Rose Day 2022: ನಾಳೆಯ ರೋಸ್ ಡೇಗೆ ಯಾವ ಬಣ್ಣದ ಗುಲಾಬಿ ಹೂವು ಕೊಡಬೇಕು? ಇಲ್ಲಿದೆ ನಿಮ್ಮ ಗೊಂದಲಕ್ಕೆ ಉತ್ತರ
TV9 Web | Updated By: preethi shettigar
Updated on:
Feb 06, 2022 | 11:58 AM
Valentine’s Week 2022: ಫೆಬ್ರವರಿ 7 ರಿಂದ ಪ್ರೇಮಿಗಳ ವಾರ ಪ್ರಾರಂಭವಾಗಲಿದೆ. ಇದು ಗುಲಾಬಿ ದಿನದಿಂದ ಪ್ರಾರಂಭವಾಗುತ್ತದೆ. ಈ ದಿನದಂದು ಅನೇಕ ಜನರು ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ನೀವೂ ಈ ರೀತಿಯ ಯೋಚನೆ ಮಾಡುತ್ತಿದ್ದರೆ, ಒಮ್ಮೆ ನೀವು ವಿವಿಧ ಗುಲಾಬಿಗಳ ಅರ್ಥವನ್ನು ತಿಳಿದುಕೊಳ್ಳಿ, ಇದರಿಂದ ಯಾವುದೇ ಗೊಂದಲವಿರುವುದಿಲ್ಲ.
1 / 6
ಕೆಂಪು ಗುಲಾಬಿ: ನೀವು ನಿಜವಾಗಿಯೂ ಯಾರನ್ನಾದರೂ ತುಂಬಾ ಪ್ರೀತಿಸುತ್ತಿದ್ದರೆ ಮತ್ತು ನಿಮ್ಮ ಭಾವನೆಗಳನ್ನು ಅವರಿಗೆ ವ್ಯಕ್ತಪಡಿಸಲು ಬಯಸಿದರೆ, ಅಂತವರಿಗೆ ಕೆಂಪು ಗುಲಾಬಿಯನ್ನು ನೀಡಿ. ಕೆಂಪು ಗುಲಾಬಿಯನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
2 / 6
ಹಳದಿ ಗುಲಾಬಿ: ನೀವು ಯಾರನ್ನಾದರೂ ಸ್ನೇಹಕ್ಕಾಗಿ ಸಂಪರ್ಕಿಸಲು ಬಯಸಿದರೆ, ಅಂತವರಿಗೆ ಹಳದಿ ಗುಲಾಬಿಯನ್ನು ನೀಡಿ. ಹಳದಿ ಗುಲಾಬಿಗಳು ಸ್ನೇಹವನ್ನು ಪ್ರಾರಂಭಿಸಲು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.
3 / 6
ಬಿಳಿ ಗುಲಾಬಿ: ಬಿಳಿ ಗುಲಾಬಿ ಶುದ್ಧತೆ, ಮುಗ್ಧತೆ ಪ್ರತಿನಿಧಿಸುತ್ತದೆ. ಇದನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ದೀರ್ಘಕಾಲದವರೆಗೆ ಸಂಬಂಧವನ್ನು ಉಳಿಸಿಕೊಳ್ಳಲು ಭರವಸೆ ನೀಡುತ್ತದೆ. ನೀವು ಯಾರನ್ನಾದರೂ ತುಂಬಾ ಪ್ರೀತಿಸುತ್ತಿದ್ದರೆ, ನೀವು ಅವರಿಗೆ ಕೆಂಪು ಮತ್ತು ಬಿಳಿ ಗುಲಾಬಿಗಳಿಂದ ಮಾಡಿದ ಹೂಗುಚ್ಛಗಳನ್ನು ಸಹ ನೀಡಬಹುದು.
4 / 6
ಪಿಂಕ್ ಗುಲಾಬಿ: ನಿಮ್ಮ ಮದುವೆ ನಿಶ್ಚಯವಾಗಿದ್ದರೆ ಅಥವಾ ನಿಮ್ಮ ಸಂಗಾತಿಯನ್ನು ಡೇಟ್‌ಗೆ ಕರೆದೊಯ್ಯಲು ನೀವು ತಯಾರಿ ನಡೆಸುತ್ತಿದ್ದರೆ, ನೀವು ಅವರಿಗೆ ಪಿಂಕ್ ಬಣ್ಣದ ಗುಲಾಬಿಯನ್ನು ನೀಡಬಹುದು. ನೀವು ಅದನ್ನು ಸ್ನೇಹಿತರಿಗೆ ಸಹ ನೀಡಬಹುದು ಏಕೆಂದರೆ ಈ ಗುಲಾಬಿಯನ್ನು ಯಾರನ್ನಾದರೂ ಹೊಗಳಲು ಕೂಡ ನೀಡಲಾಗುತ್ತದೆ.
5 / 6
ಲ್ಯಾವೆಂಡರ್ ಬಣ್ಣದ ಗುಲಾಬಿ: ನೀವು ಮೊದಲ ನೋಟದಲ್ಲೇ ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಅಂತವರಿಗೆ ಲ್ಯಾವೆಂಡರ್ ಬಣ್ಣದ ಗುಲಾಬಿ ನೀಡಿ. ಇದು ಮೊದಲ ನೋಟದಲ್ಲೇ ಪ್ರೀತಿ ಅಥವಾ ಆಕರ್ಷಣೆಯನ್ನು ವ್ಯಕ್ತಪಡಿಸುತ್ತದೆ.
6 / 6
ಹಸಿರು ಗುಲಾಬಿ: ಹಸಿರು ಗುಲಾಬಿ ಸಂತೋಷ, ಸಂಪತ್ತಿನ ಸಂಕೇತವಾಗಿದೆ. ಪ್ರೇಮಿಗಳ ದಿನದ ಸಂದರ್ಭದಲ್ಲಿ ನಿಮ್ಮ ಸಂಗಾತಿಯನ್ನು ಯಶಸ್ಸಿನ ಉತ್ತುಂಗದಲ್ಲಿ ನೀವು ನೋಡಲು ಬಯಸಿದರೆ, ನೀವು ಈ ಗುಲಾಬಿಯನ್ನು ನೀಡಬಹುದು.