ಮಂತ್ರಾಲಯದ ರಾಯರ ಮಠಕ್ಕೆ ಮತ್ತೆ ಹರಿದುಬಂತು ಕೋಟಿ ಗಟ್ಟಲೆ ಕಾಣಿಕೆ
34 ದಿನಗಳಲ್ಲಿ ರಾಯರ ಹುಂಡಿಯಲ್ಲಿ ದಾಖಲೆ 3 ಕೋಟಿ 53 ಲಕ್ಷ ರೂ. ಕಾಣಿಕೆ ಸಂಗ್ರಹ
3 ಕೋಟಿ 53 ಲಕ್ಷ ರೂ. ದಾಖಲೆ ಮೊತ್ತದ ಕಾಣಿಗೆ ಸಂಗ್ರಹಗೊಂಡಿದ್ದು, ಶ್ರೀಮಠದ ಇತಿಹಾಸದಲ್ಲಿಯೇ ಹುಂಡಿಯಲ್ಲಿ ಇಷ್ಟೊಂದು ಮೊತ್ತದ ಕಾಣಿಗೆ ಸಂಗ್ರಹವಾಗಿದೆ.
ಭಕ್ತರು, ದಾನಿಗಳು ಹುಂಡಿಯಲ್ಲಿ ಹಾಕಿದ್ದ ದೇಣಿಗೆಯನ್ನು ಶ್ರೀಮಠದ ಸಿಬ್ಬಂದಿ, ಸೇವಕರು, ನೂರಾರು ಭಕ್ತರು ನಡೆಸಿದ ಎಣಿಕೆ ಕಾರ್ಯದಲ್ಲಿ ರು.3,46,20,432 ಮೌಲ್ಯದ ನೋಟುಗಳು, ರು.7,59,420 ಮೌಲ್ಯದ ನಾಣ್ಯಗಳು ಸೇರಿದಂತೆ ಒಟ್ಟು ರು.3,53,79,852 ರುಪಾಯಿಗಳು ಹುಂಡಿಯಲ್ಲಿ ಸಂಗ್ರಹವಾಗಿದೆ.
ಇದರ ಜೊತೆಗೆ 197 ಗ್ರಾಂ. ಚಿನ್ನ, 1 ಕೆ.ಜಿ. 187 ಗ್ರಾಂ. ಬೆಳ್ಳಿಯನ್ನು ಭಕ್ತರು ಹುಂಡಿಯಲ್ಲಿ ಹಾಕಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಕೇವಲ 34 ದಿನಗಳಲ್ಲಿ 3.53 ಕೋಟಿ ರೂ. ಮೊತ್ತದ ಕಾಣಿಗೆ ಸಂಗ್ರಹಗೊಂಡಿದ್ದು, ಶ್ರೀಮಠದ ಇತಿಹಾಸದಲ್ಲಿಯೇ ಇದೇ ಮೊದಲು
ಶ್ರೀಮಠದಲ್ಲಿ ಪ್ರತಿ ತಿಂಗಳಿನಂತೆ ಮೇ ತಿಂಗಳು ಸೇರಿ 34 ದಿನಗಳಲ್ಲಿ ರಾಯರ ಮಠಕ್ಕೆ ಭಕ್ತಸಾಗರವೇ ಹರಿದುಬಂದಿದೆ
ಬೇಸಿಗೆ ರಜೆ ಹಿನ್ನೆಲೆ ಎಪ್ರಿಲ್- ಮೇ ತಿಂಗಳಲ್ಲಿ ಬೇರೆ-ಬೇರೆ ರಾಜ್ಯಗಳಿಂದ ಭಕ್ತರು ರಾಯರ ದರ್ಶನ ಪಡೆದಿದ್ದಾರೆ.
ಎಪ್ರಿಲ್ ಹಾಗೂ ಮೇ ತಿಂಗಳಿನ ಒಟ್ಟು 34 ದಿನಗಳ ಹುಂಡಿ ಎಣಿಕೆ ಮಾಡಲಾಗಿದೆ.