
ಥಾಯ್ಲೆಂಡ್ನ ಕೋಹ್ ಪಂಗೋನ್ ದ್ವೀಪದಲ್ಲಿ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಸಂಯುಕ್ತಾ ಹೆಗ್ಡೆ

ಮಾದಕ ಉಡುಗೆ, ಬೆರಳಿಗೆ ಉಂಗುರ, ಕೇಕು ಜೊತೆಗೆ ವೈನು, ವೋಡ್ಕ ಸಂಯುಕ್ತಾರ ಹುಟ್ಟುಹಬ್ಬ ಜೋರಾಗಿಯೇ ನಡೆದಿದೆ.

ತಮಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿರುವವರಿಗೆ ಧನ್ಯವಾದಗಳನ್ನು ಸಂಯುಕ್ತಾ ತಿಳಿಸಿದ್ದಾರೆ.

ತಮ್ಮ ಹುಟ್ಟುಹಬ್ಬ ಶುರುವಾದ ಬಗೆ ಹಾಗೂ ಅಂತ್ಯವಾದ ಬಗೆ ಹೇಗಿತ್ತೆಂದು ಚಿತ್ರಗಳಲ್ಲಿ ಹೇಳಿದ್ದಾರೆ ಸಂಯುಕ್ತಾ.

ಕೇಕಿಕೊಂದಿಗೆ ಶುರುವಾದ ಸಂಯುಕ್ತಾರ ಹುಟ್ಟುಹಬ್ಬ, ಮದ್ಯದ ನಶೆಯಲ್ಲಿ ಬೀದಿ ಬದಿಯ ಎಟಿಎಂ ಬಳಿ ನೆಲದಲ್ಲಿ ಕುಳಿತುಕೊಳ್ಳುವ ಮೂಲಕ ಅಂತ್ಯವಾಗಿದೆ.

ನನಗೆ ತೋಚಿದಂತೆ ಬದುಕಲು ಸಾಧ್ಯವಾಗುತ್ತಿರುವುದಕ್ಕೆ ಸಂತೋಶವನ್ನು ಸಂಯುಕ್ತಾ ವ್ಯಕ್ತಪಡಿಸಿದ್ದಾರೆ.

ಸಂಯುಕ್ತಾರ ಚಿತ್ರಗಳಿಗೆ ಕೆಲವರು ನೆಗೆಟಿವ್ ಕಮೆಂಟ್ಗಳನ್ನು ಸಹ ಹಾಕಿದ್ದಾರೆ.
Published On - 10:49 pm, Wed, 19 July 23