ಇಂದು ಇಬ್ಬರು ದಿಗ್ಗಜರ ಸಮಾಗಮವಾಗಿದೆ. ರಜನೀಕಾಂತ್ ಹಾಗೂ ಕಮಲ್ ಹಾಸನ್ ಅವರುಗಳು ಇಂದು ಪರಸ್ಪರ ಭೇಟಿಯಾಗಿದ್ದಾರೆ.
ಇಬ್ಬರೂ ನಟರು ಅಚಾನಕ್ಕಾಗಿ ಒಟ್ಟಿಗೆ ಭೇಟಿ ಆಗಿದ್ದಾರೆಯೇ ಹೊರತು, ಯಾವುದೇ ಸಿನಿಮಾ ಅಥವಾ ರಾಜಕೀಯದ ಕಾರಣಕ್ಕೆ ಭೇಟಿ ಆಗಿಲ್ಲ.
ಈ ಇಬ್ಬರೂ ನಟರು ಒಂದೇ ಸ್ಟುಡಿಯೋನಲ್ಲಿ ಬೇರೆ ಬೇರೆ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿದ್ದರು, ಹಾಗಾಗಿ ಬಿಡುವಿನ ವೇಳೆಯಲ್ಲಿ ಪರಸ್ಪರ ಭೇಟಿ ಆದರು.
ಕಮಲ್ ಹಾಸನ್ ‘ಇಂಡಿಯನ್ 2’ ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದಾರೆ. ಅದೇ ಸ್ಟುಡಿಯೋನಲ್ಲಿ ರಜನೀಕಾಂತ್ ತಮ್ಮ 170ನೇ ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದರು.
ಸುಮಾರು 40 ವರ್ಷಗಳಿಂದಲೂ ಗೆಳೆಯರಾಗಿರುವ ರಜನೀಕಾಂತ್ ಹಾಗೂ ಕಮಲ್ ಹಾಸನ್ ಪರಸ್ಪರ ಆಲಿಂಗಿಸಿಕೊಂಡು ಸ್ನೇಹ-ಪ್ರೇಮ ಪ್ರದರ್ಶಿಸಿದರು.
ಈ ಇಬ್ಬರು ಮತ್ತೆ ಒಟ್ಟಿಗೆ ಸಿನಿಮಾಗಳಲ್ಲಿ ನಟಿಸಬೇಕು ಎಂಬುದು ಅಭಿಮಾನಿಗಳ ಆಸೆ. ಆದರೆ ಆ ಆಸೆ ನೆರವೇರಲಿದೆಯೇ ಕಾದು ನೋಡಬೇಕಿದೆ.