Hospet: ಮರಳಿ ಬಾನಂಗಳಕ್ಕೆ ಹಾರಿದ ಅಪರೂಪದ ಯೂರೋಪಿನ್ ರಣಹದ್ಧು‌: ಇಲ್ಲಿವೆ ಫೋಟೋಸ್​​​

Edited By:

Updated on: Jan 13, 2023 | 8:23 PM

ಅಪರೂಪದ ಯೂರೋಪಿನ್ ರಣಹದ್ಧು‌‌ ಒಂದು ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿ ಕಂಡುಬಂದಿದೆ. ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಮತ್ತೆ ಹಾರಿ ಬಿಡಲಾಗಿದೆ.

1 / 5
ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ರಾಣಿಪೇಟೆಯ ಶಾಲಾ ಮಕ್ಕಳ ಕೈಗೆ ಸಿಕ್ಕಿದ್ದ 
ಅಪರೂಪದ ಯೂರೋಪಿನ್ ರಣಹದ್ಧು‌‌ ಮರಳಿಗೂಡಿಗೆ ಸೇರಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ರಾಣಿಪೇಟೆಯ ಶಾಲಾ ಮಕ್ಕಳ ಕೈಗೆ ಸಿಕ್ಕಿದ್ದ ಅಪರೂಪದ ಯೂರೋಪಿನ್ ರಣಹದ್ಧು‌‌ ಮರಳಿಗೂಡಿಗೆ ಸೇರಿದೆ.

2 / 5

ಪತ್ರಕರ್ತ‌‌ ಹಾಗೂ ಹವ್ಯಾಸ ಛಾಯಾಗ್ರಾಹಕ ಶಿವಶಂಕರ ಬಣಗಾರ್ ಅವರು ಈ ಯೂರೋಪಿನ್ ರಣಹದ್ದನ್ನು ಮಕ್ಕಳ ಕೈಯಿಂದ‌ ರಕ್ಷಿಸಿ, ತಾಲ್ಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕಿಗೆ ಹಸ್ತಾಂತರಿಸಿದ್ದಾರೆ.

3 / 5

ಅಪರೂಪವಾಗಿ ಕಂಡು ಬಂದ ರಣಹದ್ಧಿನ ನೈಜ ಗುರುತನ್ನು ಪತ್ತೆ ಮಾಡಿದ್ದು, ಬೃಹತ್ ಗಾತ್ರದ ಪಕ್ಷಿಯ ಎತ್ತರ, ಗಾತ್ರ, ತೂಕ, ಗರಿಗಳ ಬಣ್ಣ, ಮುಂತಾದ ಗುಣ, ಬಣ್ಣವನ್ನು ಪರೀಕ್ಷಿಸಿ, ಇದೊಂದು ವರ್ಷ ವಯೋಮಾನದ ಯೂರೋಪಿಯನ್ ಗ್ರಿಫನ್ ಎಂಬ ರಣಹದ್ಧು ಎಂಬುದನ್ನು ಖಚಿತ ಪಡಿಸಲಾಗಿದೆ.

4 / 5

ಮೃಗಾಲಯದ ತಜ್ಞ ಪಶುವೈದ್ಯೆ ಡಾ. ವಾಣಿ ಅವರು, ಅಸ್ವಸ್ಥ ಸ್ಥಿತಿಯಲ್ಲಿದ್ದ ಪಕ್ಷಿಗೆ ಸೂಕ್ತ ಚಿಕಿತ್ಸೆ ನೀಡಿದರು. ಬಳಿಕ ಅದನ್ನು ಹೊಸಪೇಟೆ ತಾಲ್ಲೂಕಿನ ಇಂಗಳಿಗಿ ಗ್ರಾಮದ ಬೆಟ್ಟದ ತುದಿಯಲ್ಲಿ ಹದ್ದನ್ನ ಹಾರಿ ಬಿಟ್ಟು ಪಂಜರ‌ದಿಂದ‌ ಮುಕ್ತಗೊಳಿಸಿದರು.

5 / 5

ಸಾಮಾನ್ಯವಾಗಿ ಹೆಚ್ಚಾಗಿ ಉತ್ತರ ಭಾರತದಲ್ಲಿ ಕಂಡು ಬರುವ ಈ ರಣಹದ್ಧುಗಳು ದಕ್ಷಿಣ ಭಾರತಕ್ಕೆ ವಲಸೆ ಬಂದಾಗ ಕೆಲವೊಮ್ಮೆ ನಿರ್ಜಲೀಕರಣದಿಂದ ಬಸವಳಿದು ನೆಲಕ್ಕೆ ಬೀಳುವುದು ಉಂಟು.

Loading...
Unable to load recommendations.
Follow Us