ಬಾಗಲಕೋಟೆ: ಕಾಲೇಜಿನಲ್ಲಿ ಸಂಕ್ರಾಂತಿ ಸಿರಿ ವೈಭವ, ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು

Updated By: ಆಯೇಷಾ ಬಾನು

Updated on: Jan 14, 2024 | 2:44 PM

ಬಾಗಲಕೋಟೆಯ ಬಿವಿವಿ ಸಂಘದ ಬಸವೇಶ್ವರ ಪದವಿ ಕಲಾ ಹಾಗೂ ವಾಣಿಜ್ಯ ವಿದ್ಯಾಲಯದಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಯುವತಿಯರು ಇಳಕಲ್ ಸೀರೆಯುಟ್ಟು ಸಂಭ್ರಮಿಸಿದ್ರೆ, ಯುವಕರು ಬಿಳಿ ಪಂಚೆ, ಜುಬ್ಬಾದಲ್ಲಿ ಮಿಂಚಿದ್ದಾರೆ.

1 / 8

2 / 8
ಬಸವೇಶ್ವರ ಪದವಿ ಕಲಾ ವಿಭಾಗ ಹಾಗೂ ವಾಣಿಜ್ಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಸಂಭ್ರಮದಲ್ಲಿ ತೇಲಾಡಿದ್ದಾರೆ. ಇದಕ್ಕೆ ಕಾರಣ  "ಸಂಕ್ರಾಂತಿ ಸಿರಿ" ಆಚರಣೆ. ಸಂಕ್ರಾಂತಿ ಸಿರಿ ಆಚರಣೆ ಹಿನ್ನೆಲೆ ಎಲ್ಲ ವಿದ್ಯಾರ್ಥಿನಿಯರು ಇಳಕಲ್  ಸೀರೆಯಲ್ಲಿ ಮಿಂಚುತ್ತಿದ್ದರೆ, ವಿದ್ಯಾರ್ಥಿಗಳು ಪಂಚೆ, ಜುಬ್ಬಾದಲ್ಲಿ ಕಂಗೊಳಿಸುತ್ತಿದ್ದರು.

3 / 8
ಕಲರ್ ಪುಲ್ ರಂಗೋಲಿ ಬಿಡಿಸಿ ಕಾಲೇಜು ಅಂದವನ್ನು ವಿದ್ಯಾರ್ಥಿನಿಯರು ಹೆಚ್ಚಿಸಿದ್ದರು. ನಮ್ಮ ದೇಶಿ ಸಂಸ್ಕೃತಿ ಉಳಿಸಿ ಬೆಳೆಸುವ ಉದ್ದೇಶ ವಿದ್ಯಾರ್ಥಿಗಳಿಗೆ ಅದರ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆ ಕಾಲೇಜು ಆಡಳಿತ ಮಂಡಳಿ ಸಂಕ್ರಾಂತಿ ಸಂಭ್ರಮ ಆಯೋಜಿಸಿತ್ತು.

4 / 8
ಸಂಕ್ರಾಂತಿ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ವಿಶೇಷ ಸ್ಥಾನಮಾನವಿದೆ, ಮಹತ್ವವಿದೆ. ಕರ್ನಾಟಕದಲ್ಲಿ ಸಂಕ್ರಾಂತಿ ಸಡಗರ ಇನ್ನು ಹೆಚ್ಚು ಅಂತಾನೆ ಹೇಳಬಹುದು. ಅದೇ ಪ್ರಕಾರ ಬಿವಿವಿ ಸಂಘದಲ್ಲಿ ಸಂಕ್ರಾಂತಿ ಸಡಗರವೇ ಆವರಿಸಿತ್ತು. ಹಗ್ಗಜಗ್ಗಾಟ, ಜನಪದ ಹಾಡುಗಳಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿ ಸಂಭ್ರಮಿಸಿದರು.

5 / 8
ರಂಗೋಲಿ ಹಾಕಿ ಕಾಲೇಜಿಗೆ ಮೆರುಗು ನೀಡಿದ್ದು ಒಂದು ಕಡೆ  ಆದ್ರೆ, ಮನೆಯಿಂದ ಪ್ರೊಫೆಸರ್ ಗಳು ವಿದ್ಯಾರ್ಥಿಗಳು  ಉತ್ತರಕರ್ನಾಟಕದ ಹೋಳಿಗೆ ಖಡಕ್ ರೊಟ್ಟಿ, ಕಡಬು, ಚಟ್ನಿ ತರಕಾರಿ ಸೇರಿದಂತೆ ಜವಾರಿ ಊಟ ತಯಾರಿಸಿ ತಂದಿದ್ದರು. ತಾವೆ ಖುದ್ದಾಗಿ ತಯಾರಿಸಿ ತಂದಿದ್ದು ವಿಶೇಷವಾಗಿತ್ತು.

6 / 8
ತಂದಿದ್ದ ಆಹಾರ ಪದಾರ್ಥವನ್ನು ಕಾಲೇಜು ಉಪನ್ಯಾಸಕರೆಲ್ಲರೂ ಒಂದೆ ಕಡೆ ಕುಳಿತು ಒಟ್ಟಾಗಿ ಸವಿದರು. ದಿನಾಲು ಕಾಲೇಜು, ಕ್ಲಾಸ್ ಅಂತಿದ್ದ ವಿದ್ಯಾರ್ಥಿಗಳಿಗೆ ಸಂಕ್ರಾಂತಿ ಸಂಭ್ರಮ ವಿಭಿನ್ನ ಅನುಭವ ನೀಡ್ತು.

7 / 8
ಕಲರ್ ಕಲರ್ ಸೀರೆಯಲ್ಲಿ ಗಾಗಲ್ಸ್ ಹಾಕಿ ಪೋಜ್‌ನೀಡಿದ ವಿದ್ಯಾರ್ಥಿನಿಯರು, ಪಂಚೆಯಲ್ಲಿ ಮಿಂಚುತ್ತಿದ್ದ ವಿದ್ಯಾರ್ಥಿಗಳು ಸಂಕ್ರಾಂತಿ ಹಬ್ಬವನ್ನು ಎಂಜಾಯ್ ಮಾಡಿ ಹರ್ಷ ವ್ಯಕ್ತಪಡಿಸಿದರು..

8 / 8
ಒಟ್ಟಿನಲ್ಲಿ ದಿನಾಲು ಕಾಲೇಜು, ಅಸೈನ್ಮೆಂಟ್ ಅಂತಿದ್ದ ಕ್ಯಾಂಪಸ್ ನಲ್ಲಿ ಸಂಕ್ರಾಂತಿ ಕಳೆ ಮೈದಳೆದಿತ್ತು. ಎಲ್ಲ ವಿದ್ಯಾರ್ಥಿಗಳು ಸಂಕ್ರಾಂತಿ ಆಚರಿಸೋದರ ಜೊತೆಗೆ ದೇಶಿ ಸಂಸ್ಕೃತಿ ಬಿಂಬಿಸಿದ್ದು ಶ್ಲಾಘನೀಯ.