
ಸ್ಯಾಂಡಲ್ವುಡ್ ಬೆಡಗಿ ಆಶಾ ಭಟ್ ‘ರಾಬರ್ಟ್’ ಚಿತ್ರದಲ್ಲಿನ ಅಭಿನಯದಿಂದ ಎಲ್ಲರ ಮನಗೆದ್ದವರು. (Pic Credits: Asha Bhat/ Instagram)

ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಇರುವ ನಟಿ ಇತ್ತೀಚೆಗೆ ನಾಡಿನ ಹೆಮ್ಮೆಯ ಸಾಲುಮರದ ತಿಮ್ಮಕ್ಕ ಹಾಗೂ ಪದ್ಮಶ್ರೀ ತುಳಸಿ ಗೌಡ ಅವರೊಂದಿಗಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. (Pic Credits: Asha Bhat/ Instagram)

ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಆಶಾ ಭಟ್, ಈರ್ವರೂ ತಮ್ಮ ಜೀವನವನ್ನು ಬಹಳ ಪ್ರಭಾವಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. (Pic Credits: Asha Bhat/ Instagram)

ಪರಿಸರ ದಂತಕತೆಗಳ ನಡುವೆ ನಾವಿರುವುದು ನಮ್ಮ ಪುಣ್ಯ ಎಂದು ನಟಿ ಬರೆದುಕೊಂಡಿದ್ದಾರೆ. (Pic Credits: Asha Bhat/ Instagram)

ನಟಿ ಹಂಚಿಕೊಂಡಿರುವ ಚಿತ್ರಗಳು ಹಾಗೂ ಅವರ ಮಾತುಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. (Pic Credits: Asha Bhat/ Instagram)