ನಿರಂತರ ಮಳೆ, ಮೈ ಕೊರೆಯುವ ಚಳಿಯಲ್ಲಿ ಸಾನ್ಯಾ ಐಯ್ಯರ್ ಟ್ರೆಕ್ಕಿಂಗ್; ಫೋಟೋ ಹಂಚಿಕೊಂಡ ನಟಿ

Updated on: Jul 14, 2023 | 8:41 AM

ಸಾನ್ಯಾ ಐಯ್ಯರ್ ಅವರು ಕಾಶ್ಮೀರಕ್ಕೆ ತೆರಳಿದ್ದಾರೆ. ಒಂದು ಕಡೆ ಮಳೆ. ಮತ್ತೊಂದು ಕಡೆ ಕೊರೆವ ಚಳಿ. ಇದರ ಮಧ್ಯೆ ಅವರು ಟ್ರೆಕ್ಕಿಂಗ್ ಮಾಡಿದ್ದಾರೆ.

1 / 6
ನಟಿ ಸಾನ್ಯಾ ಐಯ್ಯರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ಫೋಟೋಗಳನ್ನು ಫ್ಯಾನ್ಸ್​ಗೋಸ್ಕರ ಹಂಚಿಕೊಳ್ಳುತ್ತಾರೆ. ನಿತ್ಯ ಏನು ಮಾಡುತ್ತೇನೆ ಎನ್ನುವ ಬಗ್ಗೆ ಅವರು ಅಪ್​ಡೇಟ್ ನೀಡುತ್ತಾರೆ.

ನಟಿ ಸಾನ್ಯಾ ಐಯ್ಯರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ಫೋಟೋಗಳನ್ನು ಫ್ಯಾನ್ಸ್​ಗೋಸ್ಕರ ಹಂಚಿಕೊಳ್ಳುತ್ತಾರೆ. ನಿತ್ಯ ಏನು ಮಾಡುತ್ತೇನೆ ಎನ್ನುವ ಬಗ್ಗೆ ಅವರು ಅಪ್​ಡೇಟ್ ನೀಡುತ್ತಾರೆ.

2 / 6

ಈಗ ಸಾನ್ಯಾ ಐಯ್ಯರ್ ಅವರು ಕಾಶ್ಮೀರಕ್ಕೆ ತೆರಳಿದ್ದಾರೆ. ಒಂದು ಕಡೆ ಮಳೆ. ಮತ್ತೊಂದು ಕಡೆ ಕೊರೆವ ಚಳಿ. ಇದರ ಮಧ್ಯೆ ಅವರು ಟ್ರೆಕ್ಕಿಂಗ್ ಮಾಡಿದ್ದಾರೆ.

3 / 6

ಈ ವಿಡಿಯೋ ಹಾಗೂ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

4 / 6

‘ಭಾರೀ ಮಳೆ ನಿರಂತರ 5 ಕಿಮೀ ಟ್ರೆಕ್ಕಿಂಗ್. ಹುಲ್ಲುಗಾವಲುಗಳು ಮತ್ತು ತೊರೆಗಳ ಮೂಲಕ ಮೇಲೇರಿದ್ದೇವೆ. ಮೊದಲ ದಿನದ ಅರ್ಧದಲ್ಲೇ ಸಾಕಷ್ಟು ನೋಡಿದ್ದೇವೆ. ಇನ್ನೂ ನೋಡಲು ಬಹಳಷ್ಟಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

5 / 6

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಸಾಕಷ್ಟು ಅವಾಂತರ ಆಗಿದೆ. ಈಗ ಕಾಶ್ಮೀರದಲ್ಲೂ ಮಳೆ ಆಗುತ್ತಿದೆ. ಹೀಗಾಗಿ ಸಾನ್ಯಾ ಐಯ್ಯರ್ ಅವರಿಗೆ ಎಚ್ಚರಿಕೆಯಿಂದ ಇರುವಂತೆ ಅನೇಕರು ಕೋರಿದ್ದಾರೆ.

6 / 6

ಬಿಗ್ ಬಾಸ್​ಗೆ ಕಾಲಿಟ್ಟ ಬಳಿಕ ಸಾನ್ಯಾ ಐಯ್ಯರ್ ಅವರ ಖ್ಯಾತಿ ಹೆಚ್ಚಿತು. ಅವರ ಅಭಿಮಾನಿ ಬಳಗ ದೊಡ್ಡದಾಯಿತು.

Published On - 8:40 am, Fri, 14 July 23

Loading...
Unable to load recommendations.
Follow Us