Updated on: Feb 07, 2023 | 3:30 PM
ಕಲ್ಲಂಗಡಿ ಸಲಾಡ್: ಕೇವಲ 20 ನಿಮಿಷಗಳಲ್ಲಿ ನೀವು ಕಲ್ಲಂಗಡಿ ಸಲಾಡ್ ತಯಾರಿಸಬಹುದಾಗಿದೆ. ಕಲ್ಲಂಗಡಿ ಹಣ್ಣು, ಈರುಳ್ಳಿಗಳು , ದಾಳಿಂಬೆ, ಸೌತೆಕಾಯಿ ಮುಂತಾದವುಗಳನ್ನು ಬಳಸಿ ತಯಾರಿಸಲಾಗುತ್ತದೆ.
ಬಾರ್ಲಿ ಸಲಾಡ್: ಬೇಯಿಸಿದ ಬಾರ್ಲಿ, ಜೋಳ, ಬೆಳ್ಳುಳ್ಳಿ ಮುಂತಾದ ಆರೋಗ್ಯಕರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಬಾರ್ಲಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ಮೆಗ್ನೀಸಿಯಮ್, ಸತು ಮತ್ತು ತಾಮ್ರ ಸಮೃದ್ಧವಾಗಿದ್ದು, ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ಕಪ್ಪು ದ್ರಾಕ್ಷಿಯೊಂದಿಗಿನ ಕ್ಯಾರೆಟ್ ಸಲಾಡ್: ಕ್ಯಾರೆಟ್,ಕಪ್ಪು ದ್ರಾಕ್ಷಿ, ಬಾದಾಮಿ, ಒಣದ್ರಾಕ್ಷಿ ಮತ್ತು ಸ್ಪ್ರಿಂಗ್ ಆನಿಯನ್‌ಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಊಟದ ನಂತರ ನೀವಿದನ್ನು ಸವಿಯಬಹುದು.
ಬೀನ್ಸ್ ಸಲಾಡ್: ಬೆಳ್ಳುಳ್ಳಿ, ಹಸಿರು ಬೀನ್ಸ್ , ಮೆಣಸು, ಉಪ್ಪು ಮತ್ತು ಆಲಿವ್ ಎಣ್ಣೆ ಬಳಸಿ ತಯಾರಿಸಲಾಗುತ್ತದೆ. ಹಸಿರು ಬೀನ್ಸ್ನಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಯಲ್ಲಿ ಸಮೃದ್ಧವಾಗಿದೆ.
ಬೀಟ್ರೂಟ್ ಸಲಾಡ್: ಬೀಟ್ರೂಟ್ , ಫೆಟಾ ಚೀಸ್,ಹಸಿ ಮೆಣಸು, ಕೊತ್ತಂಬರಿ ಸೊಪ್ಪು ಮತ್ತು ಒಂದು ಚಿಟಿಕೆ ಉಪ್ಪು ಸೇರಿಸಿ ತಯಾರಿಸಹುದಾಗಿದೆ. ಬೀಟ್ರೂಟ್ ದೇಹದಲ್ಲಿನ ರಕ್ತಹೀನತೆ ಸಮಸ್ಯೆಗೆ ಉತ್ತಮ ಔಷಧಿಯಾಗಿದೆ.
ಕುರುಕುಲಾದ ರಿಬ್ಬನ್ ಸಲಾಡ್: ಕ್ಯಾರೆಟ್,ಸೌತೆಕಾಯಿ, ಚೆರ್ರಿ ಮತ್ತು ಟೊಮೆಟೊಗಳನ್ನು ಬಳಸಿ ತಯಾರಿಸಲಾಗುತ್ತದೆ. ಪೌಷ್ಟಿಕಾಂಶಗಳು ಸಮೃದ್ಧವಾಗಿರುವ ತರಕಾರಿಗಳನ್ನು ಬಳಸುವುದರಿಂದ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ವಾಲ್ನಟ್ ಸಲಾಡ್: ವಾಲ್ನಟ್, ವಿನೆಗರ್, ಚೆರ್ರಿ, ಟೊಮೆಟೊ ಮತ್ತು ಚೈನೀಸ್ ಎಲೆಕೋಸುಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ.
Published On - 3:30 pm, Tue, 7 February 23