೆಳೆಗಳ ರಕ್ಷಣೆಗೆ ಬೇಕಾದ ನೀರು ಕೊಡಿ ಎಂದು ಕೆಡಿಪಿ ಸಭೆಯಲ್ಲಿ ನೀರಾವರಿ ಅಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ ನೀಡಿದರು.

ಈ ಮಧ್ಯೆ, ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸ್ನ್ಯಾಕ್ಸ್ ನೀಡುತ್ತಿದ್ದವರನ್ನು ಸಿದ್ದರಾಮಯ್ಯ ಗದರಿದರು. ಪ್ರಗತಿ ಪರಿಶೀಲನಾ ಸಭೆ ಆರಂಭದಲ್ಲೇ ಸ್ನ್ಯಾಕ್ಸ್ ಸಿಬ್ಬಂದಿ ನೀಡ್ತಿದ್ದರು. ತಕ್ಷಣ ಸಿಎಂ, ಏಯ್ ನಡಿ ಆಚೆಗೆ, ನಾನು ಹೇಳ್ತಿರೋದು ಕೇಳಿಸ್ತಿಲ್ವಾ ನಿನಗೆ ಎಂದು ಗದರಿ ಕಳುಹಿಸಿದರು.

ಸಭೆಗೂ ಮುನ್ನ, ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ರೈತರ ಪ್ರತಿಭಟನೆಯಲ್ಲಿಯೂ ಭಾಗವಹಿಸಿದ ಸಿದ್ದರಾಮಯ್ಯ, ಈಗಿರುವ ಬೆಳೆಯನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಬೇಕಿದೆ. ಉಳಿದ ನೀರನ್ನು ತಮಿಳುನಾಡಿಗೂ ಕೊಡಬೇಕು, ಬೆಳೆಗೂ ಕೊಡಬೇಕಿದೆ. ಹೇಗಾದರೂ ಮಾಡಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದರು.
Published On - 6:56 pm, Tue, 31 October 23




