ಪೂರ್ವ ಲಡಾಖ್‌ನ ರೆಜಾಂಗ್ ಲಾದಲ್ಲಿ ಉದ್ಘಾಟನೆಯಾದ ಯುದ್ಧ ಸ್ಮಾರಕದ ಚಿತ್ರಗಳು
TV9 Web | Updated By: ರಶ್ಮಿ ಕಲ್ಲಕಟ್ಟ
Updated on:
Nov 18, 2021 | 6:24 PM
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಪೂರ್ವ ಲಡಾಖ್‌ನ ರೆಜಾಂಗ್ ಲಾದಲ್ಲಿ ನವೀಕರಿಸಿದ ಯುದ್ಧ ಸ್ಮಾರಕವನ್ನು ಉದ್ಘಾಟಿಸಿದರು. 1962 ರಲ್ಲಿ ಭಾರತೀಯ ಸೈನಿಕರು ಚೀನಾದ ಸೈನಿಕರ ವಿರುದ್ಧ ಧೈರ್ಯದಿಂದ ಹೋರಾಡಿದ ಸ್ಥಳವಾಗಿದೆ ಇದು.
1 / 8
ಪೂರ್ವ ಲಡಾಖ್‌ನ ರೆಜಾಂಗ್ ಲಾದಲ್ಲಿ ನವೀಕರಿಸಿದ ಯುದ್ಧ ಸ್ಮಾರಕದೊಳಗಿನ ದೃಶ್ಯ
2 / 8
1962 ರ ಯುದ್ಧದ ಸಮಯದಲ್ಲಿ ರೆಜಾಂಗ್ ಲಾ ಯುದ್ಧದಲ್ಲಿ ಮಡಿದ ಸೈನಿಕರ ನೆನಪಿಗಾಗಿ ಈ ಸ್ಮಾರಕವನ್ನು ಮೊದಲು ಲಡಾಖ್‌ನ ಚುಶುಲ್‌ನಲ್ಲಿ ಸ್ಥಾಪಿಸಲಾಯಿತು.
3 / 8
ಈ ಯುದ್ಧದಲ್ಲಿ 13 ಕುಮಾನ್ ಬೆಟಾಲಿಯನ್‌ನ ಕಂಪನಿಯು ಪಿಎಲ್ಎ ಅನ್ನು ಚುಶುಲ್ ಕಣಿವೆಗೆ ದಾಟದಂತೆ ತಡೆಯಲು ಹೋರಾಡಿತು.
4 / 8
ಐತಿಹಾಸಿಕ 1962 ರ ಚೀನಾ-ಭಾರತೀಯ ಯುದ್ಧದ ಸಮಯದಲ್ಲಿ ಚೀನಾದ ಸೇನೆ ವಿರುದ್ಧ ಹೋರಾಡಿದ 13 ಕುಮಾನ್ ರೆಜಿಮೆಂಟ್ ಗೌರವಾರ್ಥವಾಗಿ ಹೊಸದಾಗಿ ನವೀಕರಿಸಿದ ಯುದ್ಧ ಸ್ಮಾರಕ
5 / 8
"ರೆಜಾಂಗ್ ಲಾ ಕದನವು ವಿಶ್ವದ ಹತ್ತು ಶ್ರೇಷ್ಠ ಮತ್ತು ಅತ್ಯಂತ ಸವಾಲಿನ ಮಿಲಿಟರಿ ಸಂಘರ್ಷಗಳಲ್ಲಿ ಒಂದಾಗಿದೆ" ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
6 / 8
ವಾಸ್ತವಿಕ ನಿಯಂತ್ರಣ ರೇಖೆಯಲ್ಲಿರುವ ಮೌಂಟೇನ್ ಪಾಸ್ ಆಗಿರುವ ರೆಜಾಂಗ್ ಲಾ ಕೂಡ 18 ನವೆಂಬರ್ 1962 ರಂದು ವೀರೋಚಿತ ಯುದ್ಧದ ಸ್ಥಳವಾಗಿತ್ತು. ಈ ಘಟನೆಯ 59 ನೇ ವಾರ್ಷಿಕೋತ್ಸವದಂದು ಸ್ಮಾರಕ ಉದ್ಘಾಟಿಸಲಾಗಿದೆ
7 / 8
ಸುಮಾರು ಒಂದೂವರೆ ವರ್ಷಗಳಿಂದ ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟಿನಲ್ಲಿ ಸಿಲುಕಿರುವ ಸಮಯದಲ್ಲಿ ನವೀಕರಿಸಿದ ಯುದ್ಧ ಸ್ಮಾರಕವನ್ನು ತೆರೆಯಲಾಗಿದೆ.
8 / 8
ಪೂರ್ವ ಲಡಾಖ್‌ನ ರೆಜಾಂಗ್ ಲಾದಲ್ಲಿ ನವೀಕರಿಸಿದ ಯುದ್ಧ ಸ್ಮಾರಕದಲ್ಲಿ ಹುತಾತ್ಮರ ಹೆಸರು