ಸ್ಯಾಮ್ಸಂಗ್ನಿಂದ ವಿಭಿನ್ನ ಪ್ರಯತ್ನ: ಬರುತ್ತದೆ 200MP ಕ್ಯಾಮೆರಾದ ನೂತನ ಸ್ಮಾರ್ಟ್ಫೋನ್
Samsung Galaxy S24 Ultra features a 200-megapixel Camera: ತನ್ನ ಎಸ್ ಸರಣಿಯ ಅಡಿಯಲ್ಲಿ ವರ್ಷಕ್ಕೊಂದು ಫೋನ್ ಬಿಡುಗಡೆ ಮಾಡುವ ಸ್ಯಾಮ್‌ಸಂಗ್ ಮುಂದಿನ ವರ್ಷದ ಆರಂಭದಲ್ಲಿ S24 ಸರಣಿಯನ್ನು (Samsung Galaxy S24 Series) ರಿಲೀಸ್ ಮಾಡಲಿದೆ. ಇದೀಗ ಈ ಫೋನ್ನಲ್ಲಿ ವಿಶೇಷವಾದ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
1 / 7
ಸ್ಯಾಮ್‌ಸಂಗ್ ಕಂಪನಿಯ ಸ್ಮಾರ್ಟ್ಫೋನ್ಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಅದರಲ್ಲೂ ತನ್ನ ಎಸ್ ಸರಣಿಯ ಫೋನುಗಳನ್ನು ದೊಡ್ಡ ಮಟ್ಟದಲ್ಲಿ ಅನಾವರಣ ಮಾಡುತ್ತದೆ. ಸ್ಯಾಮ್‌ಸಂಗ್ ಈ ವರ್ಷದ ಆರಂಭದಲ್ಲಿ ಗ್ಯಾಲಕ್ಸಿ S23 ಸರಣಿಯನ್ನು ಬಿಡುಗಡೆ ಮಾಡಿತ್ತು. ಈ ಫೋನ್ ಈಗಲೂ ಟ್ರೆಂಡಿಂಗ್ನಲ್ಲಿದೆ.
2 / 7
ತನ್ನ ಎಸ್ ಸರಣಿಯ ಅಡಿಯಲ್ಲಿ ವರ್ಷಕ್ಕೊಂದು ಫೋನ್ ಬಿಡುಗಡೆ ಮಾಡುವ ಸ್ಯಾಮ್‌ಸಂಗ್ ಮುಂದಿನ ವರ್ಷದ ಫೆಬ್ರವರಿಯಲ್ಲಿ S24 ಸರಣಿಯನ್ನು ರಿಲೀಸ್ ಮಾಡಲಿದೆ. ಈ ಫೋನ್ನಲ್ಲಿ ವಿಶೇಷವಾದ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
3 / 7
ಈ ವರ್ಷದ ಆರಂಭದಲ್ಲಿ ಬಿಡುಗಡೆ ಆದ ಟಾಪ್-ಎಂಡ್ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್ಫೋನ್ನ ಕ್ಯಾಮೆರಾ ಕೂಡ ಅದ್ಭುತವಾಗಿತ್ತು. ಇದು 200-ಮೆಗಾಪಿಕ್ಸೆಲ್ನ ಸ್ಯಾಮ್‌ಸಂಗ್ ISOCELL HP2 ಸೆನ್ಸಾರ್ ಹೊಂದಿತ್ತು. ಇದು ಹಿಂದಿನ ಗ್ಯಾಲಕ್ಸಿ S22 ಅಲ್ಟ್ರಾದಲ್ಲಿನ 108-ಮೆಗಾಪಿಕ್ಸೆಲ್ ಸಂವೇದಕದ ಅಪ್‌ಗ್ರೇಡ್ ಆಗಿದೆ.
4 / 7
ಮುಂದಿನ ವರ್ಷದ ಗ್ಯಾಲಕ್ಸಿ S24 ಅಲ್ಟ್ರಾ ಮತ್ತಷ್ಟು ಕ್ಯಾಮೆರಾ ಸುಧಾರಣೆಯೊಂದಿಗೆ ಬಿಡುಗಡೆ ಆಗಲಿದೆಯಂತೆ. ಗ್ಯಾಲಕ್ಸಿ S24 ಅಲ್ಟ್ರಾದಲ್ಲಿ ಹೊಸದಾದ 200-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರಲಿದೆ. ಟಿಪ್‌ಸ್ಟರ್ ಐಸ್ ಯೂನಿವರ್ಸ್ (@UniverseIce) X (ಈ ಹಿಂದೆ Twitter) ನಲ್ಲಿ ಗ್ಯಾಲಕ್ಸಿ S24 ಅಲ್ಟ್ರಾದ ಕ್ಯಾಮೆರಾ ಫೀಚರ್ಸ್ ಅನ್ನು ಬಹಿರಂಗ ಪಡಿಸಿದ್ದಾರೆ.
5 / 7
ಟಿಪ್‌ಸ್ಟರ್ ಪ್ರಕಾರ, ಸ್ಯಾಮ್‌ಸಂಗ್‌ನ 2024 ಫ್ಲ್ಯಾಗ್‌ಶಿಪ್ ಸ್ಮಾರ್ಟ್ಫೋನ್ 200-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL HP2SX ಸಂವೇದಕವನ್ನು ಹೊಂದಿರುತ್ತದೆ. ಈ ಇಮೇಜ್ ಸಂವೇದಕವು ಗ್ಯಾಲಕ್ಸಿ S23 ಅಲ್ಟ್ರಾದ ISOCELL HP2 ಸಂವೇದಕದ ಆಪ್ಟಿಮೈಸ್ಡ್ ಆವೃತ್ತಿಯಾಗಿದೆ. ಇದು 1/1.3 ಆಪ್ಟಿಕಲ್ ಫಾರ್ಮ್ಯಾಟ್‌ನಲ್ಲಿ 200 ಮಿಲಿಯನ್ ಪಿಕ್ಸೆಲ್‌ಗಳನ್ನು ಒಳಗೊಂಡಿರುತ್ತದಂತೆ. ಮತ್ತು 0.6-ಮೈಕ್ರಾನ್ ಪಿಕ್ಸೆಲ್‌ಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
6 / 7
200-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದ ಜೊತೆಗೆ, ಗ್ಯಾಲಕ್ಸಿ S24 ಅಲ್ಟ್ರಾ ಫೋನಿನಲ್ಲಿ ಹೊಸ ಟೆಲಿಫೋಟೋ ಲೆನ್ಸ್ ಕೂಡ ನೀಡಲಾಗುತ್ತದೆ. 3x ಆಪ್ಟಿಕಲ್ ಜೂಮ್‌ನೊಂದಿಗೆ 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಪ್ಯಾಕ್ ಮಾಡಲಿದೆ. ಸ್ನಾಪ್ಡ್ರಾಗನ್ 8 Gen 3 ಪ್ರೊಸೆಸರ್ ಇರುವ ಸಾಧ್ಯತೆ ಇದೆ. ಗ್ಯಾಲಕ್ಸಿ S24 ಮತ್ತು ಗ್ಯಾಲಕ್ಸಿ S24+ ನಲ್ಲಿ ಎಕ್ಸಿನೊಸ್ 2400 SoC ಯೊಂದಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
7 / 7
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 24 ಸರಣಿಯಲ್ಲಿ ಟೈಟಾನಿಯಂ ಫ್ರೇಮ್‌ಗಳನ್ನು ಬಳಸಲಾಗಿದೆ ಎಂದು ಹೇಳಲಾಗಿದೆ. ಇದು ಅಲ್ಯೂಮಿನಿಯಂ ಚಾಸಿಸ್ ಅನ್ನು ಹೊಂದಿವೆ. ಇದಲ್ಲದೆ, ಗ್ಯಾಲಕ್ಸಿ S24 ಆಲ್ಟ್ರಾ ದೀರ್ಘ ಸಮಯ ಬಾಳಕೆ ಬರುವ ಬಲಿಷ್ಠ ಬ್ಯಾಟರಿ ಅವಧಿಯನ್ನು ನೀಡಲು ಹೊಸ EV ಬ್ಯಾಟರಿ ತಂತ್ರಜ್ಞಾನದೊಂದಿಗೆ ಬರುತ್ತದೆ ಎಂಬ ಮಾಹಿತಿ ಕೂಡ ಸೋರಿಕೆ ಆಗಿದೆ.