- Kannada News Photo gallery Royal Enfield Super Meteor 650 launched in India at Rs 3.49 lakh variant wise prices, feature
RE Super Meteor 650: ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೋರ್ 650 ಬಿಡುಗಡೆ
ರಾಯಲ್ ಎನ್ಫೀಲ್ಡ್ ಕಂಪನಿಯು ತನ್ನ ಹೊಸ ಸೂಪರ್ ಮಿಟಿಯೋರ್ 650 ಕ್ರೂಸರ್ ಬೈಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಬೈಕ್ ಮಾದರಿಯು ಆಸ್ಟ್ರಲ್, ಇಂಟರ್ ಸ್ಟೆಲ್ಲಾರ್ ಮತ್ತು ಸೆಲೆಸ್ಟಿಯಲ್ ಎನ್ನುವ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಬೈಕಿನ ಮತ್ತಷ್ಟು ಮಾಹಿತಿ ಇಲ್ಲಿದೆ.
Updated on:Jan 17, 2023 | 9:09 PM

ಕ್ಲಾಸಿಕ್ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್ಫೀಲ್ಡ್ ಕಂಪನಿಯು ತನ್ನ ಬಹುನೀರಿಕ್ಷಿತ ಸೂಪರ್ ಮಿಟಿಯೋರ್ 650 ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಆಸ್ಟ್ರಲ್, ಇಂಟರ್ ಸ್ಟೆಲ್ಲಾರ್ ಮತ್ತು ಸೆಲೆಸ್ಟಿಯಲ್ ವೆರಿಯೆಂಟ್ ಗಳೊಂದಿಗೆ ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 3.49 ಲಕ್ಷದಿಂದ ರೂ. 3.79 ಲಕ್ಷ ಬೆಲೆ ಹೊಂದಿದೆ.

ಹೊಸ ಬೈಕಿನಲ್ಲಿ 648 ಸಿಸಿ, ಟ್ವಿನ್ ಸಿಲಿಂಡರ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 47 ಹಾರ್ಸ್ ಪವರ್ ಮತ್ತು 52 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಅತ್ಯುತ್ತಮ ವಿನ್ಯಾಸದೊಂದಿಗೆ ಹೊಸ ಬೈಕ್ ಮಾದರಿಯು 2260 ಎಂಎಂ ಉದ್ದ, 890 ಎಂಎಂ ಅಗಲ, 1155 ಎಂಎಂ ಎತ್ತರ, 1500 ಎಂಎಂ ವ್ಹೀಲ್ ಬೆಸ್ ಮತ್ತು 135 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ನೊಂದಿಗೆ ಒಟ್ಟಾರೆ 214 ಕೆಜಿ ತೂಕ ಹೊಂದಿದೆ.

ಹೊಸ ಬೈಕಿನಲ್ಲಿ ಗರಿಷ್ಠ ಸುರಕ್ಷತೆಗಾಗಿ 320 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 300 ಎಂಎಂ ರಿಯರ್ ಡಿಸ್ಕ್ ಬ್ರೇಕ್ ಜೊತೆಗೆ ಡ್ಯುಯಲ್ ಚಾನಲ್ ಎಬಿಎಸ್ ನೀಡಲಾಗಿದ್ದು, 15.7 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಜೋಡಿಸಲಾಗಿದೆ.

ಹೊಸ ಪ್ಲ್ಯಾಟ್ ಫಾರ್ಮ್ ಆಧರಿಸಿರುವ ಸೂಪರ್ ಮಿಟಿಯೋರ್ 650 ಬೈಕಿನಲ್ಲಿ ಯುಎಸ್ ಡಿ ಫೋರ್ಕ್, ಲಾಂಗ್ ಫ್ರಂಟ್ ವಿಂಡ್ ಸ್ಕ್ರೀನ್, ಟೂರಿಂಗ್ ಸೀಟ್, ಪಿಲಿಯನ್ ಬ್ಯಾಕ್ ರೇಸ್ಟ್, ಎಲ್ಇಡಿ ಹೆಡ್ ಲೈಟ್ ಸೌಲಭ್ಯಗಳು ಗಮನಸೆಳೆಯುತ್ತವೆ.
Published On - 9:09 pm, Tue, 17 January 23




