
ಗುಜರಾತ್ನ ದ್ವಾರಕಾದಲ್ಲಿರೋ ಶ್ರೀ ಶಂಕರಾಚಾರ್ಯರ ಶಾರದಾ ಪೀಠಕ್ಕೆ ನೂತನ ಪೀಠಾಧಿಪತಿಯಾಗಿ ಸದಾನಂದ ಸರಸ್ವತೀ ಸ್ವಾಮೀಜಿ ಪಟ್ಟಾಭಿಷೇಕ ನೆರವೇರಿತು.

ನೂತನ ಪೀಠಾಧಿಪತಿಯಾಗಿ ಸದಾನಂದ ಸರಸ್ವತೀ ಸ್ವಾಮೀಜಿ ಪಟ್ಟಾಭಿಷೇಕ ನೆರವೇರಿದ್ದು, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಂಡಿದ್ದರು.

ಗುಜರಾತ್ನ ದ್ವಾರಕಾದಲ್ಲಿ ಕರ್ನಾಟಕದ ಶೃಂಗೇರಿ ಪೀಠದ ವಿಧುಶೇಖರ ಭಾರತೀ ಶ್ರೀಗಳು ಶಾಸ್ತ್ರೋಕ್ತವಾಗಿ ಪಟ್ಟಾಭಿಷೇಕ ನಡೆಸಿಕೊಟ್ಟರು.

ಗುಜರಾತಿಗೆ ತೆರಳಿದ್ದ ಸಂದರ್ಭದಲ್ಲಿ ದ್ವಾರಕಾ ವನದಲ್ಲಿರುವ ಶ್ರೀ ನಾಗೇಶ್ವರ ಜ್ಯೋತಿರ್ಲಿಂಗಕ್ಕೆ ಪೂಜೆ ಸಲ್ಲಿಸಿದರು.

ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಗಳ ಆಶೀರ್ವಾದದೊಂದಿಗೆ ಶ್ರೀ ವಿಧುಶೇಖರ ಭಾರತಿ ಶ್ರೀಗಳು ನಡೆಸಿಕೊಟ್ಟ ಶಾಸ್ತ್ರೋಕ್ತ ಪಟ್ಟಾಭಿಷೇಕವನ್ನು ನೋಡುವ ಭಾಗ್ಯ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಸುಕೃತ ಎಂದು ಹೇಳಿದರು.

ಇನ್ನು ಪಟ್ಟಾಭಿಷೇಕದಲ್ಲಿ ಭಾಗಿಯಾಗಿ ಸಚಿವ ಡಾ.ಕೆ.ಸುಧಾಕರ್ ಮಾತನಾಡಿದರು.
Published On - 4:54 pm, Sun, 16 October 22