- Kannada News Photo gallery Cricket photos Australia Playing XI 1st Test: Cameron Green out of Nagpur Test
India vs Australia 1st: ಮೊದಲ ಟೆಸ್ಟ್ಗೂ ಮುನ್ನ ಆಸ್ಟ್ರೇಲಿಯಾಗೆ ಡಬಲ್ ಶಾಕ್
Australia Playing XI 1st Test: ತಂಡದಲ್ಲಿ ಹೊಸ ಆಟಗಾರರಿದ್ದು, ಇವರ್ಯಾರು ಭಾರತೀಯ ಪಿಚ್ನಲ್ಲಿ ಆಡಿದ ಅನುಭವನ್ನು ಹೊಂದಿಲ್ಲ. ಇದುವೇ ಈಗ ಆಸ್ಟ್ರೇಲಿಯಾ ತಂಡದ ಚಿಂತೆಗೆ ಕಾರಣವಾಗಿದೆ.
Updated on:Feb 07, 2023 | 4:12 PM

ಭಾರತ-ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಯು ಫೆಬ್ರವರಿ 9 ರಿಂದ ಶುರುವಾಗಲಿದೆ. ನಾಲ್ಕು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯಕ್ಕೆ ನಾಗಪುರದ ವಿದರ್ಭ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಆದರೆ ಈ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದ ಇಬ್ಬರು ಪ್ರಮುಖ ಆಟಗಾರರು ಅಲಭ್ಯರಾಗುವುದು ಖಚಿತವಾಗಿದೆ.

ಹೌದು, ಟೀಮ್ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಯುವ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅಲಭ್ಯರಾಗಲಿದ್ದಾರೆ ಎಂದು ಸ್ಟೀವ್ ಸ್ಮಿತ್ ತಿಳಿಸಿದ್ದಾರೆ.

ಇತ್ತೀಚೆಗೆ ಸೌತ್ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಕ್ಯಾಮರೋನ್ ಗ್ರೀನ್ ಅವರ ಬಲ ತೋರು ಬೆರಳಿಗೆ ಗಾಯವಾಗಿತ್ತು. ಇದಾಗ್ಯೂ ಅವರನ್ನು ಭಾರತದ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆ ಮಾಡಿದ್ದರು. ಆದರೆ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿರದ ಕಾರಣ ಮೊದಲ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಮತ್ತೊಂದೆಡೆ ತಂಡದ ಪ್ರಮುಖ ವೇಗಿ ಜೋಶ್ ಹ್ಯಾಝಲ್‌ವುಡ್ ಕೂಡ ನಾಗಪುರ ಟೆಸ್ಟ್ನಲ್ಲಿ ಕಣಕ್ಕಿಳಿಯುವುದಿಲ್ಲ. ಕಳೆದ ತಿಂಗಳು ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಹ್ಯಾಝಲ್‌ವುಡ್ ಅವರ ಎಡಗಾಲಿಗೆ ಗಾಯವಾಗಿತ್ತು. ಈ ಗಾಯವು ಇನ್ನೂ ಕೂಡ ಸಂಪೂರ್ಣವಾಗಿ ಗುಣವಾಗಿರದ ಕಾರಣ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಇತ್ತ ಪ್ರಮುಖ ಆಲ್ರೌಂಡರ್ ಗ್ರೀನ್ ಹಾಗೂ ಮುಖ್ಯ ವೇಗಿ ಹ್ಯಾಝಲ್‌ವುಡ್ ಹೊರಗುಳಿಯುತ್ತಿರುವುದು ಆಸೀಸ್ ತಂಡದ ನಾಯಕನ ಚಿಂತೆಯನ್ನು ಹೆಚ್ಚಿಸಿದೆ. ಏಕೆಂದರೆ ತಂಡದಲ್ಲಿ ಹೊಸ ಆಟಗಾರರಿದ್ದು, ಇವರ್ಯಾರು ಭಾರತೀಯ ಪಿಚ್ನಲ್ಲಿ ಆಡಿದ ಅನುಭವನ್ನು ಹೊಂದಿಲ್ಲ. ಇದುವೇ ಈಗ ಆಸ್ಟ್ರೇಲಿಯಾ ತಂಡದ ಚಿಂತೆಗೆ ಕಾರಣವಾಗಿದೆ.

ಆಸ್ಟ್ರೇಲಿಯಾ ಟೆಸ್ಟ್ ತಂಡ ಹೀಗಿದೆ: ಪ್ಯಾಟ್ ಕಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ , ಕ್ಯಾಮರೋನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್ , ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ , ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್ , ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾಮಿ , ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.
Published On - 4:11 pm, Tue, 7 February 23
