ಹೋಟೆಲ್ ಉದ್ಯಮಕ್ಕೆ ಕಾಲಿಟ್ಟ ರಕುಲ್ ಪ್ರೀತ್ ಸಿಂಗ್; ಎಲ್ಲಿದೆ ರೆಸ್ಟೋರೆಂಟ್?

Updated on: Apr 13, 2024 | 12:30 PM

ಏಪ್ರಿಲ್ 16ರಂದು ರಕುಲ್ ಮೊದಲ ರೆಸ್ಟೋರೆಂಟ್ ಹೈದರಾಬಾದ್​ನಲ್ಲಿ ಆರಂಭಾಗಲಿದೆ. ಇದಕ್ಕೆ ಅವರು ‘ಆರಂಭಮ್’ ಎಂದು ಹೆಸರು ಇಟ್ಟಿದ್ದಾರೆ. ಸಖತ್ ಅದ್ದೂರಿಯಾಗಿ ಈ ಹೋಟೆಲ್ ನಿರ್ಮಾಣ ಆಗಿದೆ ಎಂದು ವರದಿ ಆಗಿದೆ.  

1 / 5
ನಟಿ ರಕುಲ್ ಪ್ರೀತ್ ಸಿಂಗ್ ಇತ್ತೀಚೆಗೆ ಸಖತ್ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ಅವರು ಮದುವೆ ಆದರು. ಈಗ ಅವರು ಮತ್ತೊಂದು ಕಾರಣಕ್ಕೆ ಸುದ್ದಿ ಆಗಿದ್ದರು. ಅವರು ಹೈದರಾಬಾದ್​ನಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ್ದಾರೆ.

ನಟಿ ರಕುಲ್ ಪ್ರೀತ್ ಸಿಂಗ್ ಇತ್ತೀಚೆಗೆ ಸಖತ್ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ಅವರು ಮದುವೆ ಆದರು. ಈಗ ಅವರು ಮತ್ತೊಂದು ಕಾರಣಕ್ಕೆ ಸುದ್ದಿ ಆಗಿದ್ದರು. ಅವರು ಹೈದರಾಬಾದ್​ನಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ್ದಾರೆ.

2 / 5

ರಕುಲ್ ಪ್ರೀತ್ ಸಿಂಗ್ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಇದೆ. ಅವರು ಈಗಾಗಲೇ ಹೈದರಾಬಾದ್ ಹಾಗೂ ವಿಶಾಖಪಟ್ಟಣದಲ್ಲಿ ಜಿಮ್ ಫ್ರಾಂಚೈಸಿ ಹೊಂದಿದ್ದಾರೆ. ಈಗ ಅವರು ಹೋಟೆಲ್ ಉದ್ಯಮಕ್ಕೂ ಕಾಲಿಟ್ಟಿದ್ದಾರೆ.

3 / 5

ಏಪ್ರಿಲ್ 16ರಂದು ಅವರ ಮೊದಲ ರೆಸ್ಟೋರೆಂಟ್ ಹೈದರಾಬಾದ್​ನಲ್ಲಿ ಆರಂಭಾಗಲಿದೆ. ಇದಕ್ಕೆ ಅವರು ‘ಆರಂಭಮ್’ ಎಂದು ಇಟ್ಟಿದ್ದಾರೆ. ಸಖತ್ ಅದ್ದೂರಿಯಾಗಿ ಈ ಹೋಟೆಲ್ ನಿರ್ಮಾಣ ಆಗಿದೆ ಎಂದು ವರದಿ ಆಗಿದೆ.  

4 / 5

ರಕುಲ್ ಪ್ರೀತ್ ಸಿಂಗ್ ಹೋಟೆಲ್ ಎಂದರೆ ಒಂದಷ್ಟು ಮಂದಿ ಅಲ್ಲಿಗೆ ತೆರಳುತ್ತಾರೆ. ಊಟ ಮಾಡುತ್ತಾರೆ. ಹೀಗಾಗಿ, ಆಹಾರದ ಬೆಲೆ ಕೂಡ ಸಖತ್ ದುಬಾರಿ ಆಗಿ ಇರಲಿದೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

5 / 5

ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಅವರನ್ನು ರಕುಲ್ ಮದುವೆ ಆದ ಬಳಿಕ ಉದ್ಯಮದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ನಟನೆಯನ್ನೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.  

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us