ಮೊದಲೇ ಉಚಿತ ಬಸ್ ಪ್ರಯಾಣ ಖಚಿತ​​! ಅಂಥಾದ್ದರಲ್ಲಿ KSRTC ಬಸ್ ಕಂಡಕ್ಟರ್ 5 ಪಟ್ಟು ಹೆಚ್ಚು ದರದ ಟಿಕೆಟ್ ಕೊಟ್ರೆ ಪ್ರಯಾಣಿಕರ ಗತಿಯೇನು!? ​

ಸಾಧು ಶ್ರೀನಾಥ್​

Updated on: Jun 08, 2023 | 11:31 AM

ಮೊದಲೇ ಉಚಿತ ಬಸ್ ಪ್ರಯಾಣ ಖಚಿತ​​! ಅಂಥಾದ್ದರಲ್ಲಿ KSRTC ಬಸ್ ಕಂಡಕ್ಟರ್ 18 ಮಂದಿಗೆ 5 ಪಟ್ಟು ಹೆಚ್ಚು ದರದ ಟಿಕೆಟ್ ಕೊಟ್ರೆ ಹೆಂಗಾಗಬೇಡ!?

1 / 5
ಚಿಕ್ಕಮಗಳೂರು: ಮೊದಲೇ ನಮ್ಮ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಖಚಿತ​​! ಅಂಥಾದ್ದರಲ್ಲಿ KSRTC ಬಸ್ ಕಂಡಕ್ಟರ್ 5 ಪಟ್ಟು ಹೆಚ್ಚು ದರದ ಟಿಕೆಟ್ ಕೊಟ್ರೆ ಪ್ರಯಾಣಿಕರಿಗೆ (Passenger) ಹೆಂಗಾಗಬೇಡ!? KSRTC ಬಸ್ ಕಂಡಕ್ಟರ್ ಮಾಡಿರುವ ಈ  ಅಚಾತುರ್ಯದಿಂದ ಪ್ರವಾಸಿಗರು ಕಂಗಾಲಾಗಿದ್ದಾರೆ. ಜೊತೆಗೆ, ಅವರು ಆಂಧ್ರ ಮೂಲದ ಪ್ರವಾಸಿಗರು (Andhra Pradesh). ಬಸ್ ಟಿಕೆಟ್ ದರ ನೋಡಿ ಕಂಗಾಲಾಗಿದ್ದಾರೆ.

ಚಿಕ್ಕಮಗಳೂರು: ಮೊದಲೇ ನಮ್ಮ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಖಚಿತ​​! ಅಂಥಾದ್ದರಲ್ಲಿ KSRTC ಬಸ್ ಕಂಡಕ್ಟರ್ 5 ಪಟ್ಟು ಹೆಚ್ಚು ದರದ ಟಿಕೆಟ್ ಕೊಟ್ರೆ ಪ್ರಯಾಣಿಕರಿಗೆ (Passenger) ಹೆಂಗಾಗಬೇಡ!? KSRTC ಬಸ್ ಕಂಡಕ್ಟರ್ ಮಾಡಿರುವ ಈ ಅಚಾತುರ್ಯದಿಂದ ಪ್ರವಾಸಿಗರು ಕಂಗಾಲಾಗಿದ್ದಾರೆ. ಜೊತೆಗೆ, ಅವರು ಆಂಧ್ರ ಮೂಲದ ಪ್ರವಾಸಿಗರು (Andhra Pradesh). ಬಸ್ ಟಿಕೆಟ್ ದರ ನೋಡಿ ಕಂಗಾಲಾಗಿದ್ದಾರೆ.

2 / 5

ಪರ ರಾಜ್ಯಗಳ ಪ್ರಯಾಣಿಕರಿಗೆ ಉಚಿತ ಬಸ್​​ ಪ್ರಯಾಣ ಅನ್ವಯವಾಗೋಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆಯೇನೋ ಸರಿ. ಆದರೆ ಕಂಡಕ್ಟರ್​​ ಮಹಾಶಯ ಐದು ಪಟ್ಟು ದುಬಾರಿಯ ಟಿಕೆಟ್​ ನೀಡಿಬಿಟ್ಟರೆ ಗತಿಯೇನು? ಅಷ್ಟಕ್ಕೂ ಕಂಡಕ್ಟರ್ ಮಾಡಿರುವ ಯಡವಟ್ಟು ಕೆಲಸ ಏನೆಂದರೆ ಚಿಕ್ಕಮಗಳೂರು (Chikkamagalur) ಬದಲು ಮಂಗಳೂರಿಗೆ ಟಿಕೆಟ್ ನೀಡಿ ಕೈತೊಳೆದುಕೊಂಡಿದ್ದಾರೆ. 45 ರೂಪಾಯಿ ಟಿಕೆಟ್ ಬದಲು 202 ರೂಪಾಯಿ ಟಿಕೆಟ್ ನೀಡಿಬಿಟ್ಟಿದ್ದಾನೆ ಪುಣ್ಯಾತ್ಮ.

3 / 5

ಆಂಧ್ರ ಮೂಲದ ಒಟ್ಟು 18 ಜನ ಪ್ರವಾಸಿಗರು ಆಂಧ್ರದಿಂದ ರೈಲಿನ ಮೂಲಕ ಕಡೂರಿಗೆ ಬಂದಿಳಿದಿದ್ದರು. ಚಿಕ್ಕಮಗಳೂರಿನ ಬಾಬಾ ಬುಡನ್​ ಗಿರಿ ಬೆಟ್ಟಕ್ಕೆ (Baba Budangiri Hills) ಹೋಗುವುದು ಅವರ ಗಮ್ಯವಾಗಿತ್ತು. ನೀವು ಹೋಗಬೇಕಿರುವುದು ಚಿಕ್ಕಮಗಳೂರಿಗೆ, ಅಲ್ಲಿಗೇ ಬಿಡುವುದಾಗಿ ಹೇಳಿ ಬಸ್ ಹತ್ತಿಸಿಕೊಂಡಿದ್ದಾನೆ ಕಂಡಕ್ಟರ್. ಆದರೆ ಚಿಕ್ಕಮಗಳೂರು ಬದಲು ಮಂಗಳೂರಿಗೆ ಟಿಕೆಟ್ ನೀಡಿ ಪ್ರವಾಸಿಗರಿಗೆ ನೇರ ವಂಚನೆ ಎಸಗಿದ್ದಾನೆ.

4 / 5

ಒಂದು ಟಿಕೆಟ್ ಗೆ 202 ರಂತೆ 3,636 ರೂಪಾಯಿಯ ಟಿಕೆಟ್ ನೀಡಿಬಿಟ್ಟಿದ್ದಾನೆ ಕಂಡಕ್ಟರ್. ಜೊತೆಗೆ ಕಿಲಾಡಿ ಕಂಡಕ್ಟರ್ ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಆ ಹದಿನೆಂಟೂ ಮಂದಿ ಇಳಿಯುತ್ತಿದ್ದಂತೆ ದಡಾಬಢಾ ಅಂತಾ ಅವರ ಬಳಿಗೆ ತೆರಳಿ ನಯವಾದ ಮಾತಿನಲ್ಲಿ ಅವರಿಂದ ಟಿಕೆಟ್ ವಾಪಸ್ ಕೇಳಿದ್ದಾನೆ. ಕಡೂರಿನಿಂದ 40 ಕಿ.ಮೀ. ದೂರದ ಚಿಕ್ಕಮಗಳೂರಿಗೆ 202 ರೂಪಾಯಿ ಯಾಕೆ? ಎಂದು ಪ್ರವಾಸಿಗರು ಆಗ ಪ್ರಶ್ನೆ ಮಾಡಿದ್ದಾರೆ.

5 / 5

ಚಿಕ್ಕಮಗಳೂರು ಜಿಲ್ಲೆಯ ಕಡೂರು ಡಿಪೋಗೆ ಸೇರಿದ ಸದರಿ KSRTC ಬಸ್ ಕಡೂರಿನಿಂದ ಮಂಗಳೂರಿಗೆ ತೆರಳುತ್ತಿತ್ತು. ಈ ಪ್ರವಾಸಿಗರು ಚಿಕ್ಕಮಗಳೂರಿನ‌ ಬಾಬಾ ಬುಡನ್​ ಗಿರಿ ಬೆಟ್ಟಕ್ಕೆ ಹೋಗುವ ಬಗ್ಗೆ ಬಸ್ಸಿನ ಮಾಹಿತಿ ಕೇಳಿದ್ದರು. ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ಬಿಡುವುದಾಗಿ ಬಸ್ ಹತ್ತಿಸಿಕೊಂಡಿದ್ದ ಕಂಡಕ್ಟರ್. ರಾತ್ರಿ ಪ್ರಯಾಣಿಸುವ ಹೊರ ರಾಜ್ಯದ ಪ್ರವಾಸಿಗರಿಗೆ ನಿರಂತರವಾಗಿ ಇಂತಹ ವಂಚನೆಗಳು ಮಾಡುತ್ತಿರುವ ಆರೋಪ ಸದಾ ಕೇಳಿಬರುತ್ತಿದೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us