R Praggnanandhaa: ವಿಶ್ವ ಚಾಂಪಿಯನ್ ಕಾರ್ಲ್‌ಸನ್​ ಮಣಿಸಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ಪ್ರಗ್ನಾನಂದ..!

| Updated By: ಪೃಥ್ವಿಶಂಕರ

Updated on: Aug 22, 2022 | 6:32 PM

R Praggnanandhaa: ಪ್ರಗ್ನಾನಂದ ಈ ವರ್ಷ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಈ ಮೊದಲು ಆನ್‌ಲೈನ್ ಚೆಸ್ ಸ್ಪರ್ಧೆಗಳಲ್ಲಿ ವಿಶ್ವ ಚಾಂಪಿಯನ್ ಕಾರ್ಲ್‌ಸನ್ ಅವರನ್ನು ಎರಡು ಬಾರಿ ಸೋಲಿಸಿದ್ದಾರೆ.

1 / 5
ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ 16 ವರ್ಷದ ಆರ್ ಪ್ರಗ್ನಾನಂದ ಈ ವರ್ಷ ಮೂರನೇ ಬಾರಿಗೆ ವಿಶ್ವದ ನಂಬರ್ ಒನ್ ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್​ಗೆ ಸೋಲಿನ ರುಚಿ ತೋರಿಸಿದ್ದಾರೆ. ಎಫ್‌ಟಿಎಕ್ಸ್ ಕ್ರಿಪ್ಟೋ ಕಪ್‌ನ ಅಂತಿಮ ಸುತ್ತಿನಲ್ಲಿ ಭಾರತದ ಪ್ರಗ್ನಾನಂದ, ಕಾರ್ಲ್‌ಸೆನ್ ಅವರನ್ನು 4-2 ಅಂತರದಿಂದ ಸೋಲಿಸಿದರು. ಟೈಬ್ರೇಕ್‌ನಲ್ಲಿ ಎರಡು ಪಂದ್ಯಗಳನ್ನು ಒಳಗೊಂಡಂತೆ ಕಾರ್ಲ್‌ಸೆನ್‌ನಿಂದ ಸತತ ಮೂರು ಪಂದ್ಯಗಳನ್ನು ಪ್ರಗ್ನಾನಂದ್ ಗೆದ್ದುಕೊಂಡರು.

2 / 5
ಕಾರ್ಲ್‌ಸನ್ ವಿರುದ್ಧ ಜಯಗಳಿಸಿದರಾದರೂ ಅಂತಿಮ ಕೋಷ್ಟಕದಲ್ಲಿ ಪ್ರಗ್ನಾನಂದ ಎರಡನೇ ಸ್ಥಾನ ಪಡೆದರು. ಕಾರ್ಲ್‌ಸನ್ ಹೆಚ್ಚು ಅಂಕ ಗಳಿಸಿ ಪ್ರಶಸ್ತಿ ಗೆದ್ದರು.

3 / 5
ಕಾರ್ಲ್‌ಸನ್ ಒಟ್ಟು 16 ಅಂಕಗಳನ್ನು ಗಳಿಸಿದರೆ, ಪ್ರಗ್ನಾನಂದ 15 ಅಂಕಗಳೊಂದಿಗೆ ತಮ್ಮ ಅಭಿಯಾನವನ್ನು ಕೊನೆಗೊಳಿಸಿದರು. ಕಾರ್ಲ್‌ಸನ್ ಮತ್ತು ಪ್ರಗ್ನಾನಂದ ನಡುವಿನ ಮೊದಲ ಎರಡು ಪಂದ್ಯಗಳು ಡ್ರಾಗೊಂಡವು. ಮೂರನೇ ಗೇಮ್‌ನಲ್ಲಿ ನಾರ್ವೆಯ ಆಟಗಾರ ಜಯಭೇರಿ ಬಾರಿಸಿದರು. ಆದರೆ ಭಾರತದ ಗ್ರ್ಯಾಂಡ್‌ಮಾಸ್ಟರ್ ಛಲ ಬಿಡದೆ ನಾಲ್ಕನೇ ಗೇಮ್ ಗೆದ್ದು ಪಂದ್ಯವನ್ನು ಟೈಬ್ರೇಕರ್‌ಗೆ ಎಳೆದರು.

4 / 5
ಇದಾದ ನಂತರ ಟೈಬ್ರೇಕರ್‌ನಲ್ಲಿ ಎರಡೂ ಗೇಮ್‌ಗಳನ್ನು ಗೆಲ್ಲುವ ಮೂಲಕ ಭಾರತದ ಪ್ರಗ್ನಾನಂದ ಕಾರ್ಲ್‌ಸನ್‌ರನ್ನು ಅಚ್ಚರಿಗೊಳಿಸಿದರು.

5 / 5
ಪ್ರಗ್ನಾನಂದ ಈ ವರ್ಷ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಈ ಮೊದಲು ಆನ್‌ಲೈನ್ ಚೆಸ್ ಸ್ಪರ್ಧೆಗಳಲ್ಲಿ ವಿಶ್ವ ಚಾಂಪಿಯನ್ ಕಾರ್ಲ್‌ಸನ್ ಅವರನ್ನು ಎರಡು ಬಾರಿ ಸೋಲಿಸಿದ್ದಾರೆ.