- Kannada News Photo gallery Cricket photos Kannada News | Mathew Hayden Picks His Best XI For IPL 2023
IPL 2023: ಐಪಿಎಲ್ನ ಅತ್ಯುತ್ತಮ ಆಡುವ ಬಳಗ ಹೆಸರಿಸಿದ ಮ್ಯಾಥ್ಯೂ ಹೇಡನ್
IPL 2023 Best XI: ಈ ತಂಡದಲ್ಲಿ ಆರ್ಸಿಬಿ ತಂಡದ ಏಕೈಕ ಆಟಗಾರ ಮಾತ್ರ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಗುಜರಾತ್ ಟೈಟಾನ್ಸ್ ತಂಡದ ಐವರು ಹಾಗೂ ಸಿಎಸ್ಕೆ ತಂಡ ಮೂವರನ್ನು ಆಯ್ಕೆ ಮಾಡಿದ್ದಾರೆ.
Updated on: May 31, 2023 | 11:23 PM

IPL 2023: ಗುಜರಾತ್ ಟೈಟಾನ್ಸ್ ತಂಡವನ್ನು ಸೋಲುಣಿಸಿ 16ನೇ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ ರಂಗೀನ್ ಟೂರ್ನಿ ಕೂಡ ಮುಕ್ತಾಯಗೊಂಡಿದೆ.

ಇತ್ತ ಈ ಬಾರಿಯ ಐಪಿಎಲ್ನಲ್ಲಿ ಕಾಮೆಂಟೇಟರ್ ಆಗಿ ಕಾರ್ಯ ನಿರ್ಹಿಸಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್, ಈ ಬಾರಿ ಟೂರ್ನಿಯ ಬೆಸ್ಟ್ ಆಟಗಾರರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದ್ದಾರೆ.

ಈ ತಂಡದಲ್ಲಿ ಆರ್ಸಿಬಿ ತಂಡದ ಏಕೈಕ ಆಟಗಾರ ಮಾತ್ರ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಗುಜರಾತ್ ಟೈಟಾನ್ಸ್ ತಂಡದ ಐವರು ಹಾಗೂ ಸಿಎಸ್ಕೆ ತಂಡ ಮೂವರನ್ನು ಆಯ್ಕೆ ಮಾಡಿದ್ದಾರೆ. ಹಾಗಿದ್ರೆ ಮ್ಯಾಥ್ಯೂ ಹೇಡನ್ ಅವರ ಬೆಸ್ಟ್ ಇಲೆವೆನ್ನಲ್ಲಿ ಸ್ಥಾನ ಪಡೆದಿರುವ ಆಟಗಾರರು ಯಾರೆಲ್ಲಾ ಎಂದು ನೋಡೋಣ...

1. ಶುಭ್ಮನ್ ಗಿಲ್ (GT)

2. ರುತುರಾಜ್ ಗಾಯಕ್ವಾಡ್ (CSK)

3. ಫಾಫ್ ಡುಪ್ಲೆಸಿಸ್ (RCB)

4. ಸೂರ್ಯಕುಮಾರ್ ಯಾದವ್ (MI)

5. ಕ್ಯಾಮರೋನ್ ಗ್ರೀನ್ (MI)

6. ರವೀಂದ್ರ ಜಡೇಜಾ (CSK)

7. ಎಂಎಸ್ ಧೋನಿ (CSK)

8. ರಶೀದ್ ಖಾನ್ (GT)

9. ನೂರ್ ಅಹ್ಮದ್ (GT)

10. ಮೊಹಮ್ಮದ್ ಶಮಿ (GT)

11. ಮೋಹಿತ್ ಶರ್ಮಾ (GT)



















