ಕೈಯಲ್ಲಿ ಮದರಂಗಿ, ಮುಖದಲ್ಲಿ ಮಂದಹಾಸ; ಮದುವೆ ಸಂಭ್ರಮದ ಫೋಟೋ ಹಂಚಿಕೊಂಡ ರಕುಲ್
ವಿವಾಹದ ದಿನಕ್ಕೂ ಮೊದಲು ಮೆಹಂದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಕುಲ್ ಪ್ರೀತ್ ಸಿಂಗ್ ಅವರು ಕೈಗೆ ಮದರಂಗಿ ಹಚ್ಚಿಕೊಂಡು ಮಿಂಚಿದ್ದಾರೆ. ಅವರ ಮೊಗದಲ್ಲಿ ನಗು ಇದೆ. ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಅವರು ಹಲವು ವರ್ಷಗಳಿಂದ ಪ್ರೀತಿಯಲ್ಲಿ ಇದ್ದರು. ಅವರು ಮದುವೆ ಆಗುವ ನಿರ್ಧಾರಕ್ಕೆ ಕುಟುಂಬದವರಿಗೆ ಖುಷಿ ಇದೆ.