Nothing Phone 2a: ಸಖತ್ ಸೌಂಡ್ ಮಾಡುತ್ತಿದೆ ನಥಿಂಗ್ ಫೋನ್ 2a ಸ್ಮಾರ್ಟ್‌ಫೋನ್: ಹೇಗಿರಲಿದೆ?
Nothing Phone 2a release date: ನಥಿಂಗ್ ಫೋನ್ 2a ಕೆಲವೇ ವಾರಗಳಲ್ಲಿ ಅನಾವರಣಗೊಳ್ಳಲಿದೆ. ಈ ಫೋನ್‌ಗೆ ಸಂಬಂಧಿಸಿದ ಹಲವು ವಿವರಗಳನ್ನು ಇತ್ತೀಚೆಗೆ ಟಿಪ್‌ಸ್ಟರ್‌ಗಳು ಸೋರಿಕೆ ಮಾಡಿದ್ದಾರೆ. ಫೆಬ್ರವರಿಯಲ್ಲಿ ನಥಿಂಗ್ ಫೋನ್ 2A ಫೋನ್ ಅನ್ನು ಬಿಡುಗಡೆ ಮಾಡಲು ಕಂಪನಿ ನಿಗದಿಪಡಿಸಿದೆ. ಈ ಫೋನ್ ಕುರಿತ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ.
Updated on: Jan 15, 2024 | 6:55 AM

ಲಂಡನ್ ಮೂಲದ ಟೆಕ್ ಕಂಪನಿ ನಥಿಂಗ್ ಈವರೆಗೆ ಕೇವಲ ಎರಡೇ ಫೋನುಗಳನ್ನು ಬಿಡುಗಡೆ ಮಾಡಿದ್ದರೂ ಇದಕ್ಕೆ ಭರ್ಜರಿ ಬೇಡಿಕೆ ಇದೆ. ಈ ವರ್ಷ ಕಂಪನಿ ನಥಿಂಗ್ ಫೋನ್ 2 ರಿಲೀಸ್ ಮಾಡಿತ್ತು. ಇದೀಗ ಕಂಪನಿ ನಥಿಂಗ್ ಫೋನ್ 2 ಅಡಿಯಲ್ಲಿ ಹೊಸ ನಥಿಂಗ್ ಫೋನ್ 2a ಸ್ಮಾರ್ಟ್‌ಫೋನ್ ರಿಲೀಸ್ ಮಾಡಲಿದೆ.

ನಥಿಂಗ್ ಫೋನ್ 2a ಕೆಲವೇ ವಾರಗಳಲ್ಲಿ ಅನಾವರಣಗೊಳ್ಳಲಿದೆ. ಈ ಫೋನ್‌ಗೆ ಸಂಬಂಧಿಸಿದ ಹಲವು ವಿವರಗಳನ್ನು ಇತ್ತೀಚೆಗೆ ಟಿಪ್‌ಸ್ಟರ್‌ಗಳು ಸೋರಿಕೆ ಮಾಡಿದ್ದಾರೆ. ನಥಿಂಗ್ ಫೋನ್ 2a ಕುರಿತ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ.

ನಥಿಂಗ್‌ನ ಈ ಸ್ಮಾರ್ಟ್‌ಫೋನ್ 6.7 ಇಂಚಿನ FHD OLED ಡಿಸ್ಪ್ಲೇಯನ್ನು ಹೊಂದಿರುತ್ತದೆ, ಇದು 120Hz ನ ರಿಫ್ರೆಶ್ ದರ ಮತ್ತು 4950mAh ಬ್ಯಾಟರಿಯನ್ನು ಹೊಂದಿರುತ್ತದೆ. ಇದು 33 ಅಥವಾ 45 ವ್ಯಾಟ್ ವೇಗದ ಚಾರ್ಜರ್ ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ, ನಥಿಂಗ್ ಫೋನ್ 2A 50+50MP ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 16MP ಮುಂಭಾಗದ ಕ್ಯಾಮೆರಾವನ್ನು ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ ನೀಡಲಾಗಿದೆ.

ನಥಿಂಗ್‌ನ ಈ ಸ್ಮಾರ್ಟ್‌ಫೋನ್ ಅನ್ನು ಫೆಬ್ರವರಿ 27 ರಂದು ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಅನಾವರಣಗೊಳಿಸಲಾಗುತ್ತದೆ. ಈ ಮೊದಲು, ಜನವರಿಯಲ್ಲಿ ಈ ಫೋನ್ ಅನ್ನು ಬಿಡುಗಡೆ ಮಾಡಲು ನಥಿಂಗ್ ತಯಾರಿ ನಡೆಸಿತ್ತು. ಆದರೆ ಜನವರಿಯಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಲಿರುವ ದೃಷ್ಟಿಯಿಂದ, ಫೆಬ್ರವರಿಯಲ್ಲಿ ನಥಿಂಗ್ ಫೋನ್ 2A ಫೋನ್ ಅನ್ನು ಬಿಡುಗಡೆ ಮಾಡಲು ಕಂಪನಿ ನಿಗದಿಪಡಿಸಿದೆ.

ನಥಿಂಗ್‌ನ ಹಳೆಯ ಫೋನ್‌ಗಳಂತೆ, ನಥಿಂಗ್ ಫೋನ್ 2A ವಿಭಿನ್ನ ಲುಕ್ ಹೊಂದಿದೆ. ಇದರಲ್ಲಿ ಲೋಹದ ಚೌಕಟ್ಟನ್ನು ನೀಡಬಹುದು. ಈ ಫೋನ್‌ನ ಹಿಂದಿನ ಪ್ಯಾನೆಲ್‌ನಲ್ಲಿ ಯಾವುದೇ ಪಾರದರ್ಶಕ ಗಾಜನ್ನು ನೀಡಲಾಗುವುದಿಲ್ಲ. ಆದರೆ, ಈ ಎಲ್ಲಾ ಮಾಹಿತಿಯು ಸೋರಿಕೆಯನ್ನು ಆಧರಿಸಿದೆ. ಸದ್ಯ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
























