- Kannada News Photo gallery Pista Side Effects: Pistachios are good for heart health but beware of the side effects of this nut
Pista Side Effects: ಪಿಸ್ತಾ ಆರೋಗ್ಯಕ್ಕೆ ಒಳ್ಳೆಯದೆಂದು ಅತಿಯಾಗಿ ತಿಂದರೆ ತೊಂದರೆ ಖಚಿತ!
ಪಿಸ್ತಾದಲ್ಲಿ ನಾರಿನಂಶ ಅತಿ ಹೆಚ್ಚು. ಆದ್ದರಿಂದ, ಅವುಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ನಿಮ್ಮ ಜೀರ್ಣಕ್ರಿಯೆಗೆ ಒಳ್ಳೆಯದು. ಪಿಸ್ತಾ ಬೀಜಗಳನ್ನು ಅತಿ ಹೆಚ್ಚು ಸೇವಿಸಿದರೆ ಅನಾನುಕೂಲ ಖಚಿತ. ಅವುಗಳ ಮಾಹಿತಿ ಇಲ್ಲಿದೆ.
Updated on: Feb 07, 2023 | 2:37 PM

ಪಿಸ್ತಾದಲ್ಲಿ ಪ್ರೋಟೀನ್, ಫೈಬರ್, ಆ್ಯಂಟಿ ಆಕ್ಸಿಡೆಂಟ್ ಅಧಿಕವಾಗಿರುವುದರಿಂದ ಇದು ಆರೋಗ್ಯಕ್ಕೆ ಬಹಳ ಉಪಯುಕ್ತವಾದ ಆಹಾರ. ಅತ್ಯಂತ ರುಚಿಯಾಗಿರುವ ಪಿಸ್ತಾವನ್ನು ತಿಂದರೆ ತಿನ್ನುತ್ತಲೇ ಇರಬೇಕು ಎನಿಸುವುದು ಸಹಜ.

ಈ ಪಿಸ್ತಾ ದೇಹದ ತೂಕ ಇಳಿಸಿಕೊಳ್ಳಲು, ಹೃದಯ ಹಾಗೂ ಕರುಳಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಐಸ್ಕ್ರೀಂ, ಸ್ವೀಟ್ ಮುಂತಾದವುಗಳಲ್ಲಿ ಪಿಸ್ತಾವನ್ನು ಬಳಸಲಾಗುತ್ತದೆ.

ಮೂತ್ರಪಿಂಡದ ತೊಂದರೆಗಳನ್ನು ತಡೆಗಟ್ಟಲು ಪಿಸ್ತಾಗಳಂತಹ ಪೊಟ್ಯಾಸಿಯಮ್ ಅಧಿಕವಾಗಿರುವ ಬೀಜಗಳ ಸೇವನೆಯನ್ನು ಕಂಟ್ರೋಲ್ನಲ್ಲಿಟ್ಟುಕೊಳ್ಳುವುದು ಉತ್ತಮ. ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ ಇರುವ ಜನರು ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಅನ್ನು ಹೊಂದಿರುತ್ತಾರೆ. ಪಿಸ್ತಾದಲ್ಲಿ ಸೋಡಿಯಂ ಅಂಶ ಹೆಚ್ಚಾಗಿರುವುದರಿಂದ ಮಿತವಾದ ಬಳಕೆ ಒಳ್ಳೆಯದು.

ಭಾರತೀಯ ಸಿಹಿತಿಂಡಿಗಳು, ಐಸ್ ಕ್ರೀಮ್, ಚಾಕೊಲೇಟ್ಗಳು ಮತ್ತು ಇತರ ಅನೇಕ ಭಕ್ಷ್ಯಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಪಿಸ್ತಾಗಳು ತೂಕವನ್ನು ಕಳೆದುಕೊಳ್ಳಲು, ಕರುಳಿನ ಆರೋಗ್ಯವನ್ನು ನಿಯಂತ್ರಿಸಲು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಈ ಪಿಸ್ತಾಗಳಲ್ಲಿ ಕಾರ್ಬೋಹೈಡ್ರೇಟ್‌ಗಳು, ಫೈಬರ್, ಪ್ರೋಟೀನ್, ಕೊಬ್ಬು, ಪೊಟ್ಯಾಸಿಯಮ್ ಮತ್ತು ವಿಟಮಿನ್‌ಗಳು ಅಧಿಕವಾಗಿವೆ. ಆದರೆ, ಈ ಪಿಸ್ತಾ ಬೀಜಗಳನ್ನು ಅತಿ ಹೆಚ್ಚು ಸೇವಿಸಿದರೆ ಅನಾನುಕೂಲ ಖಚಿತ. ಅವುಗಳ ಮಾಹಿತಿ ಇಲ್ಲಿದೆ.

ಪಿಸ್ತಾ ನಮ್ಮ ಹೃದಯಕ್ಕೆ ಅತ್ಯಂತ ಪ್ರಯೋಜನಕಾರಿ. ಇದು ಅಪಧಮನಿಯ ಆರೋಗ್ಯವನ್ನು ಸುಧಾರಿಸುವುದಲ್ಲದೆ, ಉರಿಯೂತ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ, ನೀವು ಹೆಚ್ಚಾಗಿ ಪಿಸ್ತಾವನ್ನು ಸೇವಿಸಿದರೆ, ರಕ್ತದೊತ್ತಡದ ಮಟ್ಟದಲ್ಲಿ ವ್ಯತ್ಯಾಸ ಉಂಟಾಗಬಹುದು. ಇದರಿಂದ ಮಸುಕಾದ ದೃಷ್ಟಿ, ತಲೆತಿರುಗುವಿಕೆ ಮತ್ತು ಮೂರ್ಛೆ ಮುಂತಾದ ಅಡ್ಡ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.

ಹುರಿದ ಮತ್ತು ಉಪ್ಪುಸಹಿತ ಪಿಸ್ತಾಗಳು ಹೆಚ್ಚು ಅಪಾಯಕಾರಿ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಇದ್ದು, ಸೋಡಿಯಂ ಅಧಿಕ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

ಪಿಸ್ತಾದಲ್ಲಿ ನಾರಿನಂಶ ಅತಿ ಹೆಚ್ಚು. ಆದ್ದರಿಂದ, ಅವುಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ನಿಮ್ಮ ಜೀರ್ಣಕ್ರಿಯೆಗೆ ಒಳ್ಳೆಯದು. ಆದರೆ ನೀವು ಅವುಗಳನ್ನು ಹೆಚ್ಚಾಗಿ ಸೇವಿಸಿದರೆ, ಅವು ಜೀರ್ಣಕ್ರಿಯೆಯನ್ನು ತೊಂದರೆಗೊಳಿಸುತ್ತವೆ. ಇದರಿಂದ ಅತಿಸಾರ, ಸೆಳೆತ, ಹೊಟ್ಟೆ ನೋವು, ಕರುಳಿನ ನೋವು ಉಂಟಾಗುತ್ತದೆ.

ಪಿಸ್ತಾಗಳು ಜಠರಗರುಳಿನ ಪ್ರದೇಶದಲ್ಲಿ ಅಲರ್ಜಿಯನ್ನು ಉಂಟುಮಾಡುವ ಕಿಣ್ವವಾದ ಫ್ರಕ್ಟಾನ್‌ನಿಂದ ತುಂಬಿರುತ್ತವೆ. ಮಿತವಾಗಿ ಪಿಸ್ತಾ ಸೇವನೆಯು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಪಿಸ್ತಾವನ್ನು ಅತಿಯಾಗಿ ತಿನ್ನುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆಯಿದೆ.

ಪಿಸ್ತಾಗಳಲ್ಲಿ ಕ್ಯಾಲೋರಿ ಅತ್ಯಂತ ಹೆಚ್ಚು. ನೀವು ಪಿಸ್ತಾವನ್ನು ಹೆಚ್ಚು ತಿಂದರೆ ಅದರಿಂದ ಜೀರ್ಣಕ್ರಿಯೆಯ ಸಮಸ್ಯೆ ಉಂಟಾಗುತ್ತದೆ. ಮೂತ್ರಪಿಂಡದ ಕಾಯಿಲೆ ಇರುವವರು ಆಹಾರದಲ್ಲಿ ಹೆಚ್ಚಿನ ಪೊಟ್ಯಾಸಿಯಮ್ ಸೇವನೆಯನ್ನು ತಪ್ಪಿಸಬೇಕು.




