ಗಂಡ-ಹೆಂಡತಿ ಅಥವಾ ಪ್ರೇಮಿಗಳ ನಡುವಿನ ಸಂಬಂಧ ಹಳಸಲು ಅತ್ಯಂತ ಸಣ್ಣ ಘಟನೆಗಳೇ ಸಾಕಾಗುತ್ತದೆ. ಸಣ್ಣಪುಟ್ಟ ವಿಷಯಕ್ಕೂ ಕೆಲವೊಮ್ಮೆ ಜಗಳವಾಗುವುದು ಸಾಮಾನ್ಯ.
ಇಂತಹ ಕಹಿ ಸಮಯವನ್ನು ದಾಟಲು ಮತ್ತು ಸಂಬಂಧದ ಸಕಾರಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳಲು ಹಾಗೂ ನಮ್ಮ ಸಂಬಂಧವನ್ನು ಸರಿಪಡಿಸಲು ನಾವು ಜಗಳವಾದ ನಂತರ ಯಾವ ರೀತಿ ವರ್ತಿಸುತ್ತೇವೆ ಎಂಬುದು ಕೂಡ ಮುಖ್ಯವಾಗುತ್ತದೆ.
ಜಗಳದ ನಂತರ ಸಂಬಂಧವನ್ನು ಸರಿಪಡಿಸಲು ಕೆಲವು ಮಾರ್ಗಗಳು ಇಲ್ಲಿವೆ.
ಜಗಳವಾದ ನಂತರ ಅದೇ ವಿಷಯವನ್ನಿಟ್ಟುಕೊಂಡು ಹಠ ಸಾಧಿಸಬಾರದು. ಇಬ್ಬರೂ ಶಾಂತವಾದ ನಂತರ ಒಟ್ಟಿಗೇ ಕುಳಿತು ಜಗಳದ ಮೂಲ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಬೇಕು.
ಸಾಂದರ್ಭಿಕ ಚಿತ್ರ
ಪರಿಸ್ಥಿತಿ ಕೈ ಮೀರುತ್ತಿವೆ ಎಂದು ನಮಗೆ ಅನಿಸಿದಾಗ ನಾವು ವಿರಾಮ ತೆಗೆದುಕೊಳ್ಳಬೇಕು. ಸ್ವಲ್ಪ ಸಮಯದ ನಂತರ, ನಾವು ಆ ಬಗ್ಗೆ ಚರ್ಚಿಸಬಹುದು.
ಜಗಳವನ್ನು ಸಂಬಂಧವನ್ನು ಕೆಡಿಸುವ ವಿಷಯವೆಂದು ನೋಡುವ ಬದಲು, ನಾವು ಅದನ್ನು ಕಲಿಯುವ ಮತ್ತು ಬೆಳೆಯುವ ಅವಕಾಶವಾಗಿ ನೋಡಬೇಕು.
ನಮ್ಮ ಸಂಗಾತಿಯ ದೃಷ್ಟಿಕೋನವನ್ನು ಆಲಿಸಬೇಕು ಮತ್ತು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅವರೊಂದಿಗೆ ನಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬೇಕು.
ಎಲ್ಲದಕ್ಕಿಂತ ಮುಖ್ಯವಾಗಿ ಕೋಪದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಕೋಪ ಕಡಿಮೆಯಾದ ನಂತರ ಜಗಳವಾಗಲು ಕಾರಣವೇನು? ನಾವು ಎಲ್ಲಿ ತಿದ್ದಿಕೊಳ್ಳಬೇಕೆಂಬ ಬಗ್ಗೆ ಅರ್ಥ ಮಾಡಿಕೊಳ್ಳಬೇಕು.