ಸ್ಮಾರ್ಟ್ಫೋನ್ ದೈತ್ಯ ಸ್ಯಾಮ್ಸಂಗ್ (Samsung) ಕಂಪನಿ ಈಗೀಗ ತನ್ನ ಫೋನ್ಗಳ ಬೆಲೆಯನ್ನು ಉಳಿಕೆ ಮಾಡುತ್ತಿದೆ. ಇತ್ತೀಚೆಗಷ್ಟೆ ಗ್ಯಾಲಕ್ಸಿ A12 ಫೋನ್ ಬೆಲೆಯಲ್ಲಿ 1000 ರೂ. ಖಡಿತ ಮಾಡಿತ್ತು. ಇದೀಗ ಮೊನ್ನೆಯಷ್ಟೆ ಭಾರತದಲ್ಲಿ ರಿಲೀಸ್ ಆದ ಸ್ಯಾಮ್ಸಂಗ್ ಗ್ಯಾಲಕ್ಸಿ S21 FE 5G ಸ್ಮಾರ್ಟ್ಫೋನ್ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ.
ಗ್ಯಾಲಕ್ಸಿ S21 FE 5G ಫೋನ್ ಪ್ರಸ್ತುತ ಅಮೆಜಾನ್ನಲ್ಲಿ ನೀವು ಕೇವಲ 49,999ರೂ. ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್ಫೋನ್ ಮೇಲೆ ಹೆಚ್ಚುವರಿ 10% ಬ್ಯಾಂಕ್ ಆಫರ್ ಹಾಗೂ ಎಕ್ಸಚೇಂಜ್ ಆಫರ್ ಕೂಡ ಲಭ್ಯವಿದೆ. ಹೀಗಾಗಿ ಈ ಸ್ಮಾರ್ಟ್ಫೋನ್ ಬೆಲೆಯಲ್ಲಿ ಇನ್ನಷ್ಟು ಡಿಸ್ಕೌಂಟ್ ಪಡೆಯಬಹುದಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ S21 FE 5G ಸ್ಮಾರ್ಟ್ಫೋನ್ ಭಾರತದಲ್ಲಿ ಜನವರಿ 10ರಂದು ಬಿಡುಗಡೆ ಆಗಿತ್ತು. ಬಿಡುಗಡೆಯಾದಾಗ 8GB RAM + 128GB ಸ್ಟೋರೇಜ್ ಆಯ್ಕೆಯ ಬೆಲೆ 54,999 ರೂ. ಆಗಿತ್ತು. ಸದ್ಯ ಈ ಸ್ಮಾರ್ಟ್ಫೋನ್ ಅಮೆಜಾನ್ನಲ್ಲಿ 49,999 ರೂ. ಗಳಿಗೆ ಲಭ್ಯವಾಗುತ್ತಿದೆ. ಅಂದರೆ ಈ ಇದರ ಮೇಲೆ ನಿಮಗೆ 5,000 ರೂ.ಗಳಷ್ಟು ರಿಯಾಯಿತಿ ದೊರೆಯುತ್ತಿದೆ.
ಇದಲ್ಲದೆ 58,999 ರೂ.ಬೆಲೆ ಹೊಂದಿದ್ದು, 8GB RAM + 256GB ಸ್ಟೋರೇಜ್ ಮಾಡೆಲ್ ಇದೀಗ 53,999 ರೂ. ಗಳಿಗೆ ಮಾರಾಟವಾಗುತ್ತಿದೆ. ಅಮೆಜಾನ್ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಮತ್ತು ಅಮೆರಿಕನ್ ಎಕ್ಸ್ಪ್ರೆಸ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದವರಿಗೆ 10% ರಷ್ಟು ರಿಯಾಯಿತಿಯನ್ನು ನೀಡುತ್ತಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ S21 FE ಸ್ಮಾರ್ಟ್ಫೋನ್ 2340×1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.4-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. 5nm Exynos 2100 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದು ಇದು ಒನ್ ಯುಐ 4.0 ಆಧಾರಿತ ಆಂಡ್ರಾಯ್ಡ್ 12 ಔಟ್ ಆಫ್ ದಿ ಬಾಕ್ಸ್ನಲ್ಲಿ ಕಾರ್ಯನಿರ್ವಹಿಸಲಿದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12MP ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಎರಡನೇ ಕ್ಯಾಮೆರಾ 12MP ಅಲ್ಟ್ರಾವೈಡ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಮೂರನೇ ಕ್ಯಾಮೆರಾ 8MP 3x ಟೆಲಿಫೋಟೋ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 32MP ಫಿಕ್ಸೆಡ್ ಫೋಕಸ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ S21 FE 5G ಸ್ಮಾರ್ಟ್ಫೋನ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 25W ಸೂಪರ್-ಫಾಸ್ಟ್ ವೈರ್ಡ್ ಫಾಸ್ಟ್ ಚಾರ್ಜಿಂಗ್, 15W ವೈರ್ಲೆಸ್ ಫಾಸ್ಟ್ ಚಾರ್ಜಿಂಗ್ ಮತ್ತು ರಿವರ್ಸ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್, GPS/ A-GPS, ಮತ್ತು USB ಟೈಪ್-C ಪೋರ್ಟ್ ಸೇರಿವೆ.