Samantha: ‘ಶಾಕುಂತಲಂ’ ಪ್ರಚಾರದಲ್ಲಿ ಸಮಂತಾ ಬ್ಯುಸಿ; ಮೊದಲಿನಂತೆ ಆ್ಯಕ್ಟೀವ್​ ಆದ ಟಾಲಿವುಡ್​ ಸುಂದರಿ

Updated on: Mar 21, 2023 | 4:48 PM

Shaakuntalam | Samantha Ruth Prabhu: ಏಪ್ರಿಲ್​ 14ರಂದು ‘ಶಾಕುಂತಲಂ’ ಸಿನಿಮಾ ತೆರೆಕಾಣಲಿದೆ. ಪೌರಾಣಿಕ ಕಥಾಹಂದರದ ಈ ಚಿತ್ರದಲ್ಲಿ ಸಮಂತಾ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.

1 / 5
ನಟಿ ಸಮಂತಾ ರುತ್​ ಪ್ರಭು ಅವರು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದಾರೆ. ಈಗ ಅವರು ಮೊದಲಿನಂತೆ ಆ್ಯಕ್ಟೀವ್​ ಆಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಹೊಸ ಹೊಸ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಿದ್ದಾರೆ.

ನಟಿ ಸಮಂತಾ ರುತ್​ ಪ್ರಭು ಅವರು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದಾರೆ. ಈಗ ಅವರು ಮೊದಲಿನಂತೆ ಆ್ಯಕ್ಟೀವ್​ ಆಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಹೊಸ ಹೊಸ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಿದ್ದಾರೆ.

2 / 5

ಸಮಂತಾ ರುತ್​ ಪ್ರಭು ನಟಿಸಿರುವ ‘ಶಾಕುಂತಲಂ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಏಪ್ರಿಲ್​ 14ರಂದು ಈ ಚಿತ್ರ ರಿಲೀಸ್​ ಆಗಲಿದೆ. ಈ ಸಿನಿಮಾದಲ್ಲಿ ಸಮಂತಾ ಅವರು ಶಕುಂತಲೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

3 / 5

ಸೋಶಿಯಲ್​ ಮೀಡಿಯಾದಲ್ಲಿ ಸಮಂತಾ ರುತ್​ ಪ್ರಭು ಅವರು ಆ್ಯಕ್ಟೀವ್​ ಆಗಿದ್ದಾರೆ. ‘ಶಾಕುಂತಲಂ’ ಸಿನಿಮಾದ ಪ್ರಚಾರದ ಸಲುವಾಗಿ ಅವರು ಹೊಸ ಫೋಟೋಶೂಟ್​ ಮಾಡಿಸಿದ್ದಾರೆ. ಆ ಫೋಟೋಗಳು ಅಭಿಮಾನಿಗಳ ವಲಯದಲ್ಲಿ ವೈರಲ್​ ಆಗಿವೆ.

4 / 5

ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಸಮಂತಾ ಮತ್ತೆ ಮೊದಲಿನಂತೆ ವರ್ಕೌಟ್​ ಆರಂಭಿಸಿದ್ದಾರೆ. ಪ್ರತಿ ದಿನ ಅವರು ತಪ್ಪದೇ ವ್ಯಾಯಾಮ ಮಾಡುತ್ತಾರೆ. ಅದರ ಬಗ್ಗೆ ಕೂಡ ಅವರು ಆಗಾಗ ಅಪ್​ಡೇಟ್​ ನೀಡುತ್ತಾ ಇರುತ್ತಾರೆ.

5 / 5

ಸಮಂತಾ ಅವರು ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಕೈಯಲ್ಲಿ ಹಲವು ಸಿನಿಮಾ ಆಫರ್​ಗಳಿವೆ. ವಿಜಯ್​ ದೇವರಕೊಂಡ ಜೊತೆ ‘ಖುಷಿ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಹಲವು ವೆಬ್​ ಸಿರೀಸ್​ಗಳಲ್ಲಿ ಅಭಿನಯಿಸುತ್ತಿದ್ದಾರೆ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us