ರಶ್ಮಿಕಾ ಡೀಪ್ ಫೇಕ್ ವಿಡಿಯೋ: ಸಪ್ತ ಸಾಗರ ನಟಿಯರು ಪ್ರತಿಕ್ರಿಯಿಸಿದ್ದು ಹೀಗೆ

Updated on: Nov 09, 2023 | 10:35 PM

Deep Fake Video: ರಶ್ಮಿಕಾ ಮಂದಣ್ಣರ ಡೀಪ್ ಫೇಕ್ ವಿಡಿಯೋ ಹರಿಬಿಟ್ಟಿರುವ ದುಷ್ಕೃತ್ಯವನ್ನು ಹಲವು ಸೆಲೆಬ್ರಿಟಿಗಳು ಖಂಡಿಸಿದ್ದು, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾದ ನಾಯಕಿಯರಾದ ಚೈತ್ರಾ ಹಾಗೂ ರುಕ್ಮಿಣಿ ಅವರುಗಳು ಈ ಬಗ್ಗೆ ಮಾತನಾಡಿದ್ದಾರೆ.

1 / 6
ರಶ್ಮಿಕಾ ಮಂದಣ್ಣರ ಡೀಪ್ ಫೇಕ್ ವಿಡಿಯೋ ಬಹಳ ಸದ್ದು ಮಾಡುತ್ತಿದೆ. ಹಲವು ಸೆಲೆಬ್ರಿಟಿಗಳು ಇದನ್ನು ವಿರೋಧಿಸಿದ್ದಾರೆ.

2 / 6
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನಟಿಯರಾದ ಚೈತ್ರಾ ಆಚಾರ್ ಹಾಗೂ ರುಕ್ಮಿಣಿ ವಸಂತ್ ಸಹ ಈ ದುಷ್ಕೃತ್ಯವನ್ನು ಖಂಡಿಸಿದ್ದಾರೆ.

3 / 6
ಇಂತಹ ವಿಡಿಯೋಗಳನ್ನು ಸೃಷ್ಠಿಸುವುದು ದೊಡ್ಡ ಅಪರಾಧ. ಎಲ್ಲಾ ರೀತಿಯಲ್ಲೂ ಇದನ್ನು ಖಂಡಿಸಬೇಕು. ಇಂತಹವರಿಗೆ ಮೊದಲು ಬಲಿಯಾಗುವುದು ನಟ-ನಟಿಯರೇ. ವಿಡಿಯೋ ಮಾಡುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದಿದ್ದಾರೆ ರುಕ್ಮಿಣಿ ವಸಂತ್.

4 / 6
ಇದೇ ವಿಷಯವಾಗಿ ಮಾತನಾಡಿದ ನಟಿ ಚೈತ್ರಾ ಆಚಾರ್ ‘ಹೀಗೆಲ್ಲ ಪೋಸ್ಟ್ ಮಾಡುವುದು ತಪ್ಪು ನಟ-ನಟಿಯರಿಗೆ ಆಗುವುದು ಸಾಮಾನ್ಯ, ಚಿಕ್ಕ ಯುವಕರಿಗೆ ಹೀಗಾದರೆ ಅವರು ಏನು ಮಾಡಬೇಕು ಎಂದು ಆತಂಕ ವ್ಯಕ್ತಪಡಿಸಿದರು.

5 / 6
ಹೈದರಾಬಾದ್​ನಲ್ಲಿ ನಡೆದ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ನಟಿಯರು ಈ ಬಗ್ಗೆ ಮಾತನಾಡಿದ್ದಾರೆ.

6 / 6
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾ ನವೆಂಬರ್ 17ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗುತ್ತಿದೆ.

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us