Asia Cup 2022: ಏಷ್ಯಾಕಪ್​ನಲ್ಲಿ ಕ್ರಿಕೆಟ್ ಅಭಿಮಾನಿಗಳ ಕಣ್ಣು ಈ ಐದು ಆಟಗಾರರ ಮೇಲಿರಲಿದೆ

Asia Cup 2022: ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಈ ಏಷ್ಯಾಕಪ್ ಅತ್ಯಂತ ಮಹತ್ವದ್ದಾಗಿದೆ. ಸುಮಾರು ಒಂದು ತಿಂಗಳ ನಂತರ ರೀ ಎಂಟ್ರಿ ಆಗುತ್ತಿರುವ ಕೊಹ್ಲಿ ಪ್ರದರ್ಶನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

TV9 Web
| Updated By: ಪೃಥ್ವಿಶಂಕರ

Updated on:Aug 22, 2022 | 7:24 PM

ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಸಿದ್ಧತೆಗಾಗಿ ಎಲ್ಲಾ ತಂಡಗಳು ಆಗಸ್ಟ್ 27 ರಂದು ಪ್ರಾರಂಭವಾಗುವ ಏಷ್ಯಾಕಪ್ ಅನ್ನು ಪ್ರಮುಖವೆಂದು ಪರಿಗಣಿಸುತ್ತಿವೆ. ಆದಾಗ್ಯೂ ಕೆಲವು ಆಟಗಾರರ ಗುರಿಗಳು ವಿಭಿನ್ನವಾಗಿವೆ.

1 / 6
ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಈ ಏಷ್ಯಾಕಪ್ ಅತ್ಯಂತ ಮಹತ್ವದ್ದಾಗಿದೆ. ಸುಮಾರು ಒಂದು ತಿಂಗಳ ನಂತರ ರೀ ಎಂಟ್ರಿ ಆಗುತ್ತಿರುವ ಕೊಹ್ಲಿ ಪ್ರದರ್ಶನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ವಿರಾಮಕ್ಕೂ ಮುನ್ನ ಕೊಹ್ಲಿ ಕಳಪೆ ಫಾರ್ಮ್​ನೊಂದಿಗೆ ಹೋರಾಟ ನಡೆಸಿದರು. ಆಸ್ಟ್ರೇಲಿಯಾ ವಿರುದ್ಧದ ಟಿ20 ವಿಶ್ವಕಪ್‌ಗೂ ಮುನ್ನ ಈ ಟೀಂ ಇಂಡಿಯಾ ಸ್ಟಾರ್‌ಗೆ ಏಷ್ಯಾಕಪ್ ನಿರ್ಣಾಯಕವಾಗಿದೆ. ಐಪಿಎಲ್‌ನಲ್ಲಿ 16 ಪಂದ್ಯಗಳನ್ನಾಡಿರುವ ಕೊಹ್ಲಿ 341 ರನ್ ಗಳಿಸಿದ್ದರು. ಇದು ಕೊಹ್ಲಿ ಮೇಲೆ ಒತ್ತಡ ಹೇರಿತ್ತು. ಏಷ್ಯಾಕಪ್​ನಲ್ಲಿ ಅವರು ತಮ್ಮ ಹಳೆಯ ಫಾರ್ಮ್‌ಗೆ ಮರಳಲು ಬಯಸಿದ್ದಾರೆ.

2 / 6
ಈ ಟೂರ್ನಿಯಲ್ಲಿ ಪಾಕ್ ನಾಯಕ ಬಾಬರ್ ಅಜಮ್ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಿದ್ಧರಾಗಿದ್ದಾರೆ. ಪಾಕಿಸ್ತಾನ ತಂಡದ ಇತ್ತೀಚಿನ ಗೆಲುವಿನಲ್ಲಿ ಅವರು ಬ್ಯಾಟ್ಸ್‌ಮನ್‌ ಆಗಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಮೊಹಮ್ಮದ್ ರಿಜ್ವಾನ್ ಜೊತೆಗಿನ ಅವರ ಆರಂಭಿಕ ಜೋಡಿಯು ಪ್ರತಿ ತಂಡಕ್ಕೂ ದುಃಸ್ವಪ್ನವಾಗಿ ಉಳಿದಿದೆ. ಟಿ20 ಮಾದರಿಯಲ್ಲಿ 2686 ರನ್ ಗಳಿಸಿರುವ ಬಾಬರ್ ಈ ಬಾರಿ ತಂಡಕ್ಕೆ ಮೂರನೇ ಪ್ರಶಸ್ತಿ ನೀಡಲು ಬಯಸಿದ್ದಾರೆ.

3 / 6
ಸೂರ್ಯಕುಮಾರ್ ಯಾದವ್ ಏಷ್ಯಾಕಪ್ 2022 ರಲ್ಲಿ ಭಾರತಕ್ಕೆ ಅತಿ ದೊಡ್ಡ ಮ್ಯಾಚ್ ವಿನ್ನರ್ ಆಗಬಹುದು. ಇದು ಈ ಪಂದ್ಯಾವಳಿಯಲ್ಲಿ ಎದುರಾಳಿ ತಂಡಗಳಿಗೆ ದುಃಸ್ವಪ್ನವಾಗಬಹುದು. ಸದ್ಯ ಅಂತಾರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಸೂರ್ಯ ಐಪಿಎಲ್‌ನಲ್ಲೂ ಪ್ರಭಾವ ಬೀರಿದ್ದರು. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಅವರ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ.

4 / 6
ಅಗ್ರ ಕ್ರಮಾಂಕದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಅಫ್ಘಾನಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಹಜರತುಲ್ಲಾ ಝಜೈ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. 28 ಪಂದ್ಯಗಳಲ್ಲಿ 867 ರನ್ ಗಳಿಸಿರುವ ಅವರು ಇದೀಗ ಈ ಮಾದರಿಯಲ್ಲಿ 1000 ರನ್‌ಗಳ ಸಮೀಪದಲ್ಲಿದ್ದಾರೆ. ಅಫ್ಘಾನಿಸ್ತಾನ ತಂಡವು ಪ್ರಶಸ್ತಿ ಸ್ಪರ್ಧಿಯಾಗದಿರಬಹುದು. ಆದರೆ ತಂಡಗಳು ಝಜೈಯನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ.

5 / 6
ಈ ವರ್ಷ ಭಾರತ ಮತ್ತು ಶ್ರೀಲಂಕಾ ಪ್ರವಾಸದ ವೇಳೆ, ದಿನೇಶ್ ಚಾಂಡಿಮಲ್ ಟಿ20 ಯಲ್ಲಿ ಮಿಂಚಿದ್ದರು. ಆದರೆ ಆ ಬಳಿಕ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಕಳೆದ ಕೆಲವು ಸರಣಿಗಳಲ್ಲಿ ಅವರು ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅದಕ್ಕಾಗಿಯೇ ಅವರು ಏಷ್ಯಾಕಪ್‌ನಲ್ಲಿ ಪುನರಾಗಮನ ಮಾಡುತ್ತಿದ್ದಾರೆ.

6 / 6

Published On - 7:24 pm, Mon, 22 August 22

Follow us